Monday, August 25, 2025
Google search engine
HomeUncategorizedಕ್ಷಣಕ್ಕೊಂದು ತಿರುವು ಪಡೆಯುತ್ತಿರುವ ಬಂಡೇಮಠದ ಸ್ವಾಮೀಜಿ ಆತ್ಮಹತ್ಯೆ ಕೇಸ್

ಕ್ಷಣಕ್ಕೊಂದು ತಿರುವು ಪಡೆಯುತ್ತಿರುವ ಬಂಡೇಮಠದ ಸ್ವಾಮೀಜಿ ಆತ್ಮಹತ್ಯೆ ಕೇಸ್

ರಾಮನಗರ: ರಾಜ್ಯದಲ್ಲಿ ಸಾಕಷ್ಟು ಸುದ್ದಿ ಮಾಡಿರುವ ಬಂಡೇಮಠದ ಸ್ವಾಮಿಜಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕ್ಷಣ ಕ್ಷಣಕ್ಕೂ ಹೊಸ ಹೊಸ ತಿರುವುಗಳು ಪಡೆದುಕೊಳ್ಳುತ್ತಿವೆ.

ಸ್ವಾಮಿಜಿ ಜತೆಗೆ ವಿಡಿಯೋ ಕಾಲ್ ಮಾಡಿರೋ ಮೂವರು ಯುವತಿರ ಈಗಾಗಳೇ ಬಲೆ ಬೀಸಿರುವ ಪೊಲೀಸರು ಮೂವರನ್ನ ಪತ್ಯೇಕವಾಗಿ ಅಜ್ಞಾತ ‌ಸ್ಥಳದಲ್ಲಿ ಇಟ್ಟು ಕುದೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಬಂಡೇಮಠದ ಸ್ವಾಮೀಜಿ ಆತ್ಮಹತ್ಯೆ ಕೇಸ್ಗೆ ಸಂಬಂಧಿಸಿದಂತೆ, ಕುದೂರು ಪೊಲೀಸರಿಂದ ಈಗಾಗಲೇ ಏಳು ಜನರನ್ನ ತೀವ್ರ ವಿಚಾರಣೆ ನಡೆಸಿ, ತನಿಖೆಗೆ ಒಳಪಡಿಸಿದ್ದಾರೆ. ಈ ಮಧ್ಯೆ ಸ್ವಾಮೀಜಿ ವಿಡಿಯೋ ಕಾಲ್​ನಲ್ಲಿ ಮಾತನಾಡುವ ವಿಡಿಯೋ ವೈರಲ್​ ಆಗುತ್ತಿದ್ದು, ಬಂಡೇಮಠದ ಸ್ವಾಮಿಜಿ ಯುವತಿಯರು ತೋಡಿದ ಕೆಡ್ಡಾಗೆ ಬಿದ್ರಾ ಎಂಬ ಮಾತುಗಳು ವ್ಯಕ್ತವಾಗುತ್ತಿವೆ.

ಇನ್ನು ನಿನ್ನೆಯಷ್ಟೇ ಡೆತ್ ನೋಟ್ ವಿಚಾರವಾಗಿ ಹಲವು ಸಂಶಯಗಳು ಹುಟ್ಟಿಕ್ಕೊಂಡಿತ್ತು. ಡೆತ್ ನೋಟ್ ನಲ್ಲಿ ಇರುವ ಕೆಲವರು ಹಾಗೂ ಮಠದವರನ್ನ ಕರೆದು ವಿಚಾರಣೆ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಕೆಲವರಿಂದ ಹೇಳಿಕೆ ಪಡೆದಿರೋ ಪೊಲೀಸರು, ಮತ್ತೊಂದೆಡೆ ಸ್ವಾಮೀಜಿಯ ಕಾಲ್ ಡಿಟೈಲ್ಸ್ ಪಡೆದ ಪೊಲೀಸರು. ಸ್ವಾಮಿಜಿ ರವರ ಸರಿಸುಮಾರು ಒಂದು ವರ್ಷದ ಕಾಲ್ ಡಿಟೈಲ್ಸ್ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರೋ ಪೊಲೀಸರು, ವಿಡಿಯೋ ಮಾಡಿದ ಇನ್ನುಳಿದ ಯುವತಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments