Thursday, August 28, 2025
HomeUncategorizedಮತದಾರರ ಪಟ್ಟಿ ತಯಾರು ಮಾಡುವಲ್ಲಿ ಅನುಭವದ ಕೊರತೆ ಇದೆ : ಬಸನಗೌಡ ಪಾಟೀಲ್ ಯತ್ನಾಳ

ಮತದಾರರ ಪಟ್ಟಿ ತಯಾರು ಮಾಡುವಲ್ಲಿ ಅನುಭವದ ಕೊರತೆ ಇದೆ : ಬಸನಗೌಡ ಪಾಟೀಲ್ ಯತ್ನಾಳ

ವಿಜಯಪುರ : ಮಹಾನಗರ ಪಾಲಿಕೆ ಮತದಾರರ ಪಟ್ಟಿ ತಯಾರು ಮಾಡುವಲ್ಲಿ ಅನುಭವದ ಕೊರತೆ ಇದೆ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ವಿಜಯಪುರ ಮಹಾನಗರ ಪಾಲಿಕೆ ಎಲೆಕ್ಷನ್ ವೇಳೆ ಸಾಕಷ್ಟು ಡಿಲೀಟ್ ಆಗಿವೆ. ಮಹಾನಗರ ಪಾಲಿಕೆ ಮತದಾರರ ಪಟ್ಟಿ ತಯಾರು ಮಾಡುವಲ್ಲಿ ಅನುಭವದ ಕೊರತೆ ಇದೆ. ಹಾಗಾಗಿ ಬದುಕಿದ್ದವರು ಸತ್ತಿದ್ದಾರೆ, ಸತ್ತವರು ಬದುಕಿದ್ದಾರೆ ಎಂಬಂತೆ ಆಗಿದೆ. ಇದು ಯಾವುದೋ ಒಂದೇ ಕಮ್ಯೂನಿಟಿಗೆ ಆಗಿದ್ದಲ್ಲಾ ಎಂದರು.

ಇನ್ನು, ಮುಸ್ಲಿಂ & ಹಿಂದೂಗಳದ್ದು ಆಗಿವೆ. ವಿಧಾನಸಭೆ ಚುನಾವಣೆಗೆ ಕಂದಾಯ ಇಲಾಖೆಯವರು ಮಾಡ್ತಾರೆ, ಅವರು ವ್ಯವಸ್ಥಿತವಾಗಿ ಮಾಡ್ತಾರೆ. ಈಗ ಆಪ್ ಬಂದಿದೆ, ದೇಶದಲ್ಲಿ ಯಾವುದೋ‌ ಮೂಲೆಯಲ್ಲಿ ಸೇರಿ ಎರಡೆರಡು ಓಟರ್ ಐಡಿ ಇದ್ರೂ ಡಿಲೀಟ್ ಆಗ್ತಾವೆ. ಇನ್ನು ಹದಿನೈದು ದಿನದಲ್ಲಿ ರಾಷ್ಟ್ರೀಯ ಆಪ್ ಬರೋದಿದೆ. ಅದು ಬಂದ್ರೆ ಒಬ್ಬ ಮತದಾರ ಕಾಶ್ಮೀರದಲ್ಲೂ ಹಾಗೂ ವಿಜಯಪುರದಲ್ಲೂ ಓಟರ್ ಐಡಿ ಮಾಡಿಸಿದ್ರೆ ಅದುತ್ತಾಗುತ್ತದೆ. ಅವರು ಒಂದೇ ಕಡೆ ಆಪ್ಷನ್ ಇಟ್ಕೊಳೋಕೆ ಅವಕಾಶ ಇದೆ, ಇನ್ನೊಂದು ಅಟೊಮೇಟಿಕ್ ಆಗಿ ಡಿಲೀಟ್ ಆಗುತ್ತದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular

Recent Comments