Friday, August 29, 2025
HomeUncategorizedಕಾಡಾನೆ ದಾಳಿಗೆ ಬೆಳೆ ನಾಶ

ಕಾಡಾನೆ ದಾಳಿಗೆ ಬೆಳೆ ನಾಶ

ಮೈಸೂರು : ಕಾಡಾನೆ ದಾಳಿಗೆ ಮಲೆನಾಡಿದ ರೈತ ರೋಸಿ ಹೋಗಿದ್ದಾನೆ. ದಿನಂಪ್ರತಿ ಕಾಡಾನೆ ದಾಳಿ ನಡೆಸಿ, ಬೆಳೆ ನಾಶಗೊಳಿಸ್ತಿದೆ.

ಮೈಸೂರಿನ ಹುಣಸೂರು ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಕಾಡಾನೆ ಬೆಳೆ ನಾಶ ಮಾಡಿದೆ. ಒಟ್ಟು 6 ಆನೆಗಳು ಕೃಷಿ ಭೂಮಿಗೆ ಲಗ್ಗೆ ಇಟ್ಟಿದ್ದು, ಬಾಳೆ, ತೆಂಗು, ಕಬ್ಬು ಮತ್ತು ಅಡಿಕೆ ಬೆಳೆಯನ್ನು ನಾಶಗೊಳಿಸಿದೆ.

ಪದೇ ಪದೇ ಕಾಡಿನಿಂದ ನಾಡಿಗೆ ಆನೆಗಳು ಬರುತ್ತಿದ್ದು, ಜನ ಕಂಗಾಲಾಗಿದ್ದಾರೆ. ನಟೇಶ್, ಶಮಿಯುಲ್ಲಾ, ಪ್ರದೀಪ್​​ ಎಂಬುವವರಿಗೆ ಸೇರಿದ್ದ ಜಮೀನಿನಲ್ಲಿ ಆನೆಗಳು ಪುಂಡಾಟ ಮೆರೆದಿವೆ. ಅಪಾರ ಮೌಲ್ಯದ ಬೆಳೆ ನಾಶವಾಗಿದ್ದು, ರೈತರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಆನೆ ದಾಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಅರಣ್ಯ ಇಲಾಖೆ ಸಿಬ್ಬಂದಿಗೆ ಒತ್ತಾಯ ಮಾಡ್ತಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments