Tuesday, September 2, 2025
HomeUncategorizedಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲು ಸಿದ್ಧವೆಂದ ವರ್ತೂರು ಪ್ರಕಾಶ್​​

ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲು ಸಿದ್ಧವೆಂದ ವರ್ತೂರು ಪ್ರಕಾಶ್​​

ಕೋಲಾರ; ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಬಿಜೆಪಿ ಮುಖಂಡ ವರ್ತೂರ್ ಪ್ರಕಾಶ್ ಮಾತುನಾಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರದಲ್ಲಿ ಸಿದ್ದರಾಮಯ್ಯ ಟೆಂಪಲ್ ರನ್ ನಿಂದ ಜಿಲ್ಲೆಯಲ್ಲಿ ಭೂಕಂಪ ಆಗಲಿಲ್ಲ. ನನಗೆ ಇದರಿಂದ ಖುಷಿಯಾಗಿದೆ. ಸಿದ್ದರಾಮಯ್ಯ ಅವರನ್ನ ವರುಣ, ಬದಾಮಿ ಮತಕ್ಷೇತ್ರದಲ್ಲಿ ಜನ ತಿರಸ್ಕರಿಸುವ ಅಂಜಿಕೆಯಿಂದ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬಂದು ಸ್ಪರ್ಧೆ ಮಾಡುತ್ತಿದ್ದಾರೆ ಎಂದರು.

ಈವೆರಗೂ ಸಿದ್ದರಾಮಯ್ಯ ಅವರು ಶೇ 1 ರಷ್ಟು ಕುರುಬ ಸಮಾಜದವರನ್ನ ಅಳಲು ವಿಚಾರಿಸಿಲ್ಲ. ಅವರ ನೋಡಲು ಸಹ ಹೋಗಿಲ್ಲ. ಸಿದ್ದರಾಮಯ್ಯ ಈ ಮಟ್ಟದ ಬೆಳೆಯೋದರಲ್ಲಿ ನನ್ನ ಅಪಾರವಾದ ಕಾಣಿಕೆಯಿದೆ. ನಾನು ಸಿದ್ದರಾಮಯ್ಯ ಶಿಷ್ಯನಲ್ಲ, ಅವರ ಶಿಷ್ಯ ಎಂದು ಎಲ್ಲೂ ಹೇಳಬೇಡಿ ಎಂದು ವರ್ತೂರು ಹೇಳಿದರು.

ಇನ್ನು ಜೆಡಿಎಸ್ ಬಿಟ್ಟು ಸಿದ್ದರಾಮಯ್ಯ ಅವರು ಹೊರ ಬಂದಾಗ, ನಾನು ಹಾಗೂ ಹೆಚ್ ಎಂ ರೇವಣ್ಣ ಹಾಗೂ ಹೆಚ್​ ವಿಶ್ವನಾಥ್ ಸೇರಿ ಅವರಿಗೆ ಆಶ್ರಯ ನೀಡಿದ್ದೇವೆ. ಬಿಜೆಪಿ ಹೈಕಮಾಂಡ್ ಬಯಸಿದರೆ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲುತ್ತೇನೆ ಎಂದು ವರ್ತೂರು ಪ್ರಕಾಶ್​ ತಿಳಿಸಿದರು.

RELATED ARTICLES
- Advertisment -
Google search engine

Most Popular

Recent Comments