Saturday, August 23, 2025
Google search engine
HomeUncategorizedಬೆಂಗಳೂರು: ಪ್ರಮುಖ ರಸ್ತೆಗೆ ಇಬ್ಬರು ದಿಗ್ಗಜರ ಹೆಸರಿಡಲು ಪಾಲಿಕೆ ಚಿಂತನೆ..!

ಬೆಂಗಳೂರು: ಪ್ರಮುಖ ರಸ್ತೆಗೆ ಇಬ್ಬರು ದಿಗ್ಗಜರ ಹೆಸರಿಡಲು ಪಾಲಿಕೆ ಚಿಂತನೆ..!

ಬೆಂಗಳೂರು: ರಾಜಧಾನಿಯ ಪ್ರಮುಖ ರಸ್ತೆಗಳಿಗೆ ಇಬ್ಬರು ದಿಗ್ಗಜರ ಹೆಸರಿಡಲು ಮಹಾನಗರ ಪಾಲಿಕೆ ಚಿಂತನೆ ನಡೆಸಿದೆ. ಬೆಂಗಳೂರಿನ ಎರಡು ಪ್ರಮುಖ ರಸ್ತೆಗಳಿಗೆ ಇಬ್ಬರು ದಿಗ್ಗಜರ ಹೆಸರು ಇಡಲು ಪಾಲಿಕೆಗೆ ಬೇಡಿಕೆ ಹೆಚ್ಚಿದೆ. ಇನ್ನು ನಮ್ಮೆಲ್ಲರ ಪ್ರೀತಿಯ ಅಪ್ಪು, ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಹಾಗೂ ಕ್ರಿಕೆಟರ್ ವಿರಾಟ್ ಕೊಹ್ಲಿ ಹೆಸರಿಗೆ ಬೇಡಿಕೆ ಹಚ್ಚಾಗಿದೆ.

ಶಾಂತಿನಗರ ಬಸ್ ಟರ್ಮಿನಲ್ ಮುಂಭಾಗದ ರಸ್ತೆಗೆ ಅಪ್ಪು ಹೆಸರಿಡುವಂತೆ ಬಿಬಿಎಂಪಿಗೆ ಮನವಿ. ವಿಲ್ಸನ್ ಗಾರ್ಡನ್ 8th ಕ್ರಾಸ್ ರಸ್ತೆಗೆ ವಿರಾಟ್ ಕೊಹ್ಲಿ ಹೆಸರಿಡುವಂತೆ ಆಗ್ರಹ ಹೆಚ್ಚಾಗಿದೆ. ಈ ಬಗ್ಗೆ ಬಿಬಿಎಂಪಿ ಆಡಳಿತಗಾರರಿಗೆ ಹಾಗೂ ಬಿಬಿಎಂಪಿ ಚೀಫ್ ಕಮಿಷನರ್‌ಗೆ ಪತ್ರದ ಮೂಲಕ ಮನವಿ ಸಲ್ಲಿಕೆಯಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರದ ಜೊತೆ ಚರ್ಚೆ ಮಾಡಲು ಮುಂದಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ.

ವಿಲ್ಸನ್ ಗಾರ್ಡನ್ 8ನೇ ಕ್ರಾಸ್ ಹಾಗೂ ಬಸ್ ನಿಲ್ದಾಣದ ಮುಂಭಾಗದ ರಸ್ತೆಗೆ ಈವರೆಗೆ ಯಾವುದೇ ಅಧಿಕೃತ ಹೆಸರುಗಳಿಲ್ಲ
ಹೀಗಾಗಿ ಈ ಎರಡೂ ರಸ್ತೆಗಳಿಗೆ, ಈ ಎರಡು ನಾಯಕರ ಹೆಸರು ನಾಮಕರಣ ಮಾಡುವಂತೆ ಆಗ್ರಹ ಹಚ್ಚಾಗಿದೆ.

RELATED ARTICLES
- Advertisment -
Google search engine

Most Popular

Recent Comments