Sunday, September 14, 2025
HomeUncategorizedಡಿ. 1 ಮತ್ತು 5ರಂದು ವಿಧಾನಸಭೆ ಚುನಾವಣೆ

ಡಿ. 1 ಮತ್ತು 5ರಂದು ವಿಧಾನಸಭೆ ಚುನಾವಣೆ

ಗುಜರಾತ್​ : ಡಿಸೆಂಬರ್ 1 ಮತ್ತು 5ರಂದು ಗುಜರಾತ್ ವಿಧಾನಸಭೆಗೆ 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಒಟ್ಟು 182 ಕ್ಷೇತ್ರಗಳ ಪೈಕಿ 160 ಕ್ಷೇತ್ರಗಳಿಗೆ ಇವತ್ತು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಅಭ್ಯರ್ಥಿಗಳನ್ನ ಘೋಷಿಸಿದ್ದಾರೆ.

ಐವರು ಸಚಿವರು ಸೇರಿದಂತೆ 38 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಕಳೆದ ತಿಂಗಳು ಮೊರ್ಬಿಯಲ್ಲಿ ಸೇತುವೆ ಕುಸಿದು 135 ಮಂದಿ ಸಾವನ್ನಪ್ಪಿದ್ದು, ಮೊರ್ಬಿ ಶಾಸಕ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಬ್ರಿಜೇಶ್ ಮೆರ್ಜಾ ಅವರು ಬಿಜೆಪಿ ಘೋಷಿಸಿದ 160 ಅಭ್ಯರ್ಥಿಗಳ ಪಟ್ಟಿಯಿಂದ ಕೈಬಿಡಲಾಗಿದೆ.

182 ಕ್ಷೇತ್ರಗಳಿಗೆ 160 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಿಸಿದೆ. ಇದ್ರಲ್ಲಿ ಐವರು ಹಾಲಿ ಗುಜರಾತ್ ಸಚಿವರಿಗೆ ಬಿಜೆಪಿ ಟಿಕೆಟ್ ಕೊಟ್ಟಿಲ್ಲ. ಅಷ್ಟೇ ಅಲ್ಲ 33 ಹಾಲಿ ಬಿಜೆಪಿ ಶಾಸಕರನ್ನೂ ಕೈಬಿಟ್ಟು ಹೊಸಬರು, ಯುವಕರು, ಮಾಜಿ ಶಾಸಕರುಗಳಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಬಿಜೆಪಿಯ ಮೊದಲ ಪಟ್ಟಿಯಲ್ಲಿ 14 ಮಹಿಳೆಯರು, 13 ಪರಿಶಿಷ್ಟ ಜಾತಿ ಮುಖಂಡರು ಮತ್ತು 24 ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.

RELATED ARTICLES
- Advertisment -
Google search engine

Most Popular

Recent Comments