Saturday, August 23, 2025
Google search engine
HomeUncategorizedಸತ್ತು ಹೋದ ಕಾಂಗ್ರೆಸ್ ಪಕ್ಷಕ್ಕೆ ಖರ್ಗೆಯವರನ್ನ ಅಧ್ಯಕ್ಷ ಮಾಡಿದ್ದಾರೆ : ಕೆ.ಎಸ್ ಈಶ್ವರಪ್ಪ

ಸತ್ತು ಹೋದ ಕಾಂಗ್ರೆಸ್ ಪಕ್ಷಕ್ಕೆ ಖರ್ಗೆಯವರನ್ನ ಅಧ್ಯಕ್ಷ ಮಾಡಿದ್ದಾರೆ : ಕೆ.ಎಸ್ ಈಶ್ವರಪ್ಪ

ಕಲಬುರಗಿ : ವಿರಾಟ್ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶದಲ್ಲಿ ಹಿಂದುಳಿದ ವರ್ಗದ ನಾಯಕ ಕೆ.ಎಸ್ ಈಶ್ವರಪ್ಪ ಭಾಷಣ ಮಾಡಿದ್ಧಾರೆ.

ದೇಶದಲ್ಲಿ 62% ಹಿಂದುಳಿದ ವರ್ಗಗಳ ಜನ ಇದ್ದೆವೆ. ಹಿಂದುಳಿದ ವರ್ಗದವರಿಗೆ ವಿಧಾನಸಭಾ ಚುನಾವಣೆಯಲ್ಲಿ ಎಷ್ಟು ಸೀಟ್ ಕೊಡ್ತಿರಾ ಅಂತಾ ಕೇಳಿದ್ರು. ಪ್ರತಿಯೊಂದು ಜಿಲ್ಲೆಯಿಂದ ಹಿಂದುಳಿದ ವರ್ಗದವರಿಗೆ ಒಂದೊಂದು ಟಿಕೆಟ್ ಕೊಡಬೇಕು. ವಾಲ್ಮಿಕಿ , ದಲಿತ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿದ್ರು. ಸತ್ತು ಹೋದ ಕಾಂಗ್ರೆಸ್ ಪಕ್ಷಕ್ಕೆ ಖರ್ಗೆಯವರನ್ನ ಅಧ್ಯಕ್ಷ ಮಾಡಿದ್ದಾರೆ.

ತಳವಾರ , ಪರವಾರ, ದಲಿತರು , ಕುರುಬರು , ಸೇರಿ ಹಿಂದುಳಿದ ವರ್ಗದವರು ಖರ್ಗೆಯವರನ್ನ ಸೋಲಿಸಿದ್ದಿರಿ ಸಿದ್ದರಾಮಯ್ಯನವರು ಕೇಳ್ತಿದ್ದರು ಜನರಿಗೆ ಉದ್ಯೋಗ ಕೋಡಲಿಲ್ಲ. ಕರೊನಾ ಸಂದರ್ಭದಲ್ಲಿ ಜನ ಉಪವಾಸ ಇರಬಾರದು ಅಂತಾ ಜಾಬ್ ಕಾರ್ಡ್ ಕೊಟ್ಟು ಉದ್ಯೋಗ ಕೊಟ್ಟಿದ್ದಾರೆ. ಕರೊನಾ ಸಂದರ್ಭದಲ್ಲಿ ಜನ ಉಪವಾಸ ಇರಬಾರದು ಅಂತಾ ಎರಡು ವರ್ಷ ಉಚಿತ ರೇಷನ್ ಕೊಟ್ಟಿದ್ದಾರೆ. ಕಾಂಗ್ರೆಸ್ ನವರು ಸಿದ್ದರಾಮಯ್ಯ ದಿನಾ ಬೆಳಗ್ಗೆ ಎದ್ರೆ ಮೋದಿಯನ್ನ ಬೈಯುತ್ತಾರೆ. ಜನ ಕಾಯ್ತಾ ಇದ್ದಾರೆ , ಇವರನ್ನ ಗುಂಡಿಯಲ್ಲಿ ಮಣ್ಣು ಹಾಕಿ ಮುಚ್ಚೋದಕ್ಕೆ. 2023 ರಲ್ಲಿ ಕಾಂಗ್ರೆಸ್​​ನ ಮುಚ್ಚಿ ಹಾಕಿ 150 ಸೀಟ್ ಗೆಲ್ಲೋ ಮೂಲಕ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದರು.

RELATED ARTICLES
- Advertisment -
Google search engine

Most Popular

Recent Comments