Sunday, August 24, 2025
Google search engine
HomeUncategorizedಬಂಪರ್ ಆಫರ್ : ಆಫೀಸ್ ಗೆ ಬರಬೇಡಿ, ಆರಾಮವಾಗಿ ಮಲಗಿ ಎಂದ ಕಂಪನಿ

ಬಂಪರ್ ಆಫರ್ : ಆಫೀಸ್ ಗೆ ಬರಬೇಡಿ, ಆರಾಮವಾಗಿ ಮಲಗಿ ಎಂದ ಕಂಪನಿ

ಬೆಂಗಳೂರು : ಇಂದು ವಿಶ್ವ ನಿದ್ರಾ ದಿನವಾಗಿರುವುದರಿಂದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ರಜೆ ಘೋಷಿಸಿದೆ.

ಹೌದು, ಬೆಂಗಳೂರು ಮೂಲದ ವೇಕ್‌ಫಿಟ್ ಸೊಲ್ಯೂಷನ್ಸ್ ಕಂಪನಿ ತನ್ನ ಉದ್ಯೋಗಿಗಳಿಗೆ ಬಂಪರ್ ಆಫರ್ ಘೋಷಿಸಿದೆ. ಉದ್ಯೋಗಿಗಳಿಗೆ ಮೇಲ್ ಕಳುಹಿಸಿದೆ.

ಇಂದು ವಿಶ್ವ ನಿದ್ರಾ ದಿನ. ಹೀಗಾಗಿ, ಕಂಪನಿಯು ಉದ್ಯೋಗಿಗಳಿಗೆ ರಜೆ ಘೋಷಿಸಿದೆ. ಉದ್ಯೋಗಿಯೊಬ್ಬರು ಅದನ್ನು ಲಿಂಕ್ ಡಿನ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ವೈರಲ್ ಆಗಿದೆ.

30 ನಿಮಿಷಗಳ ನಿದ್ರೆಗೆ ಅವಕಾಶ

ಈ ಕಂಪನಿಯು ಕಳೆದ ವರ್ಷ ತನ್ನ ಉದ್ಯೋಗಿಗಳಿಗಾಗಿ ‘ರೈಟ್ ಟು ನ್ಯಾಪ್ ಪಾಲಿಸಿ’ ಅನ್ನು ಪರಿಚಯಿಸಿತು. ಆ ಮೂಲಕ ಎಲ್ಲಾ ಉದ್ಯೋಗಿಗಳು ತಮ್ಮ ಕೆಲಸದ ಅವಧಿಯಲ್ಲಿ 30 ನಿಮಿಷಗಳ ಕಾಲ ಮಲಗಲು (ನಿದ್ರೆ) ಅನುಮತಿ ನೀಡಲಾಗಿದೆ.

ಇಂದು ವಿಶ್ವ ನಿದ್ರಾ ದಿನ

ಪ್ರತಿ ವರ್ಷ ಮಾರ್ಚ್ ತಿಂಗಳ ಮೂರನೇ ಶುಕ್ರವಾರ ವಿಶ್ವ ನಿದ್ರಾ ದಿನವನ್ನು ಆಚರಿಸಲಾಗುತ್ತದೆ. ನಿದ್ರೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ.

ಇತ್ತೀಚಿನ ದಿನಗಳಲ್ಲಿ ಜನರು ಕೆಲಸ ಮತ್ತು ಒತ್ತಡದಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ. ನಿದ್ರಾಹೀನತೆಯಿಂದ ಅನೇಕ ರೋಗಗಳು ಮನುಷ್ಯನ ಪಾಲಿಗೆ ಮಾರಕವಾಗಿದೆ. ಪ್ರತಿ ವರ್ಷ ಸ್ಲೀಪ್ ಡೇಗೆ ಒಂದು ಥೀಮ್ ಅನ್ನು ನಿರ್ಧರಿಸಲಾಗುತ್ತದೆ. ಈ ವರ್ಷ ‘ಆರೋಗ್ಯಕ್ಕೆ ನಿದ್ರೆ ಅತ್ಯಗತ್ಯ’ ಎಂಬ ಧೈಯವಾಕ್ಯ ಥೀಮ್ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments