Monday, August 25, 2025
Google search engine
HomeUncategorized75 ಡಿಜಿಟಲ್ ಬ್ಯಾಂಕಿಂಗ್ ಘಟಕಕ್ಕೆ ಮೋದಿ ಅಸ್ತು

75 ಡಿಜಿಟಲ್ ಬ್ಯಾಂಕಿಂಗ್ ಘಟಕಕ್ಕೆ ಮೋದಿ ಅಸ್ತು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ದೇಶದ 75 ಜಿಲ್ಲೆಗಳಿಗೆ ಸಮರ್ಪಿಸಿದರು.

ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ, ಸಾಮಾನ್ಯ ಜನರ ಜೀವನವನ್ನು ಸರಳಗೊಳಿಸಲು ಈಗ ನಡೆಯುತ್ತಿರುವ ಅಭಿಯಾನದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಘಟಕಗಳು ಹೆಚ್ಚು ಮಹತ್ವದ್ದಾಗಿದೆ. ಇದೊಂದು ವಿಶೇಷ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಸೌಲಭ್ಯವಾಗಿದ್ದು ಕನಿಷ್ಠ ಡಿಜಿಟಲ್ ಮೂಲಭೂತ ಸೌಕರ್ಯಗಳ ಮೂಲಕ ಗರಿಷ್ಠ ಸೇವೆಗಳನ್ನು ಜನರಿಗೆ ಒದಗಿಸಲಿದೆ ಎಂದರು. ಈ ಸೇವೆಗಳು ಕಾಗದದ ಕೆಲಸ ಮತ್ತು ಇತರ ತೊಂದರೆಗಳಿಂದ ಮುಕ್ತವಾಗಿರುತ್ತವೆ. ಇವುಗಳು ಸೌಲಭ್ಯಗಳು ಮತ್ತು ಡಿಜಿಟಲ್ ಬ್ಯಾಂಕಿಂಗ್ ಭದ್ರತೆಯನ್ನು ಹೊಂದಿರುತ್ತವೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ RBI ಗವರ್ನರ್ ಶಕ್ತಿಕಾಂತ್ ದಾಸ್, ಬ್ಯಾಂಕಿಂಗ್ ಸೇವೆಗಳಿಂದ ಡಿಜಿಟಲ್ ಮೂಲಸೌಕರ್ಯಗಳ ಲಭ್ಯತೆಯನ್ನು ಸುಧಾರಿಸಲು ಆರ್‌ಬಿಐ ಪ್ರಗತಿಪರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಸ್ಥಾಪಿಸಲು 2022-23 ಬಜೆಟ್‌ನಲ್ಲಿ ಘೋಷಣೆ ಮಾಡಿದ ನಂತರ, ಭಾರತೀಯ ಬ್ಯಾಂಕ್‌ಗಳ ಅಸನ್ಸ್, ವಾಣಿಜ್ಯ ಬ್ಯಾಂಕ್‌ಗಳು ಮತ್ತು ತಜ್ಞರನ್ನು ಸಂಪರ್ಕಿಸಿದ ನಂತರ ಆರ್‌ಬಿಐ ಮಾರ್ಗಸೂಚಿಗಳನ್ನು ಹೊರಡಿಸಿತು ಎಂದರು.

RELATED ARTICLES
- Advertisment -
Google search engine

Most Popular

Recent Comments