Sunday, August 24, 2025
Google search engine
HomeUncategorizedಇನ್ಮೇಲೆ ಅಪ್ಪು-ರಾಘಣ್ಣ ಮನೆಯ ಬಳಿಯೇ ಇರ್ತಾರೆ ಉಪ್ಪಿ..!

ಇನ್ಮೇಲೆ ಅಪ್ಪು-ರಾಘಣ್ಣ ಮನೆಯ ಬಳಿಯೇ ಇರ್ತಾರೆ ಉಪ್ಪಿ..!

ಬೆಂಗಳೂರು : ಕಬ್ಜ ಹಿಟ್ ಆಗಿದ್ದೇ ತಡ ರಿಯಲ್ ಸ್ಟಾರ್ ಉಪೇಂದ್ರ, ಕತ್ರಿಗುಪ್ಪೆಯಿಂದ ಸದಾಶಿವನಗರಕ್ಕೆ ಶಿಫ್ಟ್ ಆಗಿಬಿಟ್ಟಿದ್ದಾರೆ. ಬರೋಬ್ಬರಿ 25 ಕೋಟಿ ಬೆಲೆ ಬಾಳುವ ಹೊಸ ಮನೆಯನ್ನು ಖರೀದಿಸಿರೋ ಉಪೇಂದ್ರ ದಂಪತಿ, ಇತ್ತೀಚೆಗೆ ಗೃಹಪ್ರವೇಶ ಮಾಡಿ, ನೂತನ ನಿವಾಸಕ್ಕೆ ಕಾಲಿಟ್ಟಿದ್ದಾರೆ.

ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಈವರೆಗೆ ಉಪೇಂದ್ರ ಏನು ಪಡ್ಕೊಂಡ್ರೋ ಅಥವಾ ಕಳೆದುಕೊಂಡ್ರೋ ಗೊತ್ತಿಲ್ಲ. ಆದರೆ, ಇದೇ ಮೊದಲ ಬಾರಿ ಇಂಡಿಯನ್ ರಿಯಲ್ ಸ್ಟಾರ್ ಆಗಿ ನ್ಯಾಷನಲ್ ಲೆವೆಲ್​ನಲ್ಲಿ ಗುರುತಿಸಿಕೊಂಡ ಉಪೇಂದ್ರ, ಕಬ್ಜ ಚಿತ್ರದ ಬಳಿಕ ಹೊಸ ಮನೆಯನ್ನು ಖರೀದಿಸಿದ್ದಾರೆ. ಅದೂ ಬರೋಬ್ಬರಿ 25 ಕೋಟಿಯ ಐಷಾರಾಮಿ ಬಂಗಲೆ ಅನ್ನೋದು ವಿಶೇಷ.

ಕಳೆದ ವಾರ ಸದಾಶಿವನಗರದಲ್ಲಿ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಗೃಹಪ್ರವೇಶ ಮಾಡುವ ಮೂಲಕ ನೂತನ ಮನೆಗೆ ಶಿಫ್ಟ್ ಆಗಿದ್ದಾರೆ. ಅದರ ಫೋಟೋಸ್ ವೈರಲ್ ಆಗಿದ್ದು, ಮನೆ ಕೂಡ ಭವ್ಯ ಬಂಗಲೆ ಅನ್ನೋದಕ್ಕೆ ಸಾಕ್ಷಿ ಆಗಿವೆ. ಈಗಾಗಲೇ ಕಟ್ಟಿರೋ ಮನೆಯನ್ನು ಖರೀದಿಸಿ, ತಮಗೆ ಬೇಕಾದಂತೆ ಇಂಟೀರಿಯರ್ಸ್​ ಮಾಡಿಸಿಕೊಂಡಿರೋ ಬುದ್ದಿವಂತ, ಹೊಸ ಮನೆಯಲ್ಲಿ ಹೊಸ ಜೀವನಕ್ಕೆ ಅಣಿಯಾಗಿದ್ದಾರೆ.

ಕತ್ರಿಗುಪ್ಪೆ ಟು ಸದಾಶಿವನಗರ ಶಿಫ್ಟ್

ಹಾಗಾದ್ರೆ, ಇಷ್ಟು ದಿನ ಉಪೇಂದ್ರ ವಾಸವಾಗಿದ್ದ ಕತ್ರಿಗುಪ್ಪೆ ನಿವಾಸದಲ್ಲಿ ಇನ್ಮೇಲೆ ಅವರು ಇರಲ್ವಾ ಅಂತಿರಾ. ಯೆಸ್, ಅಲ್ಲಿ ಉಪ್ಪಿ ಖಂಡಿತಾ ಇರಲ್ಲ. ಬೆಂಗಳೂರಿನ ಕೇಂದ್ರಬಿಂದು ಆಗಿರೋ ಸದಾಶಿವನಗರದಲ್ಲಿ ಆಲ್ಮೋಸ್ಟ್ ಆಲ್ ಎಲ್ಲಾ ಪೊಲಿಟಿಷಿಯನ್ಸ್ ವಾಸವಾಗಿದ್ದಾರೆ. ಮಿಗಿಲಾಗಿ ಅಪ್ಪು ಹಾಗೂ ರಾಘವೇಂದ್ರ ರಾಜ್​ಕುಮಾರ್ ನಿವಾಸಗಳು ಕೂಡ ಅಲ್ಲೇ ಇವೆ. ಅದೇ ಕಾರಣದಿಂದ ಉಪ್ಪಿ ದಂಪತಿ ಈ ದುಬಾರಿ ಮನೆಯನ್ನು ಖರೀದಿಸಿ, ಶಿಫ್ಟ್ ಆಗಿದ್ದಾರೆ.

ಇದನ್ನೂ ಓದಿ : ಹುಲಿ ಸಿಂಹಗಳು ಕುರಿಗಳಾದವು : ಮತ್ತೆ ತಲೆಗೆ ಹುಳ ಬಿಟ್ಟ ಉಪ್ಪಿ

ಅಣ್ಣನಿಗೆ ಕತ್ರಿಗುಪ್ಪೆ ಮನೆ ಬಿಟ್ಟುಕೊಟ್ಟ ಉಪ್ಪಿ

ಸಿನಿಮಾ ಜೊತೆ ಪ್ರಜಾಕೀಯದಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮನಸ್ಸು ಮಾಡಿರೋ ಉಪೇಂದ್ರ, ತಮ್ಮ ಕಾರ್ಯ ಚಟುವಟಿಕೆಗಳಿಗೆ ಪೂರಕವಾಗಿರಲಿ ಅಂತ ನಗರದಲ್ಲಿ ಮನೆ ಮಾಡಿದ್ದಾರೆ. ಸದ್ಯ ಇಲ್ಲಿ ಉಪೇಂದ್ರ ಜೊತೆ ಪ್ರಿಯಾಂಕಾ ಉಪೇಂದ್ರ ಹಾಗೂ ಮಕ್ಕಳು ವಾಸಿಸಲಿದ್ದಾರೆ. ಕತ್ರಿಗುಪ್ಪೆ ನಿವಾಸದಲ್ಲಿ ನಟ ನಿರಂಜನ್ ಅವ​ರ ತಂದೆ ಹಾಗೂ ಉಪ್ಪಿ ಸಹೋದರ ಸುಧೀಂದ್ರ ದಂಪತಿ ಹಾಗೂ ಉಪ್ಪಿ ಪೋಷಕರು ಇರಲಿದ್ದಾರೆ. ಅಣ್ಣನಿಗೆ ಆ ಮನೆಯನ್ನು ಬಿಟ್ಟುಕೊಟ್ಟು ಕಂಪ್ಲೀಟ್ ಆಗಿ ಸದಾಶಿವನಗರಕ್ಕೆ ಉಪ್ಪಿ ಶಿಫ್ಟ್ ಆಗಿಬಿಟ್ಟಿದ್ದಾರೆ.

ಸದ್ಯ ಯು & ಐ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಇರುವ ಉಪೇಂದ್ರ, ಕಬ್ಜ ದೊಡ್ಡ ಮಟ್ಟದಲ್ಲಿ ಕಮಾಲ್ ಮಾಡಿದ್ದರಿಂದ ಅದರ ರೆಮ್ಯುನರೇಷನ್​ನಲ್ಲೇ ನೂತನ ಮನೆ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಬ್ರಹ್ಮ ಹಾಗೂ ಐ ಲವ್ ಯು ಸಿನಿಮಾಗಳನ್ನು ಮಾಡಿದ್ದ ನಿರ್ದೇಶಕ ಚಂದ್ರು ಜೊತೆಗೇ ಕಬ್ಜ ಮಾಡಿದಂತಹ ಉಪ್ಪಿ, ತಮ್ಮ ಮನೋಜ್ಞ ಅಭಿನಯದಿಂದ ಅಕ್ಷರಶಃ ಭಾರತೀಯರ ಮನಸ್ಸುಗಳನ್ನು ಕಬ್ಜ ಮಾಡಿದ್ದಾರೆ.

ಇನ್ನೂ, ಕಬ್ಜ-2ನಲ್ಲಿ ಉಪ್ಪಿ ಇರ್ತಾರಾ ಇರಲ್ವಾ ಎನ್ನುವ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಸಿಗಲಿದೆ. ಈಗಾಗಲೇ ಚಂದ್ರು ಅವರು ಕಬ್ಜ-2 ಅನೌನ್ಸ್ ಕೂಡ ಮಾಡಿದ್ದು, ಅತೀವ ನಿರೀಕ್ಷೆ ಮೂಡಿಸಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments