Saturday, August 23, 2025
Google search engine
HomeUncategorizedಮಠ ಮಾನ್ಯಗಳಿಗೆ ಅಪಕೀರ್ತಿ ಬರಲಿದೆ - ಡಾ.ಸಿದ್ದಲಿಂಗ ಶಿವಾಚಾರ್ಯ ಭವಿಷ್ಯ

ಮಠ ಮಾನ್ಯಗಳಿಗೆ ಅಪಕೀರ್ತಿ ಬರಲಿದೆ – ಡಾ.ಸಿದ್ದಲಿಂಗ ಶಿವಾಚಾರ್ಯ ಭವಿಷ್ಯ

ಹರಿಹರ: ಮಂಗಳವಾರ ಸ್ವಾತಿ ನಕ್ಷತ್ರ ತುಲಾ ರಾಶಿಯಲ್ಲಿ ಕೇತುಗ್ರಸ್ತ ಸೂರ್ಯಗ್ರಹಣ ಸಂಭವಿಸಿದ್ದು, ನಾಡಿನ ಅನೇಕ ರಾಜಕೀಯ ಮುತ್ಸದ್ಧಿಗಳಿಗೆ, ಕೆಲವು ಮಠ ಮಾನ್ಯಗಳಿಗೆ ಅಪಕೀರ್ತಿ ಬರಲಿದೆ ಎಂದು ಶ್ರೀಶಾಸ್ತಪೀಠದ ಶ್ರೀಸಿದ್ದಲಿಂಗೇಶ್ವರ ಗದ್ದುಗೆ ಮಠದ, ಕಾಲಜ್ಞಾನಿ ಡಾ.ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಭವಿಷ್ಯ ನುಡಿದರು.

ಅಮವಾಸ್ಯೆಯ ನಿಮಿತ್ತ ಮಂಗಳವಾರ ಮಠದಲ್ಲಿ ನಡೆಸಿದ ವಿಶೇಷ ಹೋಮ ಕಾರ್ಯಕ್ರಮದ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಗ್ರಹಣದ ಫಲವಾಗಿ ರಾಜ್ಯದ ಹೆಸರಾಂತ ಮುತ್ಸದ್ಧಿ ರಾಜಕಾರಣಿಗಳಿಗೆ ಅಪಾಯವಿದೆ. ಶಾಸಕರು, ಸಂಸದರು, ಸಚಿವರು ಎಚ್ಚರಿಕೆ ವಹಿಸಬೇಕು. ತಮ್ಮ ಕಲಾ ಪ್ರೌಢಿಮೆಯಿಂದ ಜನರ ಮನಸೂರೆಗೊಂಡಿರುವ ಕೆಲವು ಹೆಸರಾಂತ ಕಲಾವಿದರು ಕಣ್ಮರೆಯಾಗಬಹುದು ಎಂದರು.

ಗ್ರಹಣದಿಂದ ನಾಡಿನಲ್ಲಿ ಅನೇಕ ರೀತಿಯ ಅಗ್ನಿ ಅನಾಹುತಗಳು ಸಂಭವಿಸುತ್ತವೆ. ಬಾಯ್ಲರ್​, ಗ್ಯಾಸ್ ಏಜೆನ್ಸಿಯವರು, ಪೆಟ್ರೋಲ್ ಬಂಕ್​ಗಳ ಮಾಲೀಕರು, ಸಣ್ಣಪುಟ್ಟ ವ್ಯಾಪಾರಸ್ಥರು ಎಚ್ಚರವಾಗಿರಬೇಕು.

ಉತ್ತರಖಂಡ, ಮಧ್ಯಪ್ರದೇಶ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಜಲ ಮತ್ತು ಅಗ್ನಿ ಪ್ರಳಯದ ಮಾದರಿಯಲ್ಲಿ ಅನಾಹುತಗಳು ಸಂಭವಿಸುತ್ತವೆ ಎಂದು ಕಾಲಜ್ಞಾನಿ ಡಾ.ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments