Friday, August 29, 2025
HomeUncategorizedಸಿಎಂ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಸಿಎಂ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆಗೆ ಪ್ರತಿಪಕ್ಷಗಳು ತಯಾರಿ ಮಾಡಿಕ್ಕೊಳ್ಳುತ್ತಿದೆ. ಇನ್ನು ವಾರಕ್ಕೊಂದು ಕಾರ್ಯಕ್ರಮಗಳನ್ನು ಪ್ರತಿಪಕ್ಷಗಳು ಹಮ್ಮಿಕ್ಕೊಳ್ಳುತ್ತಿದೆ. ಬಿಜೆಪಿ ಯ ಸಾಕಷ್ಟು ಕಾರ್ಯಕ್ರಮಗಳಲ್ಲಿ, ಬಿಜೆಪಿ ಮುಖಂಡರುಗಳು ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ , ರಾಜ್ಯಕ್ಕೆ ಯಾವ ಕೊಡುಗೆಯನ್ನು ನೀಡಿಲ್ಲ ಎಂದು ಹೇಳಿಕೆ ನೀಡಿರಿರುವುದಕ್ಕೆ, ಮಾಜಿ ಸಿಎಂ ಸಿದ್ದು ಗರಂ ಆಗಿದ್ದಾರೆ.

ಈ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ ರವರು, ಕುರಿಕಾಯುವವರಿಗೆ ದೊಡ್ಡ ಕಾರ್ಯಕ್ರಮ ಕೊಟ್ಟಿದ್ದೀವಿ. ನಾನು ಬರಿಗೈಲಿ ಬಂದಿಲ್ಲ, ಕುರಿ ಮತ್ತು ಉಣ್ಣೆ ಮಹಾಮಂಡಳದ ಆದೇಶ ಹಿಡಿದುಕೊಂಡು ಬಂದಿದ್ರು. 20 ಸಾವಿರ ಜನರಿಗೆ 350 ಕೋಟಿ ರೂಪಾಯಿ ಪ್ರಾಜೆಕ್ಟ್ ಹಾಗೂ 20 ಕುರಿ ಒಂದು ಟಗರು ಘಟಕದ ವೆಚ್ಚ. 1.75 ಲಕ್ಷ ಕೊಡೋ ಆದೇಶ ಮಾಡಿದ್ದೀನಿ. ಸಿದ್ದರಾಮಯ್ಯ ಯಾರೂ ಮಾಡಿಲ್ಲ ಅಂತಾ ಆದೇಶ ಪ್ರತಿ ಪ್ರದರ್ಶನ ಮಾಡಿ ಆರೋಪ ಮಾಡಿದ್ದಾರೆ.

1.75 ಲಕ್ಷ ಪೈಕಿ ಎನ್ ಸಿಡಿಸಿಯಿಂದ ಸಾಲ, 25% ಸರ್ಕಾರದಿಂದ ಸಬ್ಸಿಡಿ, 25% ಫಲಾನುಭವಿ ಭರಿಸುವುದು ಅಂತಾ ಇದೆ. ಆದ್ರೆ ಫ್ರೀಯಾಗಿ ಕೊಡ್ತೀವಿ ಅಂತಾ ಹೇಳಿದ್ದಾರೆ. ಇದನ್ನ ಕ್ಯಾಬಿನೆಟ್ ನಲ್ಲಿ ಇಟ್ಟಿರಲಿಲ್ಲ, ಪೋಸ್ಟ್ ಅಪ್ರೂವಲ್ ತೆಗೆದುಕೊಂಡಿದ್ದಾರೆ. 25% ಹಣ ಕುರಿಗಾರ ಹಾಕಬೇಕು, ಎಲ್ಲಿಂದ ತಗೊಂಡು ಬರ್ತಾರೆ. ಕುರುಬರು ಮಾತ್ರ ಕುರಿ ಸಾಕಲ್ಲ, ಗೊಲ್ಲರು, ಹಿಂದುಳಿದವರೆಲ್ಲಾ ಸಾಕ್ತಾರೆ
ಈ ಯೋಜನೆ ಇಂಪ್ಲಿಮೆಂಟ್ ಆಗಲ್ಲ. ನಾವು ಪಶು ಭಾಗ್ಯ ಯೋಜನೆ ತಂದಿದ್ವಿ. 1.20 ಲಕ್ಷ ವೆಚ್ಚದಲ್ಲಿ ಯೋಜನೆ ಕೊಡ್ತಾ ಇದ್ವಿ, ಈಗ ಆ ಯೋಜನೆ ಯಾಕೆ ಮುಂದುವರೆಸುತ್ತಿಲ್ಲಾ. ಇನ್ನು ರಾಜ್ಯದಲ್ಲಿ ಪಶುಭಾಗ್ಯ ಸಂಪೂರ್ಣವಾಗಿ ನಿಲ್ಲಿಸಿ ಬಿಟ್ಟಿದ್ದಾರೆ. ಆಗ ಎ ಮಂಜು ಮಂತ್ರಿ ಇದ್ದರು, ಪಾಪ ಈಗ ಬಿಜೆಪಿಗೆ ಹೋಗಿದ್ದಾರೆ. ಈ ಪ್ರಾಜೆಕ್ಟ್ ನನ್ನ ಪ್ರಕಾರ ಟೇಕಾಫ್ ಆಗಲ್ಲ, ಬಹಳ ದೊಡ್ಡದಾಗಿ ಪ್ರಚಾರ ತೆಗೆದುಕೊಂಡಿದ್ದಾರೆ ಎಮದು ಹೇಲಿದ್ದಾರೆ.

 

RELATED ARTICLES
- Advertisment -
Google search engine

Most Popular

Recent Comments