Saturday, August 30, 2025
HomeUncategorizedಮುಕ್ತ ತನಿಖೆಗೆ ಸರ್ಕಾರ ಬದ್ಧವಾಗಿದೆ : ಸಿಎಂ ಬೊಮ್ಮಾಯಿ

ಮುಕ್ತ ತನಿಖೆಗೆ ಸರ್ಕಾರ ಬದ್ಧವಾಗಿದೆ : ಸಿಎಂ ಬೊಮ್ಮಾಯಿ

ಬೆಂಗಳೂರು : ರಾಜ್ಯದಲ್ಲೂ ಏಕರೂಪ ನಾಗರೀಕ ಸಂಹಿತೆ ಜಾರಿ ವಿಚಾರ ಕುರಿತು ಸಿಎಂ ಬಸವರಾಜ್​​​ ಬೊಮ್ಮಾಯಿ ಮಾತನಾಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕರೂಪ ನಾಗರೀಕ ಸಂಹಿತೆ ಜಾರಿ ಬಗ್ಗೆ ನಾವೂ ಸಹ ಗಂಭೀರವಾಗಿ ಚಿಂತನೆ ಮಾಡ್ತಿದ್ದೇವೆ. ಏಕರೂಪ ನಾಗರೀಕ ಸಂಹಿತೆ ಜಾರಿ ಬಗ್ಗೆ ಕೇಂದ್ರದ ಬಿಜೆಪಿಯ ಪ್ರಣಾಳಿಕೆಯಲ್ಲೂ ಪ್ರಸ್ತಾಪಿಸಲಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಇದರ ಜಾರಿ ಬಗ್ಗೆ ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ರು.

ಚಿಲುಮೆ ಸಂಸ್ಥೆ ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹಿಸಿದ್ದರ ಕುರಿತು ಮಾತನಾಡಿದ ಅವರು, ಇಬ್ಬರು IAS ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಪ್ರಕರಣದ ಮುಕ್ತ ತನಿಖೆ ಮಾಡಿಸಲು ಸರ್ಕಾರ ಮುಕ್ತವಾಗಿದೆ. ಹೀಗಾಗಿಯೇ ನಾವು ತನಿಖೆಗೆ ವಹಿಸಿದ್ದೇವೆ. ಚುನಾವಣಾ ಆಯೋಗದ ತನಿಖೆಯನ್ನು ಸ್ವಾಗತಿಸುತ್ತೇವೆ ಎಂದು ತಿಳಿಸಿದ್ರು. ಕರ್ನಾಟಕದ ಬಸ್​​​ಗಳಿಗೆ ಮಹಾರಾಷ್ಟ್ರದಲ್ಲಿ ಕಲ್ಲು ತೂರಾಟ ನಡೆಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಈಗಾಗಲೇ‌ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತನಾಡಿದ್ದೀನಿ. ಇವತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರೂ ಅಲ್ಲಿನವರ ಜತೆ ಮಾತಾಡ್ತಾರೆ. ನಮ್ಮ ಬಸ್ ಗಳಿಗೆ ಯಾವುದೇ ಹಾನಿ ಮಾಡಬಾರದು ಅಂತಲೂ ತಿಳಿಸಿದ್ದೀವಿ ಎಂದು ತಿಳಿಸಿದ್ರು.

RELATED ARTICLES
- Advertisment -
Google search engine

Most Popular

Recent Comments