Friday, September 12, 2025
HomeUncategorizedಏರ್ ಶೋಗೆ ದಿನಾಂಕ ಫಿಕ್ಸ್

ಏರ್ ಶೋಗೆ ದಿನಾಂಕ ಫಿಕ್ಸ್

ಬೆಂಗಳೂರು : 2 ವರ್ಷಗಳಿಗೊಮ್ಮೆ ನಡೆಯುವ ಭಾರತದ ಏರ್ ಶೋ `ಏರೋ ಇಂಡಿಯಾ- 2023′ ಮುಂದಿನ ವರ್ಷ ಫೆಬ್ರವರಿ 13 ರಿಂದ 17ರವರೆಗೆ ಬೆಂಗಳೂರಿನ ಯಲಹಂಕಾದಲ್ಲಿ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ.

ಈ ಬಗ್ಗೆ ರಕ್ಷಣಾ ಸಚಿವಾಲಯ ಟ್ವೀಟ್‌ನಲ್ಲಿ ತಿಳಿಸಿದ್ದು, ಏಷ್ಯಾದಲ್ಲೇ ಅತಿದೊಡ್ಡ ಏರ್ ಶೋ ಏರೋ ಇಂಡಿಯಾ- 2023 ಘೋಷಣೆಯಾಗಿದೆ. 2023ರ ದ್ವೈವಾರ್ಷಿಕ ವೈಮಾನಿಕ ಪ್ರದರ್ಶನ ಕರ್ನಾಟಕದ ಬೆಂಗಳೂರಿನ ಯಲಹಂಕದ ವಾಯುಪಡೆ ನಿಲ್ದಾಣದಲ್ಲಿ ನಡೆಯಲಿದೆ ಎಂದು ತಿಳಿಸಿದೆ.

ಇದು ಏರೋ ಇಂಡಿಯಾದ 14ನೇ ಆವೃತ್ತಿಯಾಗಲಿದೆ. ಹಿಂದಿನ ವರ್ಷದಂತೆ, ರಕ್ಷಣಾ ಸಚಿವಾಲಯ ವೈಮಾನಿಕ ಪ್ರದರ್ಶನದ ದಿನಾಂಕಗಳನ್ನು ಮುಂಚಿತವಾಗಿ ಘೋಷಿಸಿದೆ. ಆದರೆ ಪ್ರದರ್ಶನದಲ್ಲಿ ಭಾಗವಹಿಸಲಿರುವ ದೇಶಗಳು ಹಾಗೂ ಪ್ರದರ್ಶಕರ ಬಗ್ಗೆ ಯಾವುದೇ ರೀತಿಯ ಉಲ್ಲೇಖಗಳನ್ನು ಮಾಡಲಾಗಿಲ್ಲ.

RELATED ARTICLES
- Advertisment -
Google search engine

Most Popular

Recent Comments