Saturday, August 30, 2025
HomeUncategorizedಪುನೀತ್ ಪರ್ವಕ್ಕೆ ಕೆಲವೇ ಗಂಟೆ ಬಾಕಿ; ಕಾರ್ಯಕ್ರಮಕ್ಕೆ ದಿಗ್ಗಜ ನಟರು ಭಾಗವಹಿಸೋ ಸಾಧ್ಯತೆ

ಪುನೀತ್ ಪರ್ವಕ್ಕೆ ಕೆಲವೇ ಗಂಟೆ ಬಾಕಿ; ಕಾರ್ಯಕ್ರಮಕ್ಕೆ ದಿಗ್ಗಜ ನಟರು ಭಾಗವಹಿಸೋ ಸಾಧ್ಯತೆ

ಬೆಂಗಳೂರು: ದಿವಂಗತ ನಟ ಪುನೀತ್ ರಾಜ್​ಕುಮಾರ್ ನಮ್ಮೆಲ್ಲರನ್ನು ಅಗಲಿ ಒಂದು ವರ್ಷ ಆಗುತ್ತಿದ್ದರೂ ಪ್ರತಿಯೊಂದು ಮನೆ-ಮನಗಳಲ್ಲಿ ನೆಲೆಸಿದ್ಧಾರೆ. ಅದಕ್ಕೆ ಪೂರಕವಾಗುವಂತೆ ಅಪ್ಪು ನಟನೆಯ ಕೊನೆಯ ಚಿತ್ರ ಗಂಧದ ಗುಡಿ ಚಿತ್ರದ ಪ್ರಿ-ರಿಲೀಸ್ ಸಡಗರವಾದ ಪುನೀತ ಪರ್ವ ಪುನೀತ್ ನೆನಪಿನಲ್ಲೇ ಇಂದು ಸಂಜೆ 6:30ಕ್ಕೆ ಅರಮನೆ ಮೈದಾನದಲ್ಲಿ ನಡೆಯಲಿದೆ.

ಇದು ಕನ್ನಡಿಗರ ಅಪ್ಪು ಸ್ಮರಣೆಯಾಗಿದ್ದು, ಪಾಸ್ ಇದ್ದವರಿಗೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಲಾಗಿದೆ. 1000 ವಿಐಪಿ ಹಾಗೂ 500 ವಿವಿಐಪಿಗಳಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ವಿವಿಐಪಿಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಇದ್ದು 30ಸಾವಿರಕ್ಕೂ ಹೆಚ್ಚು ಜನ ಆಗಮಿಸೋ ಸಾಧ್ಯತೆ ಇದೆ.

ಪುನೀತ್​ ಪರ್ವಕ್ಕೆ ಆಗಮಿಸೋ ಅಭಿಮಾನಿಗಳಿಗೆ ಸಂಜೆ 4 ರಿಂದ 6 ರವರೆಗೆ ತಿಂಡಿ ವ್ಯವಸ್ಥೆ ಮಾಡಲಾಗಿದೆ. 60 ಅಡಿ ಅಳತೆಯ ವೇದಿಕೆ ಅಪ್ಪು ಸ್ಮರಣೆಗೆ ಸಿದ್ದಗೊಂಡಿದೆ. ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಇನ್ನು ಈ ಕಾರ್ಯಕ್ರಮಕ್ಕೆ ತಮಿಳಿನಿಂದ ರಜನಿಕಾಂತ್, ಕಮಲ್ ಹಾಸನ್, ಸೂರ್ಯ, ವಿಶಾಲ್, ಬಾಲಿವುಡ್​ನಿಂದ ಅಮಿತಾ ಬಚ್ಚನ್​, ಸುನೀಲ್ ಶೆಟ್ಟಿ, ತೆಲುಗಿನಿಂದ ಚಿರಂಜೀವಿ, ನಂದಮೂರಿ ಬಾಲಕೃಷ್ಣ, ಅಲ್ಲು ಅರ್ಜುನ್ ಆಗಮಿಸೋ ಸಾಧ್ಯತೆಗಳಿವೆ.

RELATED ARTICLES
- Advertisment -
Google search engine

Most Popular

Recent Comments