Saturday, August 23, 2025
Google search engine
HomeUncategorized7ನೇ ದಿನವೂ ಪಂಚರತ್ನ ರಥಯಾತ್ರೆಗೆ ಭರ್ಜರಿ ರೆಸ್ಪಾನ್ಸ್

7ನೇ ದಿನವೂ ಪಂಚರತ್ನ ರಥಯಾತ್ರೆಗೆ ಭರ್ಜರಿ ರೆಸ್ಪಾನ್ಸ್

ಚಿಕ್ಕಬಳ್ಳಾಪುರ : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹಳ್ಳಿ ಹಳ್ಳಿಗೂ ಪಂಚರತ್ನ ಯಥಯಾತ್ರೆಯನ್ನ ಕೊಂಡೊಯ್ಯುತ್ತಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಂತೂ ರಥಯಾತ್ರೆಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಇಂದು ಶಿಡ್ಲಘಟ್ಟ ತಾಲೂಕಿನ ವೈ‌ ಹುಣಸೇನಹಳ್ಳಿ, ಶಿಡ್ಲಘಟ್ಟ ಬೈಪಾಸ್, ಶಿಡ್ಲಘಟ್ಟ ಟೌನ್, ಅಬ್ಲೂಡು, ದಿಬ್ಬೂರಹಳ್ಳಿ, ಸಾದಲಿಯಲ್ಲಿ ಪಂಚರತ್ನ ರಥಯಾತ್ರೆ ಸಾಗ್ತು. ಈ ಭಾಗಕ್ಕೆ ಒಳ್ಳೆಯ ನೀರು ಹರಿಸೋ ಸವಾಲು ನನ್ನದು. ದಲಿತರಿಗೆ, ಮಹಿಳೆಗೆ, ವೀರಶೈವ ಲಿಂಗಾಯತರನ್ನ ನಾವು ಡಿಸಿಎಂ ಮಾಡ್ತೀವಿ. ಪರಮೇಶ್ವರ್ ಅವ್ರನ್ನ ಡಿಸಿಎಂ ಮಾಡಲು ಸಿದ್ದರಾಮಯ್ಯ ಒಪ್ಪಲಿಲ್ಲ. ಹೈಕಮಾಂಡ್ ಆದೇಶ ಬಂದ ಮೇಲೆ ಮಾಡಿದ್ರು. ಆ ರೀತಿ ಕಾಟಾಚಾರದ ಡಿಸಿಎಂ ಮಾಡಲ್ಲ ಅಂತಾ ಸಿದ್ದರಾಮಯ್ಯನವ್ರಿಗೆ HDK ತಿರುಗೇಟು ನೀಡಿದ್ರು.

ಶಿಡ್ಲಘಟಕ್ಕೆ ವೈ ಹುಣಸೇನಹಳ್ಳಿಯಲ್ಲಿ ಸ್ಥಳೀಯ ಜೆಡಿಎಸ್ ಮುಖಂಡ ಮೇಲೂರು ರವಿಕುಮಾರ್ ಆಯೋಜಿಸಿದ್ದ ವೆಂಕಟೇಶ್ವರ, ಲಕ್ಷ್ಮೀ, ಪದ್ಮಾವತಿ ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡ್ರು.. ಯಾತ್ರೆ ಯಶಸ್ವಿಗೆ ಗಣೇಶ ಹೋಮ ನೆರವೇರಿಸಿದ್ರು. ಸುಮಾರು ಐದು ಸಾವಿರ ಬೈಕ್ ಗಳಲ್ಲಿ ಶಿಡ್ಲಘಟ್ಟ ಟೌನ್ ತನಕ ರ್ಯಾಲಿ ನಡೆಸಿದ್ರು.. ರ್ಯಾಲಿಯಲ್ಲಿ ಸಿ.ಎಂ ಇಬ್ರಾಹಿಂ, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ಶಾಸಕ ಕೃಷ್ಣಾರೆಡ್ಡಿ ಸೇರಿ ಸ್ಥಳೀಯ ಜೆಡಿಎಸ್ ಮುಖಂಡರು ಪಾಲ್ಗೊಂಡಿದ್ರು. ಐದು ಸಾವಿರ ರೇಷ್ಮೆಗೂಡಿನಿಂದ ತಯಾರಾದ ಬೃಹತ್ ಹಾರ ಹಾಕಿ ಕಾರ್ಯಕರ್ತರು ಸ್ವಾಗತಿಸಿದ್ರು.. ಹಳ್ಳಿಯಲ್ಲೂ ಮಹಿಳೆಯರು ಪೂರ್ಣಕುಂಭ ಹೊತ್ತು ಆಶೀರ್ವದಿಸಿದ್ರು. ಜೆಡಿಎಸ್ ಬಿಜೆಪಿಯ ಬಿಟೀಮ್ ಅಲ್ಲ. ಕಾಂಗ್ರೆಸ್ ಬಿಜೆಪಿಯ ಬಿ.ಟೀಂ ಅಂತಾ ದಳಪತಿ ಗುಡುಗಿದ್ರು.

ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಸಂಸದ ಪ್ರಜ್ವಲ್ ರೇವಣ್ಣ, JDS ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬಿಜೆಪಿ, ಕಾಂಗ್ರೆಸ್ ವಿರುದ್ಧ ವಾಗ್ಬಾಣಗಳನ್ನೇ ಬಿಟ್ರು.

ಪಂಚರತ್ನ ರಥಯಾತ್ರೆ ಉದ್ದಕ್ಕೂ ಕಾರ್ಯಕರ್ತರು ದಳಪತಿಗೆ ಬೃಹತ್ ಸೇಬಿನ ಹಾರ, ಹೂವಿನ ಹಾರಗಳನ್ನ ಹಾಕಿ ವೆಲ್ ಕಮ್ ಮಾಡಿದ್ರು. ಇಂದು ರಾತ್ರಿ ಸಾದಲಿಯಲ್ಲಿ ಹೆಚ್ ಡಿಕೆ ಗ್ರಾಮ ವಾಸ್ತವ್ಯ ಹೂಡಲಿದ್ದು, ನಾಳೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ಸಾಗಲಿದೆ.

ಆನಂದ್ ನಂದಗುಡಿ ಸ್ಪೆಷಲ್ ಕರೆಸ್ಪಾಂಡೆಂಟ್ ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments