Saturday, August 23, 2025
Google search engine
HomeUncategorizedಬಿಜೆಪಿ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಗೆಲುವಿನ ನಾಯಕ ಸೈಡ್ ಲೈನ್..!

ಬಿಜೆಪಿ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಗೆಲುವಿನ ನಾಯಕ ಸೈಡ್ ಲೈನ್..!

ಹುಬ್ಬಳ್ಳಿ: ಕೇಂದ್ರ ಸಚಿವರ ಬಣ್ಣದರ್ಪಣ ಕಾರ್ಯಕ್ರಮದಲ್ಲಿ ಸೈಡ್ ಲೈನ್ ಆದ ಎಸ್ ಐ ಚಿಕ್ಕನಗೌಡರು. ಕುಂದಗೊಳದಲ್ಲಿ ಕಳೆದ ರಾತ್ರಿ ಕಾರ್ಯಕ್ರಮದಲ್ಲಿ ಎಸ್ ಐ ಚಿಕ್ಕನಗೌಡರು ಕಡೆಗಣನೆಯಾಗಿದ್ದಾರೆ.

2023 ಚುನಾವಣೆಯ ತಯಾರಿಯಲ್ಲಿ ಇದ್ದ ಹ್ಯಾಟ್ರಿಕ್ ಗೆಲುವಿನ ಮಾಜಿ ಸಚಿವನಿಗೆ ಶಾಕ್.ಎಸ್ ಐ ಸಿ ಪ್ರಬಲ ಎದುರಾಳಿ ಎಂ ಆರ್ ಪಾಟೀಲ್ ಗೆ ಮನ್ನಣೆ ನೀಡಿದ್ದಾರೆ ಬಿಜೆಪಿ ಘಟಕ. ಮುಂದಿನ ಸಾರ್ವತ್ರಿಕ ಚುನಾವಣೆಗೆ ಚಿಕ್ಕನಗೌಡರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ.
ಚಿಕ್ಕನಗೌಡರ ಮಾಜಿ ಸಿಎಂ ಯಡಿಯೂರಪ್ಪ ರವರ ಹತ್ತಿರದ ಸಂಬಂದಿಯಾಗಿದ್ದಾರೆ.

ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಕಾರ್ಯಕ್ರಮದಲ್ಲಿ ಸ್ಟೇಜ್, ಆಮಂತ್ರಣ ,ಬ್ಯಾನರ ಸೇರಿದಂತೆ ವೇದಿಕೆಗೂ ಜಾಗ ನೀಡಲಿಲ್ಲ. ಹಿರಿಯ ರಾಜಕಾರಣಿ ಸೂಚನೆ ಮೇರೆಗೆ ಕೊನ ಗಳಿಗೆಯಲ್ಲಿ ಸ್ಟೇಜ್ ಹತ್ತಿದ ಚಿಕ್ಕನಗೌಡರ ಬರೋಬ್ಬರಿ ಮೂರು ಬಾರಿ ಶಾಸಕನಾಗಿ ,ಮೂರು ಬಾರಿ ಅಲ್ಪ ಮತಗಳ ಅಂತರದಲ್ಲಿ ಸೋತಿರುವ ಚಿಕ್ಕನಗೌಡರ ರವರಿಗೆ ಕಾರ್ಯಕ್ರಮದಲ್ಲಿ ಮನ್ನಣೆ ನೀಡಲಿಲ್ಲ.

ಇನ್ನು ಎಂ ಆರ್ ಪಾಟೀಲ್ ಗೆ ಬಹುತೇಕ ನಾಯಕತ್ವ ಫಿಕ್ಸ್ ಮಾಡಿರುವ ಪ್ರಲ್ಹಾದ್ ಜೋಶಿ, ಯಡಿಯೂರಪ್ಪ ಬಣದ ಹಿಂಬಾಲಕರಿಗೆ ಧಾರವಾಡ ಜಿಲ್ಲೆಯಲ್ಲಿ ಹಿನ್ನಡೆ ಮಾಡಿ ಮುಂದಿನ 2023ರ ಚುನಾವಣೆಯಲ್ಲಿ ಟಿಕೆಟ್ ಅನುಮಾನವಾಗಿದೆ.

RELATED ARTICLES
- Advertisment -
Google search engine

Most Popular

Recent Comments