Monday, August 25, 2025
Google search engine
HomeUncategorizedಸಂಸದ ನಳೀನ್ ಕುಮಾರ್ ರವರ ವಿರುದ್ಧ ಗರಂ ಆದ ಮಹಾಲಿಂಗೇಗೌಡ ಮುದ್ದನಘಟ್

ಸಂಸದ ನಳೀನ್ ಕುಮಾರ್ ರವರ ವಿರುದ್ಧ ಗರಂ ಆದ ಮಹಾಲಿಂಗೇಗೌಡ ಮುದ್ದನಘಟ್

ಮಂಡ್ಯ:ಕುಮಾರಸ್ವಾಮಿ ಬಗ್ಗೆ ಮಾತನಾಡಲು ಕಟೀಲ್ ಗೆ ನೈತಿಕತೆ ಇಲ್ಲ. ‘ತಾಯಿ ಹೃದಯ ಹೊಂದಿರುವುದು ನಮ್ಮ ಕುಮಾರಣ್ಣ’,
‘ಜೇನುಗೂಡಿಗೆ ಕಲ್ಲು ಹೊಡೆಯುವ ಸಾಹಸ ಮಾಡಬೇಡಿ ಕಟೀಲ್’ ಎಂದು ನಳೀನ್ ಕುಮಾರ್ ಕಟೀಲ್ ಗೆ ಎಚ್ಚರಿಕೆ ಕೊಟ್ಟ ಮಹಾಲಿಂಗೇಗೌಡ ಮುದ್ದನಘಟ್ಟ.

ಮಹಾಲಿಂಗೇಗೌಡ ಮುದ್ದನಘಟ್ ರವರು ಜೆಡಿಎಸ್‌ ಜಿಲ್ಲಾ ವಕ್ತಾರರಾಗಿದ್ದು, ಕುಮಾರಣ್ಣನ ಬಗ್ಗೆ ಮಾತನಾಡಬೇಕಾದ್ರೆ ಜ್ಞಾನ ಇಟ್ಟುಕೊಳ್ಳಿ. ಅವರ ಲಘುವಾಗಿ ಮಾತನಾಡುದ್ರೆ ಸರಿ ಇರಲ್ಲ. ತಾಯಿ ಹೃದಯ ಹೊಂದಿರುವುದು ಕುಮಾರಣ್ಣ.ದೀನದಲಿತರ ಹಾಗೂ ರೈತಾಪಿ ವರ್ಗದವರಿಗೆ ಮರುಗುವ ಮನಸ್ಸು ಅವರದ್ದು. ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಆ ಸಮಯದಲ್ಲಿ ಕಣ್ಣೀರು ಹಾಕುವುದು ತಪ್ಪಾ?. ಅಭಿವೃದ್ಧಿಗೆ ಕಣ್ಣೀರು ಹಾಕುತ್ತಾರೆ ಹೊರತು,ಅಧಿಕಾರ ಹಿಡಿಯುವುದಕಲ್ಲ.

ನಿಮ್ಮ ಈ ಕೀಳು ಮಟ್ಟದ ರಾಜಕಾರಣವನ್ನು ಜೆಡಿಎಸ್‌ ಮಾಡುವುದಿಲ್ಲ.  ಮಂಡ್ಯ ಜಿಲ್ಲೆಯಲ್ಲಿ ಕುಟುಂಬ ರಾಜಕಾರಣದ ಅಂಗಡಿ ಬಂದ್ ಮಾಡ್ತೇವೆ ಕಟೀಲ್ ಹೇಳಿಕೆ ವಿಚಾರ.ಕೆ.ಆರ್.ಪೇಟೆಯಲ್ಲಿ ಮೊದಲ ಬಾರಿಗೆ ತೆರೆದ ಅಂಗಡಿ 2023ಕ್ಕೆ ಮುಚ್ಚುತ್ತದೆ.ಮ್ಯಾಚ್ ಫಿಕ್ಸಿಂಗ್ ರಾಜಕಾರಣದಿಂದ ಕೆ.ಆರ್.ಪೇಟೆಯಲ್ಲಿ ಅಂಗಡಿ ತೆರೆದಿದ್ರಿ. ನಮ್ಮ ಜೆಡಿಎಸ್‌ ಅಂಗಡಿಯನ್ನು ಮುಚ್ಚಲು ಸಾಧ್ಯವಿಲ್ಲ.

ಜನರೇ ನಿಮಗೆ 2023 ಕ್ಕೆ ಉತ್ತರ ಕೊಡುತ್ತಾರೆ. ಈಗಾಗಲೇ ಜೆಡಿಎಸ್‌ನಿಂದ ಪಂಚರತ್ನ ಯೋಜನೆಗೆ ಸಿದ್ದವಾಗಿದ್ದೇವೆ. ರಾಜ್ಯದ ಪ್ರತಿ ಮನೆಯನ್ನು ತಲುಪುತ್ತೇವೆ ಎಂಬುದರ ಅರಿವು ನಿಮಗಿರಲಿ.  ಕುಟುಂಬ ರಾಜಕಾರಣ ಎಲ್ಲ ಪಕ್ಷದಲ್ಲಿಯೂ ಇದೆ. ಕಾಂಗ್ರೆಸ್,ಬಿಜೆಪಿಯಲ್ಲಿಯೂ ಕುಟುಂಬ ರಾಜಕಾರಣವಿದೆ. ನಿಮ್ಮ ಸಭೆ ನೋಡಿ ನಾವು ಯಾಕೆ ಎದರಬೇಕು? ಜೆಡಿಎಸ್‌ ಸಭೆಯಲ್ಲಿ ಡ್ರೋಣ್‌ ಕ್ಯಾಮೆರಾದಲ್ಲಿ ನೋಡಿ,ಜನ ಸಾಗರವೇ ನೆರೆದಿರುತ್ತದೆ. ನಿಮ್ಮಿಂದ ಜೆಡಿಎಸ್‌ ಪಕ್ಷವು ಬುದ್ದಿಹೇಳಿಸಿಕೊಳ್ಳಬೇಕಿಲ್ಲ. ಮತ್ತೊಮ್ಮೆ ಇಂತಹ ಹೇಳಿಕೆ ನಡಿದ್ರೆ ನಾವು ಸಹ ತಕ್ಕ ಉತ್ತರ ನೀಡುತ್ತೇವೆ.

RELATED ARTICLES
- Advertisment -
Google search engine

Most Popular

Recent Comments