ಮೈಸೂರು:ಮೈಸೂರಿನಲ್ಲಿ ಕನಕದಾಸ ಜಯಂತಿ ಮತ್ತು ಕೆಂಪೇಗೌಡ ಜಯಂತಿ ಆಚರಣೆ. ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಅದ್ದೂರಿ ಮೆರವಣಿಗೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಕಾರ್ಯಕರ್ತರು ಮತ್ತು ಮಹಾನಗರ ಪಾಲಿಕೆಯ ಹಲವು ಸದಸ್ಯರುಗಳು ಕಾಂಗ್ರೆಸ್ ಪ್ರಮುಖ ಮುಖಂಡರು ಮತ್ತು ರಾಜಕೀಯ ನಾಯಕರು ಮೆರವಣಿಗೆಯಲ್ಲಿ ಭಾಗಿ. ಕೆಂಪೇಗೌಡ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ಶಾಸಕ ಯತೀಂದ್ರ ಸಿದ್ದರಾಮಯ್ಯ. ಬೆಳ್ಳಿರಥದಲ್ಲಿ ಕನಕದಾಸರ ಪ್ರತಿಮೆ ಮೆರವಣಿಗೆ.
ರಥಕ್ಕೆ ಚಾಲನೆ ನೀಡಿದ ಶಾಸಕ ಯತೀಂದ್ರ ಸಿದ್ದರಾಮಯ್ಯ ಮತ್ತು ಎಂ ಕೆ ಸೋಮಶೇಖರ್ ಹಾಗೂ ಮೇಯರ್ ಶಿವಕುಮಾರ್. ಮೆರವಣಿಗೆಯಲ್ಲಿ ಹಲವು ವಿಶೇಷ ರೀತಿಯಾದ ಸ್ತಬ್ಧ ಚಿತ್ರಗಳು ಹಲವು ಕಲಾತಂಡಗಳು ಮತ್ತು ನೃತ್ಯ ತಂಡಗಳು ಭಾಗಿ.


