Wednesday, August 27, 2025
Google search engine
HomeUncategorizedನಕಲಿ ಅಲೋಪತಿ ವೈದ್ಯರಿಗೆ ಶಾಕ್

ನಕಲಿ ಅಲೋಪತಿ ವೈದ್ಯರಿಗೆ ಶಾಕ್

ಚಾಮರಾಜನಗರ: ನಕಲಿ ಅಲೋಪತಿ ವೈದ್ಯರಿಗೆ ಶಾಕ್, ಮೂರು ಕ್ಲೀನಿಕ್ ಬಂದ್, ಮುಂದುವರೆದ ಆಪರೇಷನ್. ಇನ್ನು ಓದಿರೋದು ಒಂದು ಕೊಡುತ್ತಿದ್ದ ಚಿಕಿತ್ಸೆ ಮತ್ತೊಂದು ಮಾಡಿ ಜನರ ಜೀವದೊಟ್ಟಿಗೆ ಚೆಲ್ಲಾಟ.

ನಕಲಿ ಅಲೋಪತಿ ವೈದ್ಯರಿಗೆ ಬಿಸಿ‌ ಮುಟ್ಟಿಸಿದ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು. ದಾಳಿ ನಡೆಸಿ ನಕಲಿ ಕ್ಲೀನಿಕ್ ಗಳನ್ನು ಬಂದ್ ಮಾಡಿಸಿರುವ ಡಿಎಚ್ ಓ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕೌದಳ್ಳಿಯಲ್ಲಿ ಘಟನೆ ನಡೆದಿದೆ.

ಹನೂರು ತಾಲೂಕಿನ ನಕಲಿ ಕ್ಲೀನಿಕ್ ಗಳ ಮೇಲೆ ಡಿಎಚ್ಒ ಡಾ.ವಿಶ್ವೇಶ್ವರಯ್ಯ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಕೌದಳ್ಳಿ ಗ್ರಾಮದಲ್ಲಿ ಇರುವ ಆದಮ್ ಕ್ಲೀನಿಕ್, ಜನತಾ ಕ್ಲೀನಿಕ್ ಹಾಗೂ ದೀಪಾ ಕ್ಲಿನಿಕ್ ಗಳಿಗೆ ನೋಟಿಸ್ ಜಾರಿಯಾಗಿದೆ.

ಹನೂರು ತಾಲೂಕಿನ ವಿವಿಧಡೆ ನಕಲಿ ಕ್ಲೀನಿಕ್ ಗಳ ಹಾವಳಿ ಹೆಚ್ಚಾದ ಹಿನ್ನಲೆ. ಸಾರ್ವಜನಿಕರ ದೂರಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಇಂದು ದಿಢೀರ್ ಕಾರ್ಯಾಚರಣೆ. ಅಜ್ಜೀಪುರ, ರಾಮಾಪುರ ಮತ್ತು ಕೂಡ್ಲೂರು, ಹೂಗ್ಯಂ ಇನ್ನಿತರೆ ಗ್ರಾಮಗಳಲ್ಲಿರುವ ಕ್ಲೀನಿಕ್ ಗಳು.
ಲೈಸೆನ್ಸ್ ಒಬ್ಬರದ್ದಾದರೇ ಚಿಕಿತ್ಸೆ ಕೊಡುವವರು ಮತ್ತೊಬ್ಬರು. ಆಯುಷ್ ವೈದ್ಯರು ಅಲೋಪತಿ ಚಿಕಿತ್ಸೆ ಕೊಡುತ್ತಿರುವುದು ಕಾರ್ಯಾಚರಣೆಯ ವೇಳೆ ಬೆಳಕಿಗೆ ಬಂದಿದೆ.

RELATED ARTICLES
- Advertisment -
Google search engine

Most Popular

Recent Comments