Wednesday, August 27, 2025
HomeUncategorizedಗರಿಷ್ಠ ಮಟ್ಟ ತಲುಪಿದ ಬೆಂಗಳೂರು ವಾಯುಮಾಲಿನ್ಯ

ಗರಿಷ್ಠ ಮಟ್ಟ ತಲುಪಿದ ಬೆಂಗಳೂರು ವಾಯುಮಾಲಿನ್ಯ

ಬೆಂಗಳೂರು; ಸಿಲಿಕಾನ್ ಸಿಟಿ ಬೆಂಗಳೂರಿಗೆ ಗಾರ್ಬೇಜ್ ಸಿಟಿ, ಗುಂಡಿ ಸಿಟಿ, ಜೊತೆಗೆ ಮಾಲಿನ್ಯಕಾರಕ ಸಿಟಿ ಅನ್ನೊ ಅಪಖ್ಯಾತಿಯೂ ಇದೆ. ನಗರದಲ್ಲಿ ಹೆಚ್ಚಾಗ್ತಿರುವ ಮಾಲಿನ್ಯ ನಿಯಂತ್ರಣ ಮಾಡೋಕೆ ಸರ್ಕಾರ ಇನ್ನಿಲ್ಲದ ಕಸರತ್ತು ಮಾಡ್ತಿದೆ. ದೆಹಲಿಯಂತೆ ಬೆಂಗಳೂರು ಮಾಲಿನ್ಯ ನಗರ ಆಗಬಾರದು ಅಂತ ನಾನಾ ಪ್ರಯತ್ನ ಮಾಡಲಾಗ್ತಿದೆ. ಆದ್ರೆ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತೆ ವರ್ಷಪೂರ್ತಿ ನಿಯಂತ್ರಣ ಮಾಡಿದ್ದು ದೀಪಾವಳಿ ವೇಳೆ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ದೀಪಾವಳಿ ವೇಳೆ ನಗರದ ಮಾಲಿನ್ಯ ಗರಿಷ್ಠ ಮಟ್ಟ ತಲುಪಿದೆ.

ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣ ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿಸಲು ಅನುಮತಿ ಇರಲಿಲ್ಲ. ಹಾಗಾಗಿ ವಾಯು ಮಾಲಿನ್ಯ ಕಡಿಮೆಯಿತ್ತು. ಜೊತೆಗೆ ಎರಡೆರಡು ಬಾರಿ ಲಾಕ್‌ಡೌನ್ ಪರಿಣಾಮ ವಾಹನ ಸಂಚಾರವೂ ಅರ್ಧಕ್ಕಿಳಿದಿತ್ತು. ಇದ್ರಿಂದಾಗಿ ಕಳೆದ ವರ್ಷ ಬೆಂಗಳೂರಿನ ವಾಯು ಮಾಲಿನ್ಯ ಗುಣಮಟ್ಟ ಸೂಚ್ಯಂಕ ಶೇ.54.8 ರಷ್ಟಿತ್ತು. ಆದರೆ, ಈ ವರ್ಷ ಕೊರೋನಾ ಪ್ರಕರಣಗಳು ಕಡಿಮೆಯಾಗಿ ಜನಜೀವನ ಸಹಜಸ್ಥಿತಿಗೆ ಮರಳಿದೆ. ಸರ್ಕಾರ ಸಹ ದೀಪಾವಳಿ ಹಬ್ಬದ ಪ್ರಯುಕ್ತ ಹಸಿರು ಪಟಾಕಿ ಬಳಕೆಗೆ ಅನುಮತಿ ನೀಡಿತ್ತು. ಇದರಿಂದ ದೀಪಾವಳಿ ವೇಳೆ ಅಂದರೆ ಅಕ್ಟೋಬರ್ 24 ರಿಂದ ಅಕ್ಟೋಬರ್ 26ವರೆಗೆ ಜನ ಮನಸೋ ಇಚ್ಛೆ ಪಟಾಕಿ ಸಿಡಿಸಿದ್ದಾರೆ.

ಹೀಗಾಗಿ ಪಟಾಕಿ ಸಿಡಿತದಿಂದ ನಗರದಲ್ಲಿ ವಾಯು ಗುಣಮಟ್ಟದ ಸೂಚ್ಯಂಕ ಪ್ರಮಾಣ ಶೇ.65 ರಷ್ಟು ಏರಿಕೆಯಾಗಿದೆ. ಅಂದರೆ ಕಳೆದ ದೀಪಾವಳಿಗೆ ಹೋಲಿಸಿದರೆ ಈ ಬಾರಿ ವಾಯು ಮಾಲಿನ್ಯ ತೀವ್ರಗತಿಯಲ್ಲಿ ಹೆಚ್ಚಿದೆ.

ಇನ್ನು ಪ್ರದೇಶವಾರು ವಾಯುಮಾಲಿನ್ಯ ಪ್ರಮಾಣ ಎಷ್ಟೆಷ್ಟು ಏರಿಕೆಯಾಗಿದೆ ಎಂಬುದನ್ನು ನೋಡೋದಾದ್ರೆ.

ಮೆಜೆಸ್ಟಿಕ್                     – AQI 92 ರಿಂದ 105 AQI
ಸಿಲ್ಕ್ ಬೋರ್ಡ್ ಜಂಕ್ಷನ್  – AQI 45 ರಿಂದ 150 AQI
ಹೆಬ್ಬಾಳ                       – AQI 46 ರಿಂದ 156 AQI
ಸಾನೆಗೊರವನಹಳ್ಳಿ        – AQI 28 ರಿಂದ 92 AQI
ಜಯನಗರ                   – AQI 37 ರಿಂದ 150 AQI
ನಿಮ್ಹಾನ್ಸ್                    –  AQI 77 ರಿಂದ 101 AQI

ದೀಪಾವಳಿ ವೇಳೆ ನಗರದ ವಸತಿ ಪ್ರದೇಶಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ. ನಗರದ ಹಲವು ಕಡೆ ನಿರ್ಮಿಸಲಾದ ವಾಯುಮಾಲಿನ್ಯ ಗುಣಮಟ್ಟ ಮಾಪನ ಕೇಂದ್ರಗಳು ಮಾಲಿನ್ಯ ಕುರಿತು ದತ್ತಾಂಶಗಳನ್ನು ಸಂಗ್ರಹಿಸಿವೆ. ಸರ್ಕಾರ ರಾತ್ರಿ 8 ಗಂಟೆಯಿಂದ 10ರವರೆಗೆ ಮಾತ್ರ ಹಸಿರು ಪಟಾಕಿ ಸಿಡಿಸಲು ಅವಕಾಶ ಕಲ್ಪಿಸಿತ್ತು. ಆದ್ರೂ ನಗರದಲ್ಲಿ ಅವಧಿ ಮೀರಿ ಪಟಾಕಿ ಸಿಡಿಸಿದ ಪರಿಣಾಮ ವಾಯುಮಾಲಿನ್ಯ ಮಿತಿ ಮೀರಿದೆ.

RELATED ARTICLES
- Advertisment -
Google search engine

Most Popular

Recent Comments