Sunday, August 24, 2025
Google search engine
HomeUncategorizedBenefits of Meditation : ನಿತ್ಯ ಬೆಳಗ್ಗೆ ಎದ್ದು ಧ್ಯಾನ ಮಾಡುವುದರಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತಾ? 

Benefits of Meditation : ನಿತ್ಯ ಬೆಳಗ್ಗೆ ಎದ್ದು ಧ್ಯಾನ ಮಾಡುವುದರಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತಾ? 

ಬೆಂಗಳೂರು: ನೀವು ‘ಧ್ಯಾನ’ ಮಾಡುವುದು ಎಂದರೆ ಯಾವುದೋ ಪರ್ವತದ ಮೇಲೆ, ನೀಲಿ ಮೋಡಗಳ ಕೆಳಗೆ ನಿಂತು ಧ್ಯಾನ ಮಾಡುವ ಯೋಗಿಗಳೆಂದು ನಮ್ಮ ತಲೆಗೆ ಬರುವುದು ಸಹಜ. ಅಂದ್ರೆ ಅದು ತಪ್ಪು ಕಲ್ಲನೆ.

ಧ್ಯಾನ ಎಂದರೆ ನಮ್ಮಗೆ ಶಾಂತಿ ನೆಮ್ಮದಿ ಸಿಗಲಿ ಎಂದು ಮನಸ್ಸುನ್ನು ನಾವು ಒಂದು ಕಡೆ ಒಂದು ಕಡೆ ಕೇಂದ್ರೀಕರಿಸುವುದು. ಧ್ಯಾನ ಪ್ರತಿಯೊಂದು ಜೀವಿಗೂ ಸಂಬಂಧಿಸಿದ್ದಾಗಿದೆ. ಅದ್ರೆ ನಾವು ಇತ್ತೀಚಿನ ಒತ್ತಡದ ಜೀವನಗಳಿಂದಾಗಿ ಧ್ಯಾನದ ಮಹತ್ವವನ್ನೇ ಮರೆತು ಹೋಗಿದ್ದೇವೆ.

ಆಗಿದ್ದರೆ ಧ್ಯಾನ ಮಾಡುವುದಾದರೂ ಹೇಗೆ? ಈ ಕೆಳಗಿನ ಕ್ರಮ ಅನುಸರಿಸುವುದರಿಂದ ನಾವು ಧ್ಯಾನ ನಿಶ್ಚಿತವಾಗಿ ಧ್ಯಾನ ಮಾಡಬಹುದು.

ಧ್ಯಾನಕ್ಕೆ ಇಂತಹದ್ದೇ ಸ್ಥಳಬೇಕೆಂದಿಲ್ಲ. ಪ್ರಶಾಂತವಾದ ಸ್ಥಳವಾದರೆ ಉತ್ತಮ. ನೆಲದ ಮೇಲೆ ಅಥವಾ ನೀವು ನಿರಾಳವಾಗಿದ್ದೀರಿ ಎಂದು ಭಾವಿಸುವ ಸ್ಥಳದಲ್ಲಿ ನೇರ ಬೆನ್ನಿನ ಆಸನದಲ್ಲಿ ಕುಳಿತುಕೊಳ್ಳಿ. ನಿಮ್ಮ ಕುತ್ತಿಗೆಯನ್ನು ಸಡಿಲಗೊಳಿಸಿ, ತೊಡೆ ಅಥವಾ ಮೊಣಕಾಲುಗಳ ಮೇಲೆ ಕೈಗಳನ್ನು ಇರಿಸಿ.

ಇನ್ನು ಬಟ್ಟೆಯ ವಿಷಯಕ್ಕೆ ಬಂದಾಗ, ನಿಮಗೆ ಆರಾಮದಾಯಕ ಎನಿಸುವ ಬಟ್ಟೆಯನ್ನು ಧರಿಸಿಕೊಳ್ಳಿ. ಆದಷ್ಟು ಸಡಿಲ ಬಟ್ಟೆಗಳನ್ನು ಆಯ್ಕೆಮಾಡಿಕೊಳ್ಳಿ. ಆಗ ಉಸಿರಾಟಕ್ಕೆ ಅನುಕೂಲವಾಗುತ್ತದೆ.

ನೀವು ಸಮಯವನ್ನು ನಿಗದಿಪಡಿಸಲು ಬಯಸಿದರೆ, ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು ಹಾಗೆ ಮಾಡಬಹುದು. ಆರಂಭದ ದಿನಗಳಲ್ಲಿ 10 ನಿಮಿಷಗಳಿಂದ ಧ್ಯಾನವನ್ನು ಆರಂಭಿಸಬಹುದು. ಒಮ್ಮೆ ನೀವು ನಿಮ್ಮ ಮನಸ್ಸನ್ನು ಚೆನ್ನಾಗಿ ತರಬೇತಿಗೊಳಿಸಿದ ನಂತರ ಧ್ಯಾನದ ಅವಧಿಯನ್ನು 15 ಅಥವಾ 20 ನಿಮಿಷಗಳವರೆಗೆ ಕ್ರಮೇಣ ಹೆಚ್ಚಿಸಬಹುದು. ಹೀಗೆ ನಾವು ಧ್ಯಾನವನ್ನು ಮಾಡಬಹುದು.

ಧ್ಯಾನ ಮಾಡುವುದರಿಂದ ಸಿಗುವ ಪ್ರಯೋಜನಗಳು

  1. ಧ್ಯಾನ ಕೇವಲ ಯೋಗಿಗಳಿಗಷ್ಟೇ ಸಂಬಂಧಿಸಿದ್ದಲ್ಲ. ಒಬ್ಬ ವ್ಯಕ್ತಿ ಮಾನಸಿಕ ನೆಮ್ಮದಿ ಪಡೆದುಕೊಳ್ಳಲು, ನೆಮ್ಮದಿ ಜೀವನ ಸಾಗಿಸಲು,ಧ್ಯಾನ ಮುಖ್ಯವಾಗಿದೆ.
  2. ಆರೋಗ್ಯಕರ ಜೀವನಕ್ಕೆ ಹಾಗೂ ಅತ್ಯುತ್ತಮ ವ್ಯಕ್ತಿಯಾಗಿ ಬದಲಾಗಲು ಧ್ಯಾನ ಮುಖ್ಯವಾಗಿದೆ. ನಾವು ಧ್ಯಾನ ಮಾಡುವುದರಿಂದ ಮಾನಸಿಕ ಒತ್ತಡದಿಂದ ದೂರ ಆಗಬಹುದು.
  3. ಧ್ಯಾನದಿಂದ ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
  4. ನಿಮ್ಮಲ್ಲಿ ಸಕಾರಾತ್ಮಕವಾಗಿ ಯೋಚಿಸಲು ನಮ್ಮಗೆ ಶಕ್ತಿ ತುಂಬುತ್ತದೆ.
  5. ಧ್ಯಾನದಿಂದ ನಮ್ಮಗೆ ಉತ್ತಮ ಉಸಿರಾಟ ವ್ಯವಸ್ಥೆ ಸಿಗುತ್ತದೆ.
  6. ನಾವು ಖಿನ್ನತೆಗಳಿಂದ ದೂರವಿರಬಹುದು. ಈ ಮೇಲೆ ಕ್ರಮಗಳನ್ನು ನಾವು ನಿತ್ಯ ಅನುಸರಿಸುವುದರಿಂದ ಉತ್ತಮ ಆರೋಗ್ಯದ ಜೀವನವನ್ನು ಸಾಗಿಸಬಹುದು.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments