Monday, September 1, 2025
HomeUncategorizedರಾಷ್ಟ್ರ ರಾಜಧಾನಿಯಲ್ಲೂ ಕಾಂತಾರ ಕಹಳೆ

ರಾಷ್ಟ್ರ ರಾಜಧಾನಿಯಲ್ಲೂ ಕಾಂತಾರ ಕಹಳೆ

ಕಾಂತಾರದ ಅಬ್ಬರ ಮುಂದುವರೆದಿದೆ. ಎಲ್ಲಾ ಭಾಷೆಗಳ ಬಾಕ್ಸ್ ಆಫೀಸ್‌ನಲ್ಲೂ ಬಿರುಗಾಳಿ ಎಬ್ಬಿಸುತ್ತಿದೆ. ಗೆಲುವಿನ ಅಲೆಯಲ್ಲಿ ತೇಲುತ್ತಿರುವ ರಿಷಬ್ ಶೆಟ್ಟಿ ಸದ್ಯ ದೆಹಲಿಯಲ್ಲೂ ಕರುನಾಡ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಸಪ್ತಮಿ ಗೌಡ ಜೊತೆ ಇಂಡಿಯಾ ಗೇಟ್ ಎದುರು ಪೋಸ್ ಕೊಟ್ಟಿದ್ದಾರೆ! ರಿಷಬ್ ಶೆಟ್ಟಿ ದೇಶದ ರಾಜಧಾನಿಯಲ್ಲಿದ್ದಾರೆ ಮತ್ತು ಇಂಡಿಯಾ ಗೇಟ್‌ನಲ್ಲಿ ತಮ್ಮ ಮೆಗಾ ಬ್ಲಾಕ್‌ಬಸ್ಟರ್ ‘ಕಾಂತಾರ’ವನ್ನು ಪ್ರಚಾರ ಮಾಡಿದ್ದಾರೆ. ಜೊತೆಗೆ ನಟಿ ಸಪ್ತಮಿ ಗೌಡ ಕೂಡ ಇದ್ದಾರೆ. ಇಬ್ಬರ ಫೋಟೋಗಳು ಇದೀಗ ಸಖತ್ ವೈರಲ್ ಆಗಿವೆ.ಇಬ್ಬರೂ ಸ್ಟಾರ್‌ಗಳ ಜೋಡಿ ಇಂಡಿಯಾ ಗೇಟ್‌ನಲ್ಲಿ ಅದ್ಭುತವಾಗಿ ಕಾಣುತ್ತಿದೆ.

ಶಿವ-ಲೀಲಾರನ್ನು ಮತ್ತೆ ಒಟ್ಟಿಗೆ ನೋಡಿದ ಅಭಿಮಾನಿಗಳು ಸಂಭ್ರಮ ಪಡುತ್ತಿದ್ದಾರೆ. ಚಿತ್ರದಲ್ಲಿ, ರಿಷಬ್ ಮತ್ತು ಸಪ್ತಮಿ ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿರುವುದನ್ನು ಕಾಣಬಹುದು. ಇಬ್ಬರ ಸ್ಟೈಲ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.ಕನ್ನಡ ಮತ್ತು ಹಿಂದಿ ಅವತರಣಿಕೆಗಳಲ್ಲಿ ಲಕ್ಷಗಟ್ಟಲೆ ಜನರ ಮನ ಗೆದ್ದಿರುವ ಕಾಂತಾರ ಸತತವಾಗಿ ಬಾಕ್ಸ್ ಆಫೀಸ್ ಕಲೆಕ್ಷನ್ ಹೆಚ್ಚಿಸುತ್ತಿದೆ. ವಿಮರ್ಶಕರು ಹೇಳುವ ಪ್ರಕಾರ ಈ ಸರಣಿ ಬಹುಕಾಲ ಮುಂದುವರಿಯುತ್ತದೆ.

RELATED ARTICLES
- Advertisment -
Google search engine

Most Popular

Recent Comments