Sunday, August 24, 2025
Google search engine
HomeUncategorizedನವೆಂಬರ್ ಅಂತ್ಯದ ವೇಳೆಗೆ ಮದ್ದೂರು ಬೈಪಾಸ್ ಸಂಚಾರಕ್ಕೆ ಮುಕ್ತ.!

ನವೆಂಬರ್ ಅಂತ್ಯದ ವೇಳೆಗೆ ಮದ್ದೂರು ಬೈಪಾಸ್ ಸಂಚಾರಕ್ಕೆ ಮುಕ್ತ.!

ಮಂಡ್ಯ: ಬೆ೦ಗಳೂರು-ಮೈಸೂರು ದಶಪಥ ಹೆದ್ದಾರಿ ರಸ್ತೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ನವೆ೦ಬರ್‌ ಅಂತ್ಯದ ಒಳಗೆ ಮದ್ಮೂರು ಬೈಪಾಸ್‌ ಸ೦ಚಾರಕ್ಕೆ ಮುಕ್ತವಾಗಲಿದೆ ಎ೦ದು ಮೈಸೂರು ಸ೦ಸದ ಪ್ರತಾಪ್‌ ಸಿಂಹ ಮಾಹಿತಿ ನೀಡಿದ್ದಾರೆ.

ಮದ್ದೂರು ಬೈಪಾಸ್‌ ಕೆಲಸ ಬಹುತೇಕ ಕಾಮಾಗಾರಿ ಬಂದಿದ್ದು, ಕೆಲವು ಸಣ್ಣ ಪುಟ್ಟ ಕೆಲಸಗಳು ಬಾಕಿ ಇವೆ. ಮುಂದಿನ 10 ರಿಂದ 15 ದಿನದಲ್ಲಿ ಆ ಕೆಲಸ ಮುಗಿಯಲಿದೆ. ಮುಂದಿನ 2023 ಜನವರಿಯಿಂದ ಈ ರಸ್ತೆ ಮುಕ್ತವಾಗಿರಲಿದೆ.

ಮಂಡ್ಯ, ಶ್ರೀರಂಗಪಟ್ಟಣ ಬೈಪಾಸ್ ಕೂಡ ಡಿಸೆಂಬರ್ ವೇಳೆಗೆ‌‌ ಕಂಪ್ಲೀಟ್ ಆಗಲಿದೆ. ಹೊಸ ವರ್ಷದಿಂದ ಸರಾಗವಾಗಿ ಬೆಂಗಳೂರು-ಮೈಸೂರಿಗೆ ಸಂಚಾರ ಮಾಡಬಹುದು. 75 ರಿಂದ 80 ನಿಮಿಷಗಳಲ್ಲಿ ನೀವು ಬೆಂಗಳೂರು-ಮೈಸೂರು ತಲುಪಬಹುದು ಎಂದು ಪ್ರತಾಪ್ ಸಿಂಹ ಹೇಳಿದರು.

ಕೆಲವೆಡೆ ಕೆನಾಲ್, ಅಂಡರ್ ಪಾಸ್ ನ ಸಣ್ಣ ಪುಟ್ಟ ಕೆಲಸವಿದೆ. ಆ ಕೆಲಸದ ಬಳಿ ಟ್ರಾಫಿಕ್ ಡೈವರ್ಟ್ ಮಾಡಿ, ಮುಕ್ತ ಸಂಚಾರಕ್ಕೆ ಅವಕಾಶ ನೀಡ್ತೇವೆ. ಮದ್ದೂರು ಬೈಪಾಸ್ ಮೇಲೆ ನಿಂತು ಫೇಸ್ ಬುಕ್ ಲೈವ್ ನಲ್ಲಿ ಪ್ರತಾಪ್​ ಸಿಂಹ ಅವರು ಮಾಹಿತಿ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments