Friday, August 22, 2025
Google search engine
HomeUncategorizedಕಲಬುರಗಿಯಲ್ಲಿ ತಾರಕ್ಕಕೇರಿದ ಪೋಸ್ಟರ್ ವಾರ್​..!

ಕಲಬುರಗಿಯಲ್ಲಿ ತಾರಕ್ಕಕೇರಿದ ಪೋಸ್ಟರ್ ವಾರ್​..!

ಕಲಬುರಗಿ : ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವೇ ತಿಂಗಳು ಬಾಕಿಯಿದೆ. ಹೈವೋಲ್ಟೆಜ್ ಕ್ಷೇತ್ರ ಕಲಬುರಗಿ ಜಿಲ್ಲೆ ಚಿತ್ತಾಪುರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಟಾಕ್‌ಫೈಟ್ ತೀವ್ರವಾಗಿದೆ. ಅಷ್ಟಕ್ಕೂ ಪ್ರಿಯಾಂಕ್ ಖರ್ಗೆ ಕಾಣೆಯಾಗಿದಾರೆ ಅಂತಾ ಬಿಜೆಪಿ ಮುಖಂಡ ಅರವಿಂದ ಚೌವ್ಹಾಣ್ ಮತ್ತು ಮಣಿಕಂಠ್ ರಾಠೋಡ್ ಪೋಸ್ಟರ್ ಅಂಟಿಸಿದ ವಿಚಾರ ಇದೀಗ ದೊಡ್ಡಮಟ್ಟದಲ್ಲಿ ಕಾಂಟ್ರೋವರ್ಸಿ ಕ್ರಿಯೆಟ್ ಆಗಿದೆ.. ಇನ್ನೂ ಬಿಜೆಪಿ ಪೋಸ್ಟರ್ ಅಭಿಯಾನಕ್ಕೆ ಕೆರಳಿ ಕೆಂಡವಾಗಿರೋ ಶಾಸಕ ಪ್ರಿಯಾಂಕ್ ಖರ್ಗೆ, ನಾನು ಮನಸ್ಸು ಮಾಡಿದ್ರೆ ಒಬ್ಬನೇ ಒಬ್ಬ ಬಿಜೆಪಿ ಲೀಡರ್‌ನನ್ನ ಸಹ ಊರಲ್ಲಿ ಓಡಾಡಲು ಬಿಡಲ್ಲ. ಕೇವಲ ಚಿತ್ತಾಪುರ ಕ್ಷೇತ್ರವಲ್ಲ, ಕಲಬುರಗಿ ಜಿಲ್ಲೆಯಲ್ಲೆ ಓಡಾಡಲು ಬಿಡುವುದಿಲ್ಲ ಅಂತಾ ಕೇಸರಿಪಡೆ ವಿರುದ್ಧ ಗುಡುಗಿದ್ದಾರೆ.

ಇನ್ನೂ ಪ್ರಿಯಾಂಕ್ ಹೇಳಿಕೆಗೆ ಟಕ್ಕರ್ ಕೊಡಲು ಹೋಗಿ ಬಿಜೆಪಿ ಮುಖಂಡರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ..‌ ನಿಮಗೆ ಏನು ಎಕೆ 47 ನಿಂದ ಶೂಟ್ ಮಾಡೋದಿದೆಯಾ..? ಶೂಟ್ ಮಾಡೋದಿದ್ರೆ ಮಾಡಿ. ನಾವು ಸಾಯೋದಕ್ಕೆ ರೆಡಿಯಿದಿವಿ.. ಇದರ ಜೊತೆಗೆ ನಾವು ನಿಮಗೆ ಶೂಟ್ ಮಾಡೋದಕ್ಕೆ ರೆಡಿ ಇದಿವಿ ಅಂತಾ ಪ್ರಿಯಾಂಕ್ ಖರ್ಗೆ ವಿರುದ್ಧ ಮಣಿಕಂಠ್ ರಾಠೋಡ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ..

ಮಣಿಕಂಠ್ ರಾಠೋಡ್ ಕಾಂಟ್ರೋವರ್ಸಿ ಹೇಳಿಕೆಗೆ ಕಾಂಗ್ರೆಸ್ ಕೆರಳಿಕೆಂಡವಾಗಿದೆ. ಈ ಬಗ್ಗೆ ಕಲಬುರಗಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಡಾ.ಶರಣಪ್ರಕಾಶ್ ಪಾಟೀಲ್, ಬಿಜೆಪಿ ಭ್ರಷ್ಟಾಚಾರ ಬಯಲಿಗೆಳೆದಿದ್ದಕ್ಕೆ ಸರ್ಕಾರ ಪ್ರಿಯಾಂಕ್ ವಿರುದ್ಧ ಸೇಡು ತೀರಿಸಿಕೊಳ್ತಿದೆ.. ಪ್ರಿಯಾಂಕ್ ಖರ್ಗೆರನ್ನ ಕೊಲೆ ಮಾಡಿಸುವ ಕೆಲಸಕ್ಕೆ ಮುಂದಾಗಿದೆ ಅಂತಾ ಕಿಡಿಕಾರಿದ್ದಾರೆ.

ಅದೇನೇ ಇರಲಿ ರಾಜ್ಯದಲ್ಲಿ ಪೇ ಸಿಎಂ ಪೋಸ್ಟರ್ ವಿವಾದ ತಣ್ಣಗಾದ ಬೆನ್ನಲ್ಲೆ, ಇದೀಗ ಹೈವೋಲ್ಟೆಜ್ ಕ್ಷೇತ್ರ ಚಿತ್ತಾಪುರದಲ್ಲಿ ಪೋಸ್ಟರ್ ವಿವಾದ ಕಾಂಗ್ರೆಸ್ ಮತ್ತು ಕೇಸರಿಪಡೆ ಮಧ್ಯೆ ದೊಡ್ಡ ಕಾಂಟ್ರೋವರ್ಸಿ ಕ್ರಿಯೆಟ್ ಆಗಿದೆ.. ಇದು ಮುಂದೆ ಯಾವ ಸ್ವರೂಪ ಪಡೆಯುತ್ತೋ ಕಾದು ನೋಡಬೇಕು..

 ಅನಿಲ್‌ಸ್ವಾಮಿ, ಪವರ್ ಟಿವಿ, ಕಲಬುರಗಿ

RELATED ARTICLES
- Advertisment -
Google search engine

Most Popular

Recent Comments