Saturday, August 23, 2025
Google search engine
HomeUncategorizedCongress Star Campaign : ಇಂದು ವರುಣಾ ಕ್ಷೇತ್ರಕ್ಕೆ ಪ್ರಿಯಾಂಕ ಗಾಂಧಿ ಎಂಟ್ರಿ

Congress Star Campaign : ಇಂದು ವರುಣಾ ಕ್ಷೇತ್ರಕ್ಕೆ ಪ್ರಿಯಾಂಕ ಗಾಂಧಿ ಎಂಟ್ರಿ

ಮೈಸೂರು: ಎಲೆಕ್ಷನ್​ ಹತ್ತಿರವಾದಂತೆ ರಾಷ್ಟ್ರೀಯ ನಾಯಕರು ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಹೌದು, ಇಂದು ಪ್ರಿಯಾಂಕ ವಾದ್ರಾ ಇಂದಿನಿಂದ ರಾಜ್ಯದಲ್ಲಿ ಚುನಾವಣಾ ಪ್ರಚಾರ ನೆಡಸಲಿದ್ದಾರೆ.

ಇನ್ನೂ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಪ್ರಚಾರವನ್ನು ಆರಂಭಿಸಲಿರುವ ಪ್ರಿಯಾಂಕ ಬಳಿಕ ಚಾಮರಾಜನಗರ ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಮತಬೇಟಿಯಾಡಲಿದ್ದಾರೆ.

ವರುಣಾ ಕ್ಷೇತ್ರದ ಹೆಳವರ ಹುಂಡಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದ ಬಳಿಕ ಚಾಮರಾಜನಗರ ಜಿಲ್ಲೆಯ ಹನೂರ ಕ್ಷೇತ್ರದಲ್ಲಿ ಮಹಿಳೆಯರ ಜೊತೆ ಸಂವಾದ ನಡೆಸಲಿದ್ದಾರೆ. ಇನ್ನೂ ಸಂಜೆ ಕೆ.ಆರ್​ ನಗರ ಕ್ಷೇತ್ರದಲ್ಲಿ ನೆಡಯುವ ರೋಡ್​ ಶೋದಲ್ಲಿ ಭಾಗಿಯಾಗಲಿದ್ದಾರೆ.

ಹೀಗಿದೆ ಪ್ರಿಯಾಂಕ ಶೆಡ್ಯೂಲ್ 

ಬೆಳಗ್ಗೆ 11.30ಕ್ಕೆ ಸುತ್ತೂರು ಹೆಲಿಪ್ಯಾಡ್‌ಗೆ ಆಗಮನ.
ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಸಾರ್ವಜನಿಕರ ಸಭೆಯಲ್ಲಿ ಭಾಗಿ
ಟಿ ನರಸೀಪುರ ತಾಲ್ಲೂಕಿನ ಹೆಳವರಹುಂಡಿಯಲ್ಲಿ ಸಭೆ
ಟಿ ನರಸೀಪುರ ಕಾಂಗ್ರೆಸ್ ಅಭ್ಯರ್ಥಿ ಡಾ ಹೆಚ್ ಸಿ‌ ಮಹದೇವಪ್ಪ‌ ಪರ‌ ಮತಯಾಚನೆ
ಮಧ್ಯಾಹ್ನ 2:30ಕ್ಕೆ ಟಿ ನರಸೀಪುರದಿಂದ ಹನೂರಿಗೆ ಹೊರಡಲಿರುವ ಪ್ರಿಯಾಂಕಾ ಗಾಂಧಿ
ಸಂಜೆ 05:30 ರಿಂದ 6:30 ಕೆ ಆರ್ ನಗರದಲ್ಲಿ ರೋಡ್ ಶೋ‌
ಕೈ ಅಭ್ಯರ್ಥಿ ರವಿಶಂಕರ್ ಪರ ಮತಯಾಚನೆ
ಕೆ ಆರ್ ನಗರದ ತೋಪಮ್ಮನ ದೇವಸ್ಥಾನ, ಅಂಬೇಡ್ಕರ್ ಪುತ್ಥಳಿ ಮಾರ್ಗವಾಗಿ ಸಾಗಿ
ಮುನ್ಸಿಪಾಲಿಟಿ ಆಫೀಸ್ ವೃತ್ತದವರೆಗೂ ಸುಮಾರು 2 ಕಿ.ಮೀ ಮೆರವಣಿಗೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments