Tuesday, August 26, 2025
Google search engine
HomeUncategorizedಕಾಂಗ್ರೆಸ್ ಮಹಿಳಾ ಘಟಕದಲ್ಲಿ ಭಿನ್ನಮತ ಸ್ಪೋಟ

ಕಾಂಗ್ರೆಸ್ ಮಹಿಳಾ ಘಟಕದಲ್ಲಿ ಭಿನ್ನಮತ ಸ್ಪೋಟ

ಬೆಂಗಳೂರು: ಕಾಂಗ್ರೆಸ್ ಮಹಿಳಾ ಘಟಕದಲ್ಲಿ ಭಿನ್ನಮತ ಸ್ಪೋಟವಾಗಿದ್ದು, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ವಿರುದ್ಧ ಅಸಮಧಾನ ವ್ಯಕ್ತವಾಗಿದೆ.

ಪುಷ್ಪಾ ಅಮರ್ ನಾಥ್ ಅವರು ಇತ್ತೀಚಿಗೆ ಬೆಂಗಳೂರು ಜಿಲ್ಲಾಧ್ಯಕ್ಷ ಸ್ಥಾನದಿಂದ ಸಲ್ಮಾ ಅವರನ್ನ ತೆಗೆದು ಹಾಕಿದ್ದರು. ಹೀಗಾಗಿ ಇಂದು ನಡೆದ ಇಂದಿರಾ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮಹಿಳಾ ಘಟಕದಲ್ಲಿ ಕಿತ್ತಾಟ ನಡೆದಿದೆ.

ಇಂದಿರಾ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ರಾಜ್ಯ ಕಾಂಗ್ರೆಸ್​ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್​ ವೇದಿಕೆ ಏರುತ್ತಿದ್ದಂತೆ ಮಾಜಿ ಮಹಿಳಾ ಘಟನಕದ ಬೆಂಗಳೂರು ಜಿಲ್ಲಾಧ್ಯಕ್ಷೆ ಸಲ್ಮಾ ಕಿಡಿಕಾರಿದ್ದಾರೆ.

ನೂತನ ಜಿಲ್ಲಾಧ್ಯಕ್ಷೆ ಶಿಲ್ಪಾ ಕಶ್ಯಪ್ ಪಕ್ಕದಲ್ಲಿ ಕುಳಿತಿದ್ದ ಪುಷ್ಪಾ ಅಮರ್ ನಾಥ್, ಪುಷ್ಪಾ ಎದುರಿಗೆ ಬಂದು ಸಲ್ಮಾ ಆಕ್ರೋಶ ಹೊರ ಹಾಕಿದರು. ಬಳಿಕ ಮಧ್ಯ ಪ್ರವೇಶಿಸಿದ ಮಾಜಿ ಪರಿಷತ್ ಸದಸ್ಯ ನಾರಾಯಣಸ್ವಾಮಿ ಇಬ್ಬರು ನಡುವಿನ ಟಾಕ್​ ವಾರ್​ ತಿಲಾಂಜಲಿ ಇಟ್ಟರು.

RELATED ARTICLES
- Advertisment -
Google search engine

Most Popular

Recent Comments