Thursday, August 28, 2025
HomeUncategorizedಚೇತನ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದ ಉಪೇಂದ್ರ

ಚೇತನ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದ ಉಪೇಂದ್ರ

ಬೆಂಗಳೂರು: ಕಾಂತಾರ ಚಿತ್ರ ಕುರಿತು ಇತ್ತೀಚಿಗೆ ನಟ ಚೇತನ್ ವಿವಾದಾತ್ಮಕವಾಗಿ ಮಾತನಾಡಿರುವ ಕುರಿತು ನಟ ಉಪೇಂದ್ರ ಅವರು ಮಾತನಾಡಿದ್ದಾರೆ.

ಚೇತನ್​ ಅವರ ಈ ತರಹದ ವಿಚಾರಗಳನ್ನ ನಿರ್ಲಕ್ಷ್ಯ ಮಾಡಬೇಕು. ಈ ಬಗ್ಗೆ ಮಾತನಾಡಿದಷ್ಟೂ ವಿಷಯಗಳು ಬೆಳೆಯುತ್ತಾ ಹೋಗುತ್ತದೆ. ನಾವೇ ಬೆಂಕಿಗೆ ತುಪ್ಪ ಸುರಿಯುತ್ತಿದ್ದೀವಿ. ಈ ವಿಷಯ ಆದಷ್ಟು ಕಡೆಗಾಣಿಸಬೇಕು ಎಂದರು.

ವೈಯಕ್ತಿಕ ನಂಬಿಕೆಗಳನ್ನು ಇಟ್ಟುಕೊಂಡು ಸಾಮಾಜಿಕವಾಗಿ ಕಿತ್ತಾಡೋದು ಅಸಹ್ಯಕರವಾಗಿದೆ. ಇವತ್ತಿಗೂ ನಾವು ದೈವ ನಂಬಿಕೆಗಳನ್ನು ಬಹಳ ನಂಬುತ್ತೇವೆ. ನಮ್ಮ ನಮ್ಮ ಮನೆಯಲ್ಲಿ ನಮ್ಮ ತಂದೆ ಇವತ್ತಿಗೂ ನಾಗರಪೂಜೆ ಮಾಡುತ್ತಾರೆ. ನಂಬಿಕೆ ವಿಚಾರದಲ್ಲಿ ಹೆಚ್ಚು ಮಾತನಾಡಬಾರದು ಎಂದು ಉಪೇಂದ್ರ ಅವರು ತಮ್ಮ ನಿವಾಸದಲ್ಲಿ ಪರೋಕ್ಷವಾಗಿ ನಟ ಚೇತನ್​ ವಿರುದ್ಧ ಹರಿಹಾಯ್ದರು.

ನಟ ರಿಷಬ್‌ ಶೆಟ್ಟಿ ನಟನೆಯ ಕಾಂತಾರ ಚಿತ್ರ ವಿಶ್ವದಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರಿದ್ದೆಂದು ರಿಷಬ್‌ ಶೆಟ್ಟಿ ಹೇಳಿದ್ದಾರೆ. ಆದರೆ ಅದು ನಿಜವಲ್ಲ. ಪರವರ ಬಹುಜನ ಸಂಪ್ರದಾಯಗಳು, ವೈದಿಕ ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತಲೂ ಹಿಂದಿನದ್ದಾಗಿದೆ ಈ ವಿಷಯ, ಮೂಲ ನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲಾಗಲಿ ಅದರಾಚೆಯಾಗಲಿ ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ಕೇಳುತ್ತೇವೆ ಎಂದು ಚೇತನ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

RELATED ARTICLES
- Advertisment -
Google search engine

Most Popular

Recent Comments