Tuesday, September 2, 2025
HomeUncategorizedಆನ್ಲೈನ್‌ನಲ್ಲಿ ಮೋಸ; ಮನನೊಂದು ಪತ್ರ ಬರೆದು ಉಪನ್ಯಾಸಕಿ ಆತ್ಮಹತ್ಯೆ

ಆನ್ಲೈನ್‌ನಲ್ಲಿ ಮೋಸ; ಮನನೊಂದು ಪತ್ರ ಬರೆದು ಉಪನ್ಯಾಸಕಿ ಆತ್ಮಹತ್ಯೆ

ಬೀದರ್​​; ಆನ್ಲೈನ್‌ನಲ್ಲಿ ಮೋಸ ಹೋದ ಉಪನ್ಯಾಸಕಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ನಡೆದಿದೆ.

ನವೆಂಬರ್ 9 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 28 ವರ್ಷದ ಆರತಿ ಕನಾಟೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕಿ. ಮೃತ ಆರತಿ ಅವರು ಆನ್ಲೈನ್‌ನಲ್ಲಿ ಇನ್ವೆಸ್ಟ್ ಮಾಡಿ 2.5 ಲಕ್ಷ ರೂ. ಕಳೆದುಕೊಂಡಿದ್ದರು. ಸಾಲ ಮಾಡಿಕೊಂಡು ಆನ್ಲೈನ್‌ನಲ್ಲಿ ಇನ್ವೆಸ್ಟ್ ಮಾಡಿದ್ದರು ಎನ್ನಲಾಗಿದೆ.

ಹಣ ವಾಪಸಾಗುವ ಯಾವುದೇ ಲಕ್ಷಣಗಳು ಕಂಡು ಬಾರದ ಹಿನ್ನೆಲೆಯಲ್ಲಿ ಮನನೊಂದು ಆರತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್ ಬರೆದಿಟ್ಟು ಉಪನ್ಯಾಸಕಿ ಆರತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಸವಕಲ್ಯಾಣ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

RELATED ARTICLES
- Advertisment -
Google search engine

Most Popular

Recent Comments