Monday, August 25, 2025
Google search engine
HomeUncategorizedಚಂದ್ರಗ್ರಹಣ ಹಿನ್ನೆಲೆ, ಆಗಲೂ ಹುಲಿಗೆಮ್ಮ ದೇವಿ ದರ್ಶನ ಬಂದ್..!

ಚಂದ್ರಗ್ರಹಣ ಹಿನ್ನೆಲೆ, ಆಗಲೂ ಹುಲಿಗೆಮ್ಮ ದೇವಿ ದರ್ಶನ ಬಂದ್..!

ಕೊಪ್ಪಳ: ನಾಳೆ ಗ್ರಸ್ತೋದಿತ ಚಂದ್ರಗ್ರಹಣ ಹಿನ್ನೆಲೆ, ದಕ್ಷಿಣ ಭಾರತ ಪ್ರಮುಖ ಧಾರ್ಮಿಕ ಕೇಂದ್ರ ಶ್ರೀಹುಲಿಗೆಮ್ಮ ದೇವಿಯ ದರ್ಶನ ಇಲ್ಲ. ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀಹುಲಿಗೆಮ್ಮದೇವಿ ದೇವಸ್ಥಾನದಲ್ಲಿ, ಮಂಗಳವಾರ ಮದ್ಯಾಹ್ನ 1 ಗಂಟೆಯಿಂದ ಸಂಜೆ 8 ಗಂಟೆಯವರೆಗೂ ದೇವಸ್ಥಾನ ಬಂದ್ ಆಗಲಿದೆ.

ಗ್ರಹಣವು ಮಧ್ಯಾಹ್ನ 2.39ಕ್ಕೆ ಸ್ಪರ್ಶವಾಗುವ ಹಿನ್ನೆಲೆ, ಕಳೆದ ಹದಿನೈದು ದಿನಗಳ ಹಿಂದೆ ಸಂಭವಿಸಿದ್ದ ಸೂರ್ಯ ಗ್ರಹಣ.
ಆಗಲೂ ಹುಲಿಗೆಮ್ಮ ದೇವಿ ದರ್ಶನ ಬಂದ್ ಮಾಡಲಾಗಿತ್ತು. ಹುಣ್ಣಿಮೆ ಹಾಗೂ ಮಂಗಳವಾರದಂದು ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಆಗಮಿಸುವ ಸಾಧ್ಯತೆಯಿದ್ದು, ಮದ್ಯಾಹ್ನದವರೆಗೆ ಮಾತ್ರ ದೇವಿ ದರ್ಶನಕ್ಕೆ, ದೇವಸ್ಥಾನದ ಆಡಳಿತ ಮಂಡಳಿ ಅವಕಾಶ ಮಾಡಿಕ್ಕೊಟ್ಟಿದೆ. ಮುಂಜಾನೆಯಿಂದ ಮದ್ಯಾಹ್ನದವರೆಗೆ ಅಧಿಕ ಭಕ್ತರು ಬರುವ ನಿರೀಕ್ಷೆಯಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

RELATED ARTICLES
- Advertisment -
Google search engine

Most Popular

Recent Comments