Tuesday, August 26, 2025
Google search engine
HomeUncategorizedED ವಿಚಾರಣೆ ಬಳಿಕ ನನಗೆ ತಲೆ ಸುತ್ತುತ್ತಿದೆ ಎಂದ ಡಿಕೆ ಶಿವಕುಮಾರ್​

ED ವಿಚಾರಣೆ ಬಳಿಕ ನನಗೆ ತಲೆ ಸುತ್ತುತ್ತಿದೆ ಎಂದ ಡಿಕೆ ಶಿವಕುಮಾರ್​

ನವದೆಹಲಿ: ನ್ಯಾಷನಲ್​ ಹೆರಾಲ್ಡ್​ಗೆ ಅಕ್ರಮ ಹಣ ವರ್ಗಾವಣೆ ಸಂಬಂಧಿಸಿದಂತೆ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್ ಇಡಿ ವಿಚಾರಣೆ ಎದುರಿಸಿದರು.

ಸತತ ಮೂರು ಗಂಟೆಗಳ ಇಡಿ ಅಧಿಕಾರಿಗಳ ವಿಚಾರಣೆ ನಡೆಸಿದ ಬಳಿಕ ಮಾಧ್ಯಮಗೊಂದಿಗೆ ಮಾತನಾಡಿದ ಡಿಕೆಶಿ, ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ನನಗೆ ಹಾಗೂ ನನ್ನ ತಮ್ಮ(ಡಿಕೆ ಸುರೇಶ್​) ಸಂಬಂಧಿಸಿದ ಮತ್ತಷ್ಟು ದಾಖಲೆಗಳನ್ನು ಇಡಿ ಅಧಿಕಾರಿಗಳು ಕೇಳಿದ್ದಾರೆ.  ದಾಖಲೆ ನೀಡಲು ಮೂರು ದಿನ ಕಾಲಾವಕಾಶ ನೀಡಿದ್ದಾರೆ ಎಂದರು.

ಇಡಿ ಅಧಿಕಾರಿಗಳು ಕೇಳಿದ ಉಳಿದ ದಾಖಲೆಗಳನ್ನು ಇಮೇಲ್‌ ಮುಖಾಂತರ ಕಳಿಸುತ್ತೇನೆ. ಯಾವ ಯಾವ ದಾಖಲೆಗಳನ್ನು ಕೇಳಿದ್ದಾರೆ ಅಂತಾ ಬಹಿರಂಗಗೊಳಿಸಲ್ಲ. ಆದಾಯದ ಮೂಲದ ಬಗ್ಗೆ ಇಂದು ಪ್ರಶ್ನೆ ಮಾಡಿದ್ದಾರೆ. ಸಂಬಂಧಿಸಿದ ದಾಖಲೆಗಳನ್ನು ತೋರಿಸಬೇಕು, ತೋರಿಸುತ್ತೇನೆ.

ಇನ್ನು ಬಿಜೆಪಿಗೆ ಸೇರಲು ಒತ್ತಡವಿದೆಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಆ ವಿಚಾರದ ಬಗ್ಗೆ ಮಾತನಾಡಲು ಹೋದ್ರೆ ನನಗೆ ತಲೆ ಸುತ್ತುತ್ತದೆ. ಈಗ ಆ ವಿಚಾರದ ಬಗ್ಗೆ ಹೇಳುವುದು ಬೇಡ. ಈಗ ಆ ವಿಚಾರ ಬಹಿರಂಗಗೊಳಿಸುವುದು ಸರಿಯಲ್ಲ. ನಾವು ಈ ಕೇಸ್​ ಎದುರಿಸಬೇಕು. ಹೀಗಾಗಿ ಎದುರಿಸುತ್ತೇನೆ ಎಂದರು.

RELATED ARTICLES
- Advertisment -
Google search engine

Most Popular

Recent Comments