Tuesday, September 9, 2025
HomeUncategorizedಸ್ನೇಹಿತನನ್ನು ಕೊಂಡಾಡಿದ ಜೂನಿಯರ್ ಎನ್​ಟಿಆರ್..!

ಸ್ನೇಹಿತನನ್ನು ಕೊಂಡಾಡಿದ ಜೂನಿಯರ್ ಎನ್​ಟಿಆರ್..!

ಬೆಂಗಳೂರು: ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ ಎಲ್ಲೆಡೆ ಮನೆಮಾಡಿದೆ. ಇಂದಿನ ಕರ್ನಾಟಕದ ಹೆಮ್ಮೆಯ ಕಾರ್ಯಕ್ರವಾದ ಅಪ್ಪು ರವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಇಂದು ವಿಧಾನಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರದಲ್ಲಿ ಜೂನಿಯರ್ ಎನ್​ಟಿಆರ್ ರವರು ತಮ್ಮ ಆತ್ಮೀಯ ಸ್ನೇಹಿತರಾದ ಪುನೀತ್ ರವರನ್ನು ಹಾಡಿಕೊಂಡಾಡಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಜೂನಿಯರ್ ಎನ್​ಟಿಆರ್ ರವರು ಎಲ್ಲರಿಗು ನಮಸ್ಕಾರ ಮಾಡುತ್ತ ಮಾತನಾಡಿ, ಕನ್ನಡದ ಜನತೆಗೆ ಹಾಗೂ ಪ್ರಪಂಚಧಾದ್ಯಂತ ಇರುವ ಕನ್ನಡಿಗರಿಗೆ ಕನ್ನಡ ರಾಜ್ಯೊತ್ಸವದ ಶುಭಾಶಯಗಳನ್ನು ತಿಳಿಸಿದರು.

ಅಪ್ಪು ಒಬ್ಬ ಅಭೂತಫೂರ್ವ ವ್ಯಕ್ತಿ, ಒಬ್ಬ ಮನುಷ್ಯನಿಗೆ ಪರಂಪರೆ ಹಾಗೂ ಉಪನಾಮವೆಂಬುವುದು ಹಿರಿಯರಿಂದ ಬರುತ್ತದೆ. ಆದರೇ ವ್ಯಕ್ತಿತ್ವವೆನ್ನುವುದು ಸ್ವಂತ ಸಂಪಾದನೆ. ಬರೀ ವ್ಯಕ್ತಿತ್ವದಿಂದ, ನಗುವಿನಿಂದ, ಯುದ್ದವಿಲ್ಲದೆ ಹಾಗೂ ಅಹಂಯಿಲ್ಲದೆ  ಒಂದು ರಾಜ್ಯವನ್ನೇ ಗೆದ್ದಿರುವ ರಾಜ ಯಾರಾದರು ಇದ್ದಾರೆ ಎಂದರೇ ಅದು ಪುನೀತ್ ರಾಜ್​ಕುಮಾರ್ ಒಬ್ಬರೆ, ಕರ್ನಾಟಕ ರತ್ನ ಎಂದರೇ ಅದು ಪುನೀತ್ ರಾಜ್​ಕುಮಾರ ಎಂದು ಅರ್ಥ ಎಂದರು.

ಕರ್ನಾಟಕದ ಸೂಪರ್ ಸ್ಟಾರ್ ಅಪ್ಪು, ಒಬ್ಬ ಒಳ್ಳೆಯ ತಂದೆ, ಒಬ್ಬ ಒಳ್ಳೆಯ ಗೆಳೆಯ, ಒಬ್ಬ ಒಳ್ಳೆಯ ಗಂಡ ಎಲ್ಲದಕ್ಕಿಂತ ಹೆಚ್ಚಾಗಿ ಒಳ್ಳೆಯ ವ್ಯಕ್ತಿತ್ವ ಉಳ್ಳವರಾಗಿದ್ದರು. ನಾನು ಈ ವೇದಿಕೆ ಮೇಲಿರುವುದು ನನ್ನ ಸಾಧನೆಯಿಂದಲ್ಲ, ನಾನು ಅಪ್ಪು ರವರ ಗೆಳೆಯನಾಗಿ ಮಾತ್ರ ಎಂದು ಹೇಳುತ್ತ ವೇದಿಕೆ ಮೇಲೆ ಸ್ನೇಹಿತನನ್ನು ನೆನೆದು ಕೊಂಡಾಡಿದರು.

ಇನ್ನು ಕರ್ನಾಟಕ ರತ್ನ ಸಮಾರಂಭಕ್ಕೆ ಮಳೆಯ ಅಡ್ಡಿ ಆದ್ದರಿಂದ ಎನ್​ಟಿಆರ್ ಅವರು ತಮ್ಮ ಭಾಷಣವನ್ನು ಕೆಲವೇ ನಿಮಿಷಗಳಲ್ಲಿ ಮುಗಿಸಿದರು.

RELATED ARTICLES
- Advertisment -
Google search engine

Most Popular

Recent Comments