Tuesday, August 26, 2025
Google search engine
HomeUncategorized250 ಕ್ಕೂ ಅಧಿಕ ಥಿಯೇಟರ್​ಗಳಲ್ಲಿ ಬನಾರಸ್​ ದರ್ಬಾರ್..!

250 ಕ್ಕೂ ಅಧಿಕ ಥಿಯೇಟರ್​ಗಳಲ್ಲಿ ಬನಾರಸ್​ ದರ್ಬಾರ್..!

ಬನಾರಸ್​ನ ಬಣ್ಣದೋಕುಳಿ ದೇಶಾದ್ಯಂತ ರಂಗೇರಿಸಲು ಸಜ್ಜಾಗಿದೆ. ವಾರಣಾಸಿ ಮಡಿಲಲ್ಲಿ ಪ್ರೇಮ್​​​​​ಕಹಾನಿಯ ಸವಿ ಉಣಬಿಡಿಸೋಕೆ ಚಿತ್ರತಂಡ ತುದಿಗಾಲಲ್ಲಿ ನಿಂತಿದೆ. ಈಗಾಗಲೇ ಬನಾರಸ್ ಸಿನಿಮಾದ ಸದ್ದು ಎಲ್ಲೆಡೆ ಜೋರಾಗಿದ್ದು, ರಾಜ್ಯಾದ್ಯಂತ ಅಬ್ಬರ ಜೋರಾಗಿರಲಿದೆ. ಯೆಸ್​​.. ಸಖತ್​ ಹೈಪ್​​ ಕ್ರಿಯೇಟ್​​ ಮಾಡಿರೋ ಬನಾರಸ್​​​​ ಚಿತ್ರದ ಸ್ಪೆಷಲ್​​ ಅಪ್ಡೇಟ್ಸ್​​​ ಇಲ್ಲಿದೆ.

  • ಗಂಗಾ ನದಿಯ ತಟದಲ್ಲಿ ಬನಾರಸ್​​​ ಚಿತ್ರದ ಪ್ರೇಮ ಕಲರವ

ಕಾಂತಾರ ಸಿನಿಮಾದ ನಂತ್ರ ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಅಬ್ಬರಿಸೋಕೆ ಬರ್ತಿರೋ ಸಿನಿಮಾ ಬನಾರಸ್​​​​​.ಈಗಾಗ್ಲೇ ಚಿತ್ರದ ಟೀಸರ್​​​ ಹಾಗೂ ಸ್ಯಾಂಪಲ್​ ಹಾಡಿನ ತುಣುಕುಗಳಲ್ಲಿ ಜಮೀರ್​ ಪುತ್ರ ಝೈದ್​ ಖಾನ್​ ಆ್ಯಕ್ಟಿಂಗ್​ ಇಂಪ್ರೆಸ್​ ಆಗಿದೆ. ಸದ್ಯ ಸಿನಿಮಾ ಈ ವಾರ ರಾಜ್ಯಾದ್ಯಂತ ತೆರೆಗೆ ಬರಲಿದ್ದು ಸಿಕ್ಕಾಪಟ್ಟೆ ಕ್ರೇಜ್​ ಕ್ರಿಯೇಟ್​ ಮಾಡಿದೆ. ಜನರ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿರೋ ಚಿತ್ರ ಸಾಕಷ್ಟು ಭರವಸೆ ಮೂಡಿಸಿದೆ.

ಕನ್ನಡ ಚಿತ್ರರಂಗ ಪ್ಯಾನ್ ಇಂಡಿಯಾ ಸಿನಿಮಾಗಳ ಆಗರವಾಗ್ತಿದೆ. ಕೆಜಿಎಫ್​ನಂತಹ ಆಡಂಬರದ ಸಿನಿಮಾಗಳಷ್ಟೇ ಅಲ್ಲ, ಕಾಂತಾರದಂತಹ ದೈವಿಕ ಸಿನಿಮಾಗಳು ಸದ್ದು ಮಾಡ್ತಿವೆ. ಈ ನಡುವೆ ಬನಾರಸ್​​ನಂತಹ ಕಲರ್​ಫುಲ್ ಸಿನಿಮಾಗಳೂ ಪ್ಯಾನ್ ಇಂಡಿಯಾ ಲೆವೆಲ್​​ನಲ್ಲಿ ಸದ್ದು ಮಾಡಲು ಹೊರಟಿವೆ. ಯೆಸ್.. ಬನಾರಸ್ ಸಿನಿಮಾದ ಹಾಡುಗಳು ಮತ್ತು ಟ್ರೇಲರ್ ಪ್ರೇಕ್ಷಕರನ್ನ ಥಿಯೇಟರ್ ನತ್ತ ಕೈಬೀಸಿ ಕರೆಯುತ್ತಿವೆ.

ಬನಾಸರ್ ಸಿನಿಮಾ ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ತಯಾರಾಗ್ತಿರೋ ಪ್ಯಾನ್ ಇಂಡಿಯಾ ಮೂವಿ. ಲವ್ ಅನ್ನೋದು ಯೂನಿವರ್ಸಲ್ ಸಬ್ಜೆಕ್ಟ್ ಆಗಿರೋದ್ರಿಂದ ಜಯತೀರ್ಥ ಈ ಸಿನಿಮಾನ ಬಹುಭಾಷಾ ಚಿತ್ರವಾಗಿಸ್ತಿದ್ದಾರೆ. ಹಾಲುಗಲ್ಲದ ಚೆಲುವ ಜಮೀರ್ ಪುತ್ರ ಝೈದ್ ಹೀರೋ ಆಗಿ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಡ್ತಿದ್ದಾರೆ.

ಝೈದ್ ಗೆ ಸೋನಾಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಚಿತ್ರದ ಸೊಬಗನ್ನ ಮತ್ತಷ್ಟು ಹೆಚ್ಚಿಸಿದ್ದಾರೆ. ಸುಜಯ್ ಶಾಸ್ತ್ರಿ ಕೂಡ ಸಿನಿಮಾದಲ್ಲಿದ್ದು ಇದು ಟೈಮ್ ಟ್ರಾವೆಲೆ ಕಥೆ ಆಗಿದೆ. ನವೆಂಬರ್ 4 ರಂದು ರಾಜ್ಯದಲ್ಲೇ 250 ಕ್ಕು ಹೆಚ್ಚು ಸ್ಕ್ರೀನ್ ಗಳಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಅಜನೀಶ್​ ಮ್ಯೂಸಿಕ್​​​, ಅದ್ವೈತ​ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ತಿಲಕ್​ ರಾಜ್​ ಬಲ್ಲಾಳ್​​ ಸಿನಿಮಾಗೆ ಬಂಡವಾಳ ಹೂಡಿದ್ದು ರಿಚ್​​ ಆಗಿ ಮೂಡಿ ಬಂದಿದೆಯಂತೆ. ಒಟ್ಟಾರೆ, ಈ ಚಿತ್ರದ ಮೂಲಕ ಕನ್ನಡಕ್ಕೊಬ್ಬ ಹ್ಯಾಂಡ್ಸಮ್​​ ನಟ ಹೊರಹೊಮ್ಮಲಿದ್ದಾರೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES
- Advertisment -
Google search engine

Most Popular

Recent Comments