Sunday, August 24, 2025
Google search engine
HomeUncategorizedಆನಂದ್ ಸಿಂಗ್ ಬಂದ್ರೆ 'ಹಾರ್ಟ್ ಅಟ್ಯಾಕ್' ಆಗ್ತಿತ್ತು : ಸಿಎಂ ಬೊಮ್ಮಾಯಿ

ಆನಂದ್ ಸಿಂಗ್ ಬಂದ್ರೆ ‘ಹಾರ್ಟ್ ಅಟ್ಯಾಕ್’ ಆಗ್ತಿತ್ತು : ಸಿಎಂ ಬೊಮ್ಮಾಯಿ

ಬೆಂಗಳೂರು : ಸಚಿವ ಆನಂದ್ ಸಿಂಗ್ ಬಂದರೆ ನನಗೆ ಹಾರ್ಟ್ ಅಟ್ಯಾಕ್ ಬಂದ ಹಾಗೆ ಆಗ್ತಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಗೆ ಚಟಾಕಿ ಹಾರಿಸಿದ್ದಾರೆ.

ಹೊಸಪೇಟೆ ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ಠಾಕೂರ್ ಪರವಾಗಿ ಪ್ರಚಾರ ನಡೆಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಆನಂದ್ ಸಿಂಗ್ ಸರಳ ಅಲ್ಲ. ಆನಂದ್ ಸಿಂಗ್ ಬಂದರೆ ಹಾರ್ಟ್ ಅಟ್ಯಾಕ್ ಬಂದ ಹಾಗೆ ಆಗ್ತಿತ್ತು. ಯಾಕಂದ್ರೆ ಏನಾದರೂ ಫೈಲ್ ಹಿಡಿದುಕೊಂಡು ಬಂದೂ ಸಹಿ ಹಾಕಿಸುತ್ತಿದ್ದರು. ಸದ್ಯ ಆನಂದಸಿಂಗ್ ಪಟ್ಟು ಬಿಡದೇ ಪುತ್ರನನ್ನ ಕಣಕ್ಕೆ ಇಳಿಸಿದ್ದಾರೆ ಎಂದು ಹೇಳಿದ್ದಾರೆ.

ಸಿಂಗ್ ಶೇರ್ ಆದ್ರೆ ಮಗ ಸವಾಶೇರು

ಆನಂದ್ ಸಿಂಗ್ ಪುತ್ರ ಸಿದ್ದಾರ್ಥ ಸಾಮಾನ್ಯರಲ್ಲಿ ಸಾಮಾನ್ಯ ಅಭ್ಯರ್ಥಿ. ಸಿದ್ದಾರ್ಥ ಸಿಂಗ್​ ಅವರಿಗೆ ಸಮಸ್ಯೆಗಳನ್ನು ತಿಳಿದುಕೊಂಡು ಅದಕ್ಕೆ ಪರಿಹಾರ ಕೊಡುವ ಯೋಚನೆ ಇದೆ. ಆನಂದ್ ಸಿಂಗ್ ಶೇರ್ ಆದರೆ ಮಗ ಸವಾಶೇರು ಅನ್ನೋ ಹಂಗೆ ಇದ್ದಾರೆ ಎಂದು ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ : ಕೆಜೆಪಿ ಕಟ್ಟಿದ್ದು ‘ನನ್ನ ಬದುಕಿನ ಅಕ್ಷಮ್ಯ ಅಪರಾಧ’ : ಯಡಿಯೂರಪ್ಪ

ನೀವೂ ಸಿದ್ದಾರ್ಥ ಸಿಂಗ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಇಬ್ಬರ ಪೋಟೋಗಳನ್ನು ಕಣ್ಣು ಮುಚ್ಚಿ ಒಮ್ಮೆ ನೋಡಿ ಬಿಡಿ. ಆಗ ನೀವೇ ಯಾರಿಗೆ ಗೆಲ್ಲಿಸಬೇಕು ಅಂತಾ ಇದ್ದೆ ನಿರ್ಧರಿಸುತ್ತಾರೆ. ಆ ಮೇಲೆ ನೀವು ನಿಮ್ಮ ಮತವನ್ನು ಸಿದ್ಧಾರ್ಥ್ ಸಿಂಗ್ ಗೆ ನೀಡುತ್ತೀರಾ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಸಾಧ್ಯವಾದ ಕೆಲಸ ಸಾಧಿಸಿದ್ದಾರೆ

ಸಚಿವ ಆನಂದ್ ಸಿಂಗ್ ಅಂದರೆ ಹೆಸರಿನಲ್ಲಿ ಆನಂದವೂ ಇದೆ. ಸಿಂಗ್ ಸಹ ಇದೆ. ಸದಾಕಾಲ ಸವಾಲುಗಳನ್ನು ಇಟ್ಟುಕೊಂಡು ಗುರಿ ಮುಟ್ಟುವ ಗುಣ ಆನಂದ್ ಸಿಂಗ್ ಅವರಿ​ಗೆ ಇದೆ. ಆನಂದ್ ಸಿಂಗ್ ಅಸಾಧ್ಯವಾದ ಕೆಲಸಗಳಿಗೆ ಕೈ ಹಾಕಿ ಸಾಧಿಸಿ ತೋರಿಸಿದ್ದಾರೆ ಎಂದಿದ್ದಾರೆ.

ವಿಜಯನಗರ ಜಿಲ್ಲೆ ಮಾಡಲು ನಮ್ಮ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದರು. ಆದರೆ, ಸಮ್ಮಿಶ್ರ ಸರ್ಕಾರ ಬಂತು. ಸಮ್ಮಿಶ್ರ ಸರ್ಕಾರ ಅಂದರೆ ಮಿಶಳ್ ಬಾಜಿ ಇದ್ದ ಹಾಗೆ ಇತ್ತು. ಸಮ್ಮಿಶ್ರ ಸರ್ಕಾರದಲ್ಲಿ ಕೆಲಸ ಆಗಲ್ಲ ಅಂದುಕೊಂಡು ಒಂದು ದಿನ ನನ್ನ ಬಳಿ ಬಂದರು, ಬಿಜೆಪಿ ಸೇರ್ಪಡೆಯಾದರು. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಬೆನ್ನು ಬಿದ್ದು ಸಹಿ ಮಾಡಿಸಿಕೊಂಡು ವಿಜಯನಗರ ಜಿಲ್ಲೆ ಮಾಡಿಸಿದರು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments