Monday, September 1, 2025
HomeUncategorizedರೈತರ ಹೆಸರಿನಲ್ಲಿ ಹೋರಾಟ ಮಾಡಲು ನಿಮಗೆ ಯಾವುದೇ ನೈತಿಕತೆ ಇಲ್ಲ : ಕೆ.ಎಸ್. ಈಶ್ವರಪ್ಪ

ರೈತರ ಹೆಸರಿನಲ್ಲಿ ಹೋರಾಟ ಮಾಡಲು ನಿಮಗೆ ಯಾವುದೇ ನೈತಿಕತೆ ಇಲ್ಲ : ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ :ರೈತರ ಹೆಸರಿನಲ್ಲಿ ಹೋರಾಟ ಮಾಡಲು ನಿಮಗೆ ಯಾವುದೇ ನೈತಿಕತೆ ಇಲ್ಲ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ರೌಡಿಗಳ ಪಕ್ಷ ಅಲ್ಲ,ನಮ್ಮದು ಸುಂಸ್ಕೃತ ಪಕ್ಷವಾಗಿದೆ. ಕಾಂಗ್ರೆಸ್ ರೌಡಿಗಳ ಪಕ್ಷ. ಡಿಕೆಶಿ ತಿಹಾರ್ ಜೈಲ್​​ನಲ್ಲಿ ಇದ್ದು ಬಂದವರು. ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಬಾರ್​​ನಲ್ಲಿ ಹೊಡೆದಾಡಿ ಜೈಲಿಗೆ ಹೋಗಿದ್ದಾರೆ. ಇಬ್ರಾಹಿಂಗೆ ಬೇರೆ ಉದ್ಯೋಗವಿಲ್ಲ. ಸರ್ಕಾರ ತಂದವರು ಯಾಕೆ ಹೋಗುತ್ತಾರೆ. ಅವರು ಅಲ್ಲಿಗೆ ಹೋಗಿ ಏನ್ ಮಾಡಿದ್ದಾರೆ ಎಂದರು.

ಕರ್ನಾಟಕ ಗಡಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಒಂದು ಇಂಚು ಭೂಮಿ ಸಹ ಮಹಾರಾಷ್ಟ್ರಕ್ಕೆ ಹೋಗಲ್ಲ. ನಮ್ಮ ಆರುವರೆ ಕೋಟಿ ಜನ ಒಗ್ಗಟ್ಟಾಗೆ ಇದ್ದಾರೆ. ಅಲ್ಲಿ ಕುಡಿಯುವುದಕ್ಕೆ ನೀರು ಸಹ ಇಲ್ಲ. ಗಡಿ ಭಾಗದ ಜನ ಕರ್ನಾಟಕಕ್ಕೆ ಸೇರಲು ಬಯಸುತ್ತಿದ್ದಾರೆ ಎಂದು ಹೇಳಿದರು.

ಅದಲ್ಲದೇ, ಜೈಲಿಗೆ ಹೋಗಿ ಬಂದವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಈ ರೀತಿ ಹೇಳಿದರೆ, ನಾನೇನು ಹೇಳಲಿ. ರಾತ್ರಿ ಯಾರೋ ರೂಂ. ನಲ್ಲಿ ಕೂತು ಹೇಳಿಕೊಟ್ಟಿದ್ದು, ಬೆಳಿಗ್ಗೆ ಬಂದು ಮಾದ್ಯಮಗಳಿಗೆ ಹೇಳಿದ್ದಾರೆ. ನಗರದಲ್ಲಿ ಏನ್ ಅಭಿವೃದ್ದಿ ಅಗಿದೆ ಎಂದು ಸಿದ್ಧರಾಮಯ್ಯ ಬಂದು ನೋಡಲಿ. ನಾನು ಅಭಿವೃದ್ದಿಯನ್ನು ಕರೆದುಕೊಂಡು ಹೋಗಿ ತೋರಿಸುತ್ತೇನೆ. ನಾನು 40 ಸಾವಿರ ಮತಗಳಿಕ್ಕಿಂತ ಅಧಿಕ ಮತದಿಂದ ಗೆದ್ದದ್ದು ಯಾಕೆ. ಪಾಲಿಕೆ ಬಹುಮತ ಗೆಳಿಸಿದ್ದು ಯಾಕೆ. ಅಭಿವೃದ್ದಿಗೆ ಮನ್ನಣೆ ನೀಡಿದಕ್ಕೆ ಬಿಜೆಪಿ ಗೆದ್ದಿದೆ ಎಂದರು.

RELATED ARTICLES
- Advertisment -
Google search engine

Most Popular

Recent Comments