Monday, August 25, 2025
Google search engine
HomeUncategorizedಮೊರ್ಬಿ ದುರಂತಕ್ಕೆ ಬೈಡನ್​​ ಸಂತಾಪ

ಮೊರ್ಬಿ ದುರಂತಕ್ಕೆ ಬೈಡನ್​​ ಸಂತಾಪ

ಅಮೆರಿಕಾ : ಗುಜರಾತ್‌ನ ಮೊರ್ಬಿ ನಗರದಲ್ಲಿ ಕೇಬಲ್ ಸೇತುವೆ ಕುಸಿದು 130ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ತೀವ್ರ ಸಂತಾಪ ಸೂಚಿಸಿದ್ದಾರೆ.

1 ಶತಮಾನಕ್ಕೂ ಹೆಚ್ಚು ಹಳೆಯದಾದ ಕೇಬಲ್ ಸೇತುವೆಯನ್ನು ಇತ್ತೀಚೆಗೆ ದುರಸ್ತಿ ಮಾಡಿ, ನವೀಕರಣಗೊಳಿಸಲಾಗಿತ್ತು. ಕಳೆದ 6 ದಿನಗಳ ಹಿಂದೆ ಈ ಸೇತುವೆಯನ್ನು ಸಾರ್ವಜನಿಕರಿಗೆ ತೆರೆಯಲಾಗಿತ್ತು. ಭಾನುವಾರ ಸಂಜೆ ಸೇತುವೆಯನ್ನು ನೋಡಲು ಜನರು ಕಿಕ್ಕಿರಿದು ಸೇರಿದ್ದರು. ಈ ವೇಳೆ ಭಾರ ತಾಳಲಾರದೆ ಸೇತುವೆ ಕುಸಿದುಬಿದ್ದಿತ್ತು. ನದಿಯಲ್ಲಿ ಬಿದ್ದವರಿಗಾಗಿ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಲೇ ಇದೆ ಎಂದರು.

ಇನ್ನು, ಸೇತುವೆ ಕುಸಿತದ ಸಮಯದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಜಿಲ್ ನಾನು ನಮ್ಮ ಆಳವಾದ ಸಂತಾಪವನ್ನು ಕಳುಹಿಸುತ್ತೇವೆ. ಹಲವಾರು ಜೀವಗಳನ್ನು ಕಳೆದುಕೊಂಡಿರುವ ದುಃಖದಲ್ಲಿರುವ ಗುಜರಾತ್ ಜನರೊಂದಿಗೆ ನಾವಿದ್ದೇವೆ ಎಂದು ಜೋ ಬೈಡೆನ್ ಹೇಳಿಕೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments