Monday, August 25, 2025
Google search engine
HomeUncategorizedಬಿಬಿಎಂಪಿ: ರಸ್ತೆ ಗುಂಡಿಗೆ ಮತ್ತೊಂದು ಬಲಿ

ಬಿಬಿಎಂಪಿ: ರಸ್ತೆ ಗುಂಡಿಗೆ ಮತ್ತೊಂದು ಬಲಿ

ಬೆಂಗಳೂರು:ಬಿಬಿಎಂಪಿ ನಿರ್ಲಕ್ಷ್ಯಕ್ಕೆ ನಗರದಲ್ಲಿ ಮತ್ತೊಂದು ಬಲಿಯಾಗಿದೆ. ಬೆಂಗಳೂರಿನ ಹಲವು ರಸ್ತೆಗಳಲ್ಲಿ ಗುಂಡಿಗಳದ್ದೆ ಕಾರುಬಾರು. ಬಿಬಿಎಂಪಿ ಗೆ ಸಾರ್ವಜನಿಕರು ಎಷ್ಟೇ ಚೀಮಾರಿಯಾಕಿದ್ದರು ಸಹ ತಲೆಕೆಡಿಸಿಕ್ಕೊಳ್ಳದ  ಮಹಾನಗರ ಪಾಲಿಕೆ. ಕಳೆದೆರಡು ದಿನಗಲಿಂದ ರಸ್ತೆ ಗುಂಡಿಗಳಲ್ಲಿ ದೀಪ ಹಚ್ಚಿ, ಬಿಬಿಎಂಪಿಗೆ ತಲೆತಗ್ಗಿಸುವಂತೆ ಮಾಡಿದ್ದ ಬೆಂಗಳೂರಿನ ಜನತೆ ಪಾಲಿಕೆಯ ಅಧಿಕಾರಿಗಳು ತಲೆತಗ್ಗಿಸುವಂತೆ ಮಾಡಿದ್ದರು.

ಈಗಾಗಲೇ ರಸ್ತೆ ಗೋಡಿಗಳಿಗೆ ಸಾಕಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿದ್ದರು. ಈಗ ಯಲಹಂಕದಲ್ಲಿ ಮತ್ತೊಂದು ಸಾವಾಗಿದೆ. ಗುಂಡಿಗಳ ಅಟ್ಟಹಾಸಕ್ಕೆ ಯುವಕ‌ ಬಲಿಯಾಗಿದ್ದು, ರಸ್ತೆಯಲ್ಲಿ ಬಿದ್ದಿದ್ದ ಗುಂಡಿಯಿಂದ ಸರಣಿ ಅಪಘಾತ ಸಂಬವಿಸುತ್ತಿದೆ.

ಯಲಹಂಕದ ಅಟ್ಟೂರು ಬಡಾವಣೆಯಲ್ಲಿ ಕಳೆದ ರಾತ್ರಿ ಘಟನೆ ನಡೆದಿದ್ದು, ಗುಂಡಿ ತಪ್ಪಿಸಲು ರಸ್ತೆಯಲ್ಲಿ ಪಲ್ಟಿಯಾದ ಕಾರು. ಕಾರು ಪಲ್ಟಿಯಾದ ಕಾರಣ ಮುಂದೆ ಬರ್ತಿದ್ದ ಬೈಕ್ ಕಾರಿಗೆ ಡಿಕ್ಕಿ ಒಡೆದಿದೆ. ಕಾರಿಗೆ ಡಿಕ್ಕಿ‌ ಹೊಡೆದ ಹಿನ್ನಲೆ ಸ್ಥಳದಲ್ಲೆ ಬೈಕ್ ಸವಾರ ಸಾವನಪ್ಪಿದ್ದಾನೆ. ಬೈಕ್ ನಲ್ಲಿ ಬರ್ತಿದ್ದ ಒರ್ವ ಯುವಕ ಸಾವು ಮತ್ತೋರ್ವನಿಗೆ ಗಂಬೀರ ಗಾಯವಾಗಿದೆ.

ರಸ್ತೆಯಲ್ಲಿರುವ ಗುಂಡಿಗಳಿಗೆ ಪದೇ ಪದೇ ಬಿದ್ದು ಅಪಘಾತವಾಗುತ್ತಿದೆ. ಆದ್ರು ಬಿಬಿಎಂಪಿ ಮಾತ್ರ ಎಚ್ಚೆತ್ತುಕೊಂಡಿಲ್ಲ ಅಂತ ಸ್ಥಳಿಯರ ಆಕ್ರೋಶ ವ್ಯಕ್ತವಾಗಿದೆ. ಕಾರು ಪಲ್ಟಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯಲಹಂಕ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES
- Advertisment -
Google search engine

Most Popular

Recent Comments