Tuesday, September 2, 2025
HomeUncategorizedಶ್ರದ್ಧಾ ವಾಲ್ಕರ್‌ ಕೇಸ್‌ನಂತೆ ಮತ್ತೊಂದು ಕೇಸ್‌ ರಿವೀಲ್‌

ಶ್ರದ್ಧಾ ವಾಲ್ಕರ್‌ ಕೇಸ್‌ನಂತೆ ಮತ್ತೊಂದು ಕೇಸ್‌ ರಿವೀಲ್‌

ದೇಶಾದ್ಯಂತ ಸಾಕಷ್ಟು ಸುದ್ದಿಯಲ್ಲಿರುವ ಶ್ರದ್ಧಾ ವಾಲ್ಕರ್‌ ಭೀರಕರ ಹತ್ಯೆ ಪ್ರಕರಣದ ತನಿಖೆ ಮುಂದುವರೆದಿದೆ.
ಶ್ರದ್ಧಾಳನ್ನು 35 ಪೀಸ್‌ ಮಾಡಿ ಅರಣ್ಯದಲ್ಲಿ ಬಿಸಾಡಿದ್ದ ಅಫ್ತಾಬ್‌ಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ದೇಹದ ಭಾಗಗಳನ್ನು ಪತ್ತೆ ಹಚ್ಚುವ ಕಾರ್ಯ ಸಾಗಿದ್ದು, ಈಗಾಗಲೇ ಕೆಲ ಮೂಳೆ, ಹಾಗು ತಲೆಬುರುಡೆ ಸಿಕ್ಕಿದೆ ಎನ್ನಲಾಗ್ತಿದೆ. ಆದ್ರೆ, ಈ ಪ್ರಕರಣದ ಮಧ್ಯೆಯೇ ಮತ್ತೊಂದು ಪ್ರಕರಣ ರಿವೀಲ್‌ ಆಗಿದೆ. ಉತ್ತರ ಪ್ರದೇಶದ ಅಜಂಗಡದಲ್ಲಿ ಮಾಜಿ ಪ್ರೇಯಸಿಯ ದೇಹವನ್ನು ಆರು ತುಂಡುಗಳನ್ನಾಗಿ ಕತ್ತರಿಸಿದ ಬಾವಿಗೆ ಎಸೆಯಲಾಗಿದೆ.

ಈ ಸಂಬಂಧ ಪ್ರಿನ್ಸ್ ಯಾದವ್ ಎಂಬಾತನನ್ನು ಬಂಧಿಸಲಾಗಿದೆ. ಮಹಿಳೆಯ ರುಂಡದ ಪತ್ತೆಗಾಗಿ ಆರೋಪಿಯನ್ನು ಘಟನಾ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ಆತ ಸ್ಥಳದಲ್ಲಿ ಬಚ್ಚಿಟ್ಟಿದ್ದ ನಾಡ ಪಿಸ್ತೂಲ್ ನಿಂದ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ಹೇಳಿದ್ದಾರೆ.

ಪಶ್ಚಿಮಿ ಗ್ರಾಮದ ಹೊರ ಭಾಗದಲ್ಲಿರುವ ಬಾವಿಯಲ್ಲಿ ಇದೇ 15ರಂದು ಮೃತದೇಹ ಪತ್ತೆಯಾಗಿತ್ತು. ಮೃತಳನ್ನು ಆರಾಧನಾ ಎಂದು ಗುರುತಿಸಲಾಗಿದೆ. ಆರೋಪಿ, ಆಕೆ ಯೊಂದಿಗೆ ಸಂಬಂಧ ಹೊಂದಿದ್ದ. ಆಕೆ ಬೇರೊಬ್ಬರನ್ನು ವಿವಾಹವಾಗಿದ್ದರಿಂದ ಕೆರಳಿದ್ದ ಆತ, ತನ್ನ ಪೋಷಕರು ಹಾಗೂ ಸೋದರ ಸಂಬಂಧಿಯ ನೆರವಿನೊಂದಿಗೆ ಹತ್ಯೆ ಮಾಡಿದ್ದ ಎನ್ನಲಾಗಿದೆ.

ಇದೇ 9ರಂದು ಆರೋಪಿ ತನ್ನ ಬೈಕಿನಲ್ಲಿ ಮಹಿಳೆಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದ. ದೇವಸ್ಥಾನ ತಲುಪಿದ ಬಳಿಕ ಸಂಬಂಧಿ ಸರ್ವೇಶ್ ಜೊತೆಗೂಡಿ ಮಹಿಳೆಯನ್ನು ಕಬ್ಬಿನ ಗದ್ದೆಗೆ ಎಳೆದೊಯ್ದಿದ್ದ. ಅಲ್ಲಿ ಆಕೆಯ ದೇಹವನ್ನು ಆರು ತುಂಡುಗಳಾಗಿ ಕತ್ತರಿಸಿ ಪಾಲಿಥಿನ್ ಚೀಲದಲ್ಲಿ ತುಂಬಿದ್ದರು. ಅದನ್ನು ಬಾವಿಗೆ ಎಸೆದಿದ್ದರು. ರುಂಡವನ್ನು ಕೆರೆಯೊಂದರಲ್ಲಿ ಬಿಸಾಡಿದ್ದರು.

ಒಟ್ನಲ್ಲಿ, ಪ್ರಕರಣ ಸಂಬಂಧ ಆರೋಪಿಗಳು ಬಂಧನವಾಗಿದ್ದಾರೆ. ಆದ್ರೆ, ಶ್ರದ್ಧಾಗೆ ನ್ಯಾಯ ಸಿಗಲೇ ಬೇಕು. ಅದ್ರ ಜೊತೆಗೆ, ಆರಾಧನಾ ಹತ್ಯೆ ಆರೋಪಿ ತಕ್ಕ ಶಾಸ್ತಿಯಾಗಬೇಕು. ಇಂತಹ ಕಿರಾತಕರನ್ನು ಸುಮ್ಮನೆ ಬಿಡಬಾರದು ಅನ್ನೋ ಆಕ್ರೋಶ ಹೇಳಿಬರುತ್ತಿದೆ.

RELATED ARTICLES
- Advertisment -
Google search engine

Most Popular

Recent Comments