Sunday, August 24, 2025
Google search engine
HomeUncategorizedಪದೇ ಪದೆ ಟಿಪ್ಪು ಯಾಕೆ ನೆನಪಾಗ್ತಾನೆ ನಮ್ಗೆ ಗೊತ್ತು : ಅಶ್ವತ್ಥನಾರಾಯಣ

ಪದೇ ಪದೆ ಟಿಪ್ಪು ಯಾಕೆ ನೆನಪಾಗ್ತಾನೆ ನಮ್ಗೆ ಗೊತ್ತು : ಅಶ್ವತ್ಥನಾರಾಯಣ

ಬೆಂಗಳೂರು : ಉರಿಗೌಡ ಹಾಗೂ ನಂಜೇಗೌಡರ ಕುರಿತು ಹೇಳಿಕೆ ಹರಿಬಿಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಸಚಿವ ಅಶ್ವತ್ಥನಾರಾಯಣ ಟಾಂಗ್ ಕೊಟ್ಟಿದ್ದಾರೆ.

ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಉರಿಗೌಡ ಹಾಗೂ ನಂಜೇಗೌಡ ಇತಿಹಾಸದಲ್ಲಿ ಇದ್ದರು ಅನ್ನೋದು ನಮ್ಮ ನಂಬಿಕೆ. ಉರಿಗೌಡ, ನಂಜೇಗೌಡ ನಮ್ಮ ಅಭಿಮಾನದ ಸಂಕೇತ ಎಂದು ಹೇಳಿದ್ದಾರೆ.

ಟಿಪ್ಪುನಂತ ನರ ಹಂತಕನಿಂದ, ಮತಾಂದನಿಂದ ನಮ್ಮ ಮೈಸೂರು ಸಂಸ್ಥಾನವನ್ನು ರಕ್ಷಣೆ ಮಾಡಿದ್ದು ನಮ್ಮ ಹೆಮ್ಮೆ. ರಾಣಿ ಲಕ್ಷ್ಮೀ ಅಮ್ಮಣ್ಣಿಯ ರಕ್ಷಣೆ ದಳದಲ್ಲಿದ್ದವರು. ಚುನಾವಣಾ ಸಂಬರ್ಭದಲ್ಲಿ ಮತವನ್ನು ಲೆಕ್ಕಕ್ಕೆ ಇಡ್ಕೊಂಡು ಈ ರೀತಿ ಕೀಳು ಮಟ್ಟಕ್ಕೆ ಇಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೈ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.

ನಾಲ್ವಡಿಯವರು ಬೇಕಾ? ಟಿಪ್ಪು ಬೇಕಾ?

ಉರಿಗೌಡ, ನಂಜೇಗೌಡ ನಮ್ಮ ಹೆಮ್ಮೆ. ಗೌರವ ಹಾಗೂ ಸಂತೋಷ. ಮೈಸೂರು ಸಂಸ್ಥಾನದಲ್ಲಿ ಕೆಲಸಕ್ಕೆ ಇದ್ದವನು. ಸಂಸ್ಥಾನಕ್ಕೆ ದ್ರೋಹ ಮಾಡಿ ಅಧಿಕಾರ ಪಡೆದವನು ಟಿಪ್ಪು. ನಿಮಗೆ ನಾಲ್ವಡಿಯವರು ಬೇಕಾ? ಇಲ್ಲಾ ಟಿಪ್ಪು ಬೇಕಾ? ಎಂದು  ಅಶ್ವತ್ಥನಾರಾಯಣ ಹೇಳಿದ್ದಾರೆ.

ಇದನ್ನೂ ಓದಿ : ಒಕ್ಕಲಿಗ ಕುಲಕ್ಕೆ ಮಾಡಿದ ಘೋರ ಅವಮಾನ : ಎಚ್ಡಿಕೆ

ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಧನೆ ಸಾಕಷ್ಟಿದೆ. ವಿಶ್ವಕ್ಕೆ ಮಾದರಿಯಾದವರು. ಇವರನ್ನು ಯಾಕೆ ನೆನಪು ಮಾಡಿ ಕೊಳ್ಳುವುದಿಲ್ಲ. ಬರಿ ಇವರಿಗೆ ಟಿಪ್ಪು ಸುಲ್ತಾನನೇ ನೆನಪಾಗುತ್ತಾನೆ. ಟಿಪ್ಪು ಪದೇ ಪದೆ ಯಾಕೆ ನೆನಪಾಗುತ್ತಾನೆ ಎಂದು ನಮಗೆ ಗೊತ್ತಿದೆ. ನಿಮಗೂ ಗೊತ್ತಿದೆ ಎಂದು ತಿಳಿಸಿದ್ದಾರೆ.

ಆ ಭಾಗ್ಯ.. ಈ ಭಾಗ್ಯ ಕೊಟ್ಟೆ

ಸಿದ್ದರಾಮಯ್ಯನವರು ಯವತ್ತಾದರೂ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆಯೇ? ಕೇವಲ ಆ ಭಾಗ್ಯ ಕೊಟ್ಟೆ, ಈ ಭಾಗ್ಯ ಕೊಟ್ಟೆ ಅಂತ ಮಾತನಾಡುತ್ತಾರೆ. ಟಿಪ್ಪು ಪರ ಘಂಟಾಗೋಷವಾಗಿ ಹೇಳುತ್ತಾರಲ್ಲ. ಅದೇ ನಮಗೆ ಆಶ್ಚರ್ಯ. ಮತದಾರನಿಗೆ ಜಾಗೃತಿ ಇದೆ. ತಿಳುವಳಿಗೆ ಸ್ವಾಭಿಮಾನ ಇಡ್ಕೊಂಡು ಉತ್ತರ ಕೊಡುತ್ತಾರೆ. ನಾವು ಟಿಪ್ಪು ಮಾಡಿದ ಅನ್ಯಾಯವನ್ನು ಖಂಡಿಸುತ್ತೇವೆ. ಸಾವರ್ಕರ್ ನಮ್ಮ ದೇಶದ ಹೆಮ್ಮೆ. ಈಗಿನ ರಾಜಕಾಯಣಿ ಒಂದು ದಿನ ಅಂಡಮಾನ್ ನಲ್ಲಿ ಇದ್ದು ಬರಲಿ ಗೊತ್ತಾಗುತ್ತೆ ಎಂದು ಕುಟುಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments