Sunday, August 24, 2025
Google search engine
HomeUncategorizedಅ.18ರಂದೇ ಪಾಲಿಕೆ ಚುನಾವಣೆ ನಡೆಸಲು 'ಹೈ' ಆರ್ಡರ್

ಅ.18ರಂದೇ ಪಾಲಿಕೆ ಚುನಾವಣೆ ನಡೆಸಲು ‘ಹೈ’ ಆರ್ಡರ್

ವಿಜಯಪುರ : ಅಧಿಕಾರವಧಿ ಮುಗಿದು ಮೂರೂವರೆ ವರ್ಷಗಳಾದರೂ ನೆನೆಗುದಿಗೆ ಬಿದ್ದಿದ್ದ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ.ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ನಗರದ ಕೆಲವರು ಕೋರ್ಟ್ ಮೊರೆ ಹೋಗಿದ್ದರು.ಅರ್ಜಿಯನ್ನು ಪರಿಗಣಿಸಿದ ಕೋರ್ಟ್‌ ಇದೇ 28ರಂದು ಚುನಾವಣೆ ನಡೆಸಲು ECಗೆ ಸೂಚನೆ ನೀಡಿತ್ತು. ಆದರೆ, ಈ ಆದೇಶಕ್ಕೆ ತಡೆಯಾಜ್ಞೆ ವಿಧಿಸುವಂತೆ ಕೋರಿ ಕೆಲ ಮಾಜಿ ಸದಸ್ಯರು ಹೈಕೋರ್ಟ್ ಬೆಂಚ್‌ಗೆ ಮನವಿ ಮಾಡಿದ್ದರು. ಆದರೆ ಸದಸ್ಯರ ಮನವಿಯನ್ನು ಪುರಸ್ಕರಿಸಲು ಹೈಕೋರ್ಟ್‌ ವಿಭಾಗೀಯ ಪೀಠ ಸ್ಪಷ್ಟವಾಗಿ ನಿರಾಕರಿಸಿದ್ದು, ಅ.28ರಂದೇ ಚುನಾವಣೆ ನಡೆಸುವಂತೆ ಸೂಚಿಸಿದೆ.

ಇನ್ನು ಪಾಲಿಕೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಜೋರಾಗಿದೆ. ತಮ್ಮ‌ ತಮ್ಮ ಪಕ್ಷದ ಮುಖಂಡರುಗಳು ಕಚೇರಿ‌, ಮನೆಗೆ ಹೋಗಿ ಟಿಕೇಟ್ ಗಾಗಿ ಟಿಕೇಟ್ ಆಕಾಂಕ್ಷಿಗಳು ದುಂಬಾಲು ಬಿದ್ದಿದ್ದಾರೆ. ಇದರ ಮದ್ಯೆ ಕೆಲವರು ಬಿ ಫಾರ್ಮ ಕೊಡುವ ಮುಂಚೆಯೇ ಶಕ್ತಿ ಪ್ರದರ್ಶನ ಮಾಡುವ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸುತ್ತಿದ್ದಾರೆ.

ಇನ್ನು ವಿಜಯಪುರ ನಗರದ 35 ವಾರ್ಡ್‌ಗಳಲ್ಲಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ಏರ್ಪಟ್ಟಿದ್ದು, ನಾಮಪತ್ರ ಸಲ್ಲಿಸಲು ಅ.17 ಕೊನೆ ದಿನವಾಗಿದೆ.

ಸುನೀಲ್ ಭಾಸ್ಕರ ಪವರ ಟಿವಿ ವಿಜಯಪುರ.

RELATED ARTICLES
- Advertisment -
Google search engine

Most Popular

Recent Comments