Saturday, August 23, 2025
Google search engine
HomeUncategorizedಅಣ್ಣನ ಮಗ ನಾಪತ್ತೆ; ಆತಂಕದಲ್ಲಿ ಶಾಸಕ ರೇಣುಕಾಚಾರ್ಯ ಕುಟುಂಬ

ಅಣ್ಣನ ಮಗ ನಾಪತ್ತೆ; ಆತಂಕದಲ್ಲಿ ಶಾಸಕ ರೇಣುಕಾಚಾರ್ಯ ಕುಟುಂಬ

ದಾವಣಗೆರೆ; ಕೆಲವೇ ದಿನಗಳ ಹಿಂದೆ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಅಣ್ಣನ ಮಗ ಕಾಣೆಯಾಗಿದ್ದು, ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಇಡೀ ಕುಟುಂಬವೇ ಆತಂಕದ ಛಾಯೆ ಆವರಿಸಿರುವ ದೃಶ್ಯ ಕಂಡು ಬಂದಿದೆ.

ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯರನ್ನ ಕಾಣಲಿಕ್ಕೆ ಜನರು ಸದಾ ಜನಜಂಗುಳಿ ಇರುತ್ತಿತ್ತು, ಆದರೆ ಇಂದು ಸೇರಿದ್ದು ಮಾತ್ರ ಆತಂಕಕ್ಕೆ ಕಾರಣವಾಗಿತ್ತು. ಏನೂ ಅಂತಾ ವಿಚಾರಿಸಿದ್ರೆ ಗೊತ್ತಾಗಿದ್ದು ಎರಡು ದಿನಗಳಿಂದ ರೇಣುಕಾಚಾರ್ಯ ತಮ್ಮ ರಮೇಶ್ ಅವರ ಮಗ ಚಂದ್ರಶೇಖರ್ ನಾಪತ್ತೆಯಾಗಿದ್ದ, ಇತ್ತ ಸ್ವಂತ ಮಗನಂತೆ ಸಾಕಿದ್ದ ರೇಣುಕಾಚಾರ್ಯ, ಚಂದ್ರು ನೆನೆದು ಬಿಕ್ಕಿ ಬಿಕ್ಕಿ ಅತ್ತ ಘಟನೆ ನಡೆದಿದೆ. ಮನೆಗೆ ವಾಪಾಸ್ ಬಾರೋ ಮಗನೇ ಎಂದು ರೇಣುಕಾಚಾರ್ಯ ಭಾವನಾತ್ಮಕ ಫೋಸ್ಟ್ ಹಾಕಿದ್ದಾರೆ.

ಚಂದ್ರು ಬಹಳ ಅಧ್ಯಾತ್ಮಿಕತೆಗೆ ಹೆಚ್ಚು ಒತ್ತು ನೀಡ್ತಿದ್ದಾ ಭಾನುವಾರ ಸಂಜೆ ಆರು ಗಂಟೆಗೆ ಶಿವಮೊಗ್ಗ ಜಿಲ್ಲೆಯ ಗೌರಿಗದ್ದೆಗೆ ಆಗಮಿಸಿದ್ದ ವಿನಯ್ ಗುರುಜೀಯವರನ್ನು ಸ್ನೇಹಿತ್ ಕಿರಣ್ ರೊಂದಿಗೆ ಭೇಟಿ ಮಾಡಿ ಕೆಲವರಿಗೆ ಊಟ ಬಡಿಸಿದ್ದಾನೆ. ಅದಾದ ಬಳಿಕ ಶಿವಮೊಗ್ಗದಿಂದ ಹಿಂದಿರುಗಿದ ಚಂದ್ರು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿಗೆ ಎಂಟ್ರಿ ಆಗಿದ್ದೇ ಕೊನೆ ಇಲ್ಲಿತನಕ ಚಂದ್ರಶೇಖರ್ ಕಾರು ಸಮೇತ ನಾಪತ್ತೆಯಾಗಿದ್ದಾನೆ.

ಇನ್ನು ಪೊಲಿಸರು ಕುಟುಂಬಸ್ಥರು ಕೂಡ ಸಾಕಷ್ಟು ಹುಡುಕಾಟ ನಡೆಸುತ್ತಿದ್ದು, ಯಾವುದೇ ಸುಳಿವು ಸಿಕ್ಕಿಲ್ಲ, ಸೋಮವಾರ ಬೆಳಿಗ್ಗೆ ಚಂದ್ರಶೇಖರ್ ಕಾರು ಪಾಸ್ ಆಗಿರುವುದು ಸಿಸಿಟಿವಿ ಸೆರೆಯಾಗಿದೆ. ಅಂದೇ ಬೆಳಿಗ್ಗೆ 6.48 ಮೊಬೈಲ್ ಪೋನ್ ಲಾಸ್ಟ್ ಲೊಕೆಶನ್ ಹೊನ್ನಾಳಿ ಎಂದು ತೋರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ದಾವಣಗೆರೆ ಪೊಲೀಸರಿಂದ ತೀವ್ರ ತಪಾಸಣೆ ಕಾರ್ಯ ಮುಂದುವರೆದಿದ್ದು, ಚಂದ್ರಶೇಖರ್ ಅವರ ಚಲಾಯಿಸುತ್ತಿದ್ದ ಕ್ರೇಟಾ ಕಾರು ಸಹ ಇದುವರೆಗು ಪತ್ತೆಯಾಗದೆ ಇರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದ್ದು, ಪ್ರಕರಣದ ಗಂಭೀರತೆ ಅರಿತ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಅವರು, ರೇಣುಕಾಚಾರ್ಯರ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.

ಈ ಪ್ರಕರಣ ಪೊಲೀಸರಿಗೆ ತಲೆನೊವಾಗಿ ಪರಿಣಿಸಿದ್ದು, ಎಲ್ಲಾ ಆ್ಯಂಗಲ್ ನಿಂದ ನೋಡಿದ್ರು, ಯಾವ ಉತ್ತರಗಳು ಸಿಗ್ತಿಲ್ಲ, ಇತ್ತ ಮಗನ ಬರುವಿಕೆಗಾಗಿ ರೇಣುಕಾಚಾರ್ಯ ಕುಟುಂಬವೇ ಕಣ್ಣೀರಿಡುತ್ತಾ ಕಾದು ಕುಳಿತಿದೆ.

ಮಧುನಾಗರಾಜ್ ಕುಂದುವಾಡ, ಪವರ್ ಟಿವಿ, ದಾವಣಗೆರೆ

RELATED ARTICLES
- Advertisment -
Google search engine

Most Popular

Recent Comments