Monday, August 25, 2025
Google search engine
HomeUncategorizedಭವಾನಿ ರೇವಣ್ಣ ರಾತ್ರಿ ಎರಡು ಗಂಟೆ ಮೂರು ಗಂಟೆ ತನಕ ನಶೆಯಲ್ಲಿ ಇರ್ತಾರೆ : ಶಾಸಕ...

ಭವಾನಿ ರೇವಣ್ಣ ರಾತ್ರಿ ಎರಡು ಗಂಟೆ ಮೂರು ಗಂಟೆ ತನಕ ನಶೆಯಲ್ಲಿ ಇರ್ತಾರೆ : ಶಾಸಕ ಪ್ರೀತಂಗೌಡ

ಹಾಸನ : ನಮ್ಮ ತಂದೆ ಯವರು ಅವರ ಶಿಫಾರಸಿನಂತೆ ಬಿಬಿಎಂಪಿಯಲ್ಲಿ ಕೆಲಸ ಮಾಡಿದ್ದರೆ ಅವರು ಹೇಳಿರೊ ಮಾತು ಸತ್ಯ ಆದರೆ ಆ ಕ್ಷಣಕ್ಕೆ ನಾನು ರಾಜಿನಾಮೆ ಕೊಡ್ತೇನೆ ಎಂದು ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರಿ ಎರಡು ಗಂಟೆ ಮೂರು ಗಂಟೆ ತನಕ ನಶೆಯಲ್ಲಿ ಇರ್ತಾರೆ ಅಂತಾ ಜನ ಹೇಳಿದ್ದು. ನೀವು ಕೇಳಿದಂತೆ ಜನರು ನನಗೆ ಹೇಳಿದ ಮಾತಿದು. ಒಂದು ಡಿಎನ್ ಎ ಪ್ರಾಬ್ಲಮ್ ಇರಬೇಕು, ಅವ್ವಾ ಮಗ ಇಬ್ಬರೂ ಹಾಗೆ ಮಾತಾಡಿದ್ದಾರೆ. ಸುಳ್ಳು ಹೇಳೋದು ಡಿಎನ್ ಎ ಪ್ರಾಬ್ಲಂ ಇರಬೇಕು. ಇಲ್ಲಾಂದ್ರೆ ರಾತ್ರಿ ನಶೆ ಬೆಳಿಗ್ಗೆ ಆದ್ರು ಇಳಿದಿರಲ್ಲ ಹಾಗಾಗಿ ಮಾತಾಡಿರ್ತಾರೆ ಎಂದು ಭವಾನಿ ವಿರುದ್ದ ಟೀಕಿಸಿದರು.

ಇನ್ನು, ಮೂರನೇ ವಿಚಾರ ಏನಾದ್ರು ಸತ್ಯ ಇದ್ದರೆ ಅವರು ದಾಖಲೆ‌ಕೊಡಲಿ, ನಾನು ಯಾವುದೇ ವಿಚಾರ ಎತ್ತಿಲ್ಲ ವಿಚಾರ ಎತ್ತಿರೊದು ಅವರು, ನಮ್ಮ ತಂದೆ ಯವರು ಅವರ ಶಿಫಾರಸಿನಂತೆ ಬಿಬಿಎಂಪಿಯಲ್ಲಿ ಕೆಲಸ ಮಾಡಿದ್ದರೆ ಅವರು ಹೇಳಿರೊ ಮಾತು ಸತ್ಯ ಆದರೆ ಆ ಕ್ಷಣಕ್ಕೆ ನಾನು ರಾಜಿನಾಮೆ ಕೊಡ್ತೇನೆ, ಅವರು ದಾಖಲೆ ಕೊಡದಿದ್ದರೆ ಬಹುಶಃ ಅಜ್ಜಿ ಹೇಳಿದ್ದು ಹಾಗು ಯಡಿಯುರಲ್ಲಿ ಯುವಕರು ಹೇಳಿದ್ದು ಸರಿ ಅನ್ನಿಸುತ್ತೆ. ರೇವಣ್ಣ ಅವರು ಹಿಂಗೆಲ್ಲಾ ಮಾತಾಡಿಲ್ಲ ನೋಡಿ ಅವರು ಬಹಳ ಸಂಸ್ಕಾರವಂತರು. ದೇವೇಗೌಡರು ಚನ್ನಮ್ಮ ಹತ್ರಾ ಬೆಳೆದವರು ಅವರು ಸಂಸ್ಕಾರ ಕೊಟ್ಟಿದಾರೆ. ರೇವಣ್ಣ ಅವರು ಹೀಗೆ ಮಾತಾಡಿದ್ರೆ ನಾನು ಬೇರೆ ತರ ಮಾತಾಡ್ತಿದ್ದೆ ಎಂದರು.

ನಮ್ಮ ತಂದೆ ಆಲೂರು ತಾಲ್ಲೂಕಿನ ಸಿದ್ದಾಪುರ, ತಾಯಿ ಗಂಜಿಗೆರೆ, ತಾಯಿ ಹುಟ್ಟೋ ಮೊದಲೇ ಅವರ ಕುಟುಂಬ ನೂರು ಎಕರೆ ಖಾತೆದಾರರು, ನಮ್ಮ ತಂದೆ ಹುಟ್ಟೋಕು‌ ಮೊದಲು ಅವರ ಕುಟುಂಬ ಹತ್ತಾರು ಎಕರೆ ಖಾತೆದಾರರು, ಅದೇ ಸಾಲಿಗ್ರಾಮಕ್ಕೆ ಹೋಗಿ ಕೇಳಿ, ನಮ್ಮ ಅಕ್ಕಾವ್ರ ಮನೆಯಲ್ಲಿ ಎಷ್ಟು ಗುಂಟೆ ಖಾತೆ ಇತ್ತು ಕೇಳಿ, ಎಕರೆ ಬೇಡಾ ಎಷ್ಟು ಗುಂಟೆ ಖಾತೆ ಇತ್ತು ಕೇಳಿ ಎಂದು ಭವಾನಿ ರೇವಣ್ಣ ವಿರುಧ್ದ ತೀವ್ರ ವಾಗ್ದಾಳಿ ಮಾಡಿದ್ದಾರೆ.

ಅದಲ್ಲದೇ, ಹೊಳೆನರಸೀಪುರಕ್ಕೆ ಸೊಸೆ ಆಗಿ ಬರೋದಕ್ಕು ಮೊದಲು ಅವರ ಮನೆ ಪರಿಸ್ಥಿತಿ ಏನು ಎಂದು ಆತ್ಮವಿಮರ್ಶೆ ಮಾಡಿಕೊಳ್ಳಲಿ ನಮ್ಮ ಕುಟುಂಬ ದ ಬಗ್ಗೆ ಇಡೀ ಜಿಲ್ಲೆಗೆ ಗೊತ್ತಿದೆ, ನಾನು ಹೇಳಿಕೊಳ್ಳೋ ಅವಶ್ಯಕತೆ ಇಲ್ಲ ಎಂದರು.

RELATED ARTICLES
- Advertisment -
Google search engine

Most Popular

Recent Comments