Saturday, August 23, 2025
Google search engine
HomeUncategorizedWTCಗೆ ಭಾರತ : 'ಥ್ಯಾಂಕ್ ಯು ಕೇನ್ ಮಾಮಾ..' ಎಂದ ಭಾರತೀಯರು

WTCಗೆ ಭಾರತ : ‘ಥ್ಯಾಂಕ್ ಯು ಕೇನ್ ಮಾಮಾ..’ ಎಂದ ಭಾರತೀಯರು

ಬೆಂಗಳೂರು : ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ತಲುಪಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವಿನಿಂದ ಇದು ಸಾಧ್ಯವಾಗಿದೆ. ಕಿವೀಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೇನ್ ವಿಲಿಯನ್ಸನ್ ಅವರನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪ್ರಶಂಸಿಸುತ್ತಿದ್ದಾರೆ.

‘ಥ್ಯಾಂಕ್ಯೂ ಕೇನ್ ಮಾಮಾ’ಎಂದು ಟ್ವಿಟ್ ಮಾಡುತ್ತಿದ್ದಾರೆ. ಕಳೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ನಲ್ಲಿ, ಕಿವೀಸ್ ಮತ್ತು ಭಾರತ ಪರಸ್ಪರ ಮುಖಾಮುಖಿಯಾಗಿದ್ದವು. ನ್ಯೂಜಿಲೆಂಡ್ ಭಾರತದ ವಿರುದ್ಧ ಗೆದ್ದಿತ್ತು.

ರೋಚಕ ಹಣಾಹಣಿಯಲ್ಲಿ ನ್ಯೂಜಿಲ್ಯಾಂಡ್ ತಂಡವು ಅಂತಿಮ ಎಸೆತದಲ್ಲಿ ಕ್ರೈಸ್ಟ್ ಚರ್ಚ್ ಪಂದ್ಯವನ್ನು ಗೆದ್ದುಕೊಂಡಿದೆ. ಈ ಸೋಲಿನ ಮೂಲಕ ಶ್ರೀಲಂಕಾದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಆಸೆ ಕಮರಿದ್ದು, ಭಾರತ ತಂಡವು ಫೈನಲ್​ಗೆ ಅರ್ಹತೆ ಪಡೆದಿದೆ.

ಇದನ್ನೂ ಓದಿ : ದಿ ಕಿಂಗ್ ಈಸ್ ಬ್ಯಾಕ್ : #ViratKohli ಟ್ರೆಂಡಿಂಗ್

ಕೇನ್ ವಿಲಿಯಮ್ಸನ್ ಶತಕ

ಗೆಲುವಿಗೆ 285 ರನ್ ಗುರಿ ಪಡೆದ ಕಿವೀಸ್ ತಂಡಕ್ಕೆ ಕೇನ್ ವಿಲಿಯಮ್ಸನ್ ಶತಕ ಬಾರಿಸಿ ನೆರವಾದರು. ಎಂಟು ವಿಕೆಟ್ ಕಳೆದುಕೊಂಡ ಕಿವೀಸ್ ಅಂತಿಮ ಎಸೆತದಲ್ಲಿ ಪಂದ್ಯ ಗೆದ್ದುಕೊಂಡಿತು. ಗೆಲುವಿಗೆ 285 ರನ್ ಗುರಿ ಪಡೆದ ಕಿವೀಸ್ ತಂಡಕ್ಕೆ ಕೇನ್ ವಿಲಿಯಮ್ಸನ್ ಶತಕ ಬಾರಿಸಿ ನೆರವಾದರು. ಒಂದು ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿದ್ದಲ್ಲಿಂದ ಅಂತಿಮ ದಿನದಾಟ ಆರಂಭಿಸಿದಾಗ ಮಳೆ ಅಡ್ಡಿಯಾಯಿತು.

ವಿಲಿಯಮ್ಸನ್, ಮಿಚೆಲ್ ಆಸರೆ

ಮಳೆಯ ಕಾರಣದಿಂದ 37 ಓವರ್​ಗಳ ಪಂದ್ಯ ನಷ್ಟವಾಯಿತು. 53 ಓವರ್​​ಗಳಲ್ಲಿ 257 ರನ್ ಗಳಿಸಬೇಕಾದ ಅನಿವಾರ್ಯತೆಗೆ ಸಿಲುಕಿದ ಕಿವೀಸ್​ಗೆ ಕೇನ್ ವಿಲಿಯಮ್ಸನ್ ಮತ್ತು ಡ್ಯಾರೆಲ್ ಮಿಚೆಲ್ ನೆರವಾದರು. ವಿಲಿಯಮ್ಸನ್ ಅಜೇಯ 121 ರನ್ ಗಳಿಸಿದರೆ, ಮೊದಲ ಇನ್ನಿಂಗ್ಸ್​​ನ ಶತಕವೀರ ಮಿಚೆಲ್ 86 ಎಸೆತಗಳಲ್ಲಿ 81 ರನ್ ಮಾಡಿ ನೆರವಾದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments