Tuesday, September 2, 2025
HomeUncategorizedಭಯೋತ್ಪಾದಕರ ಗುಂಡಿಗೆ ಮತ್ತೊಬ್ಬ ಕಾಶ್ಮೀರಿ ಪಂಡಿತ ಬಲಿ

ಭಯೋತ್ಪಾದಕರ ಗುಂಡಿಗೆ ಮತ್ತೊಬ್ಬ ಕಾಶ್ಮೀರಿ ಪಂಡಿತ ಬಲಿ

ಜಮ್ಮು ಕಾಶ್ಮೀರ: ಶೋಪಿಯಾನ್ ಜಿಲ್ಲೆಯಲ್ಲಿ ಶನಿವಾರ ಕಾಶ್ಮೀರಿ ಪಂಡಿತರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿರುವ ಘಟನೆ ಇಂದು ನಡೆದಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರ ಜಿಲ್ಲೆಯ ಚೌಧರಿ ಗುಂಡ್ ಪ್ರದೇಶದಲ್ಲಿನ ಅವರ ನಿವಾಸದ ಬಳಿ ಪುರನ್ ಕ್ರಿಶನ್ ಭಟ್ ಮೇಲೆ ದಾಳಿ ನಡೆಸಲಾಯಿತು. ಬಳಿಕ ಕ್ರಿಶನ್​ ಭಟ್​ರನ್ನ ಸ್ಥಳೀಯ ಶೋಪಿಯಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಇನ್ನು ಸಾವಿಗೀಡಾದ ಪುರನ್ ಕ್ರಿಶನ್ ಭಟ್ ಅವರಿಗೆ ಪ್ರಾಥಮಿಕ ಶಾಲೆಗೆ ತೆರಳುವ ಇಬ್ಬರು ಮಕ್ಕಳಿದ್ದಾರೆ. ಹಿರಿಯ ಮಗಳು 7 ನೇ ತರಗತಿಯಲ್ಲಿ ಓದುತ್ತಿದ್ದರೆ, ಕಿರಿಯ ಮಗ 5 ನೇ ತರಗತಿಗೆ ತೆರಳುತ್ತಿದ್ದಾನೆ ಎಂದು ಸಂಬಂಧಿಯೊಬ್ಬರು ಹೇಳಿದ್ದಾರೆ ಎಂದು ವರದಿಯಾಗಿವೆ.

ಇಂತಹ ದಾಳಿ ಮೂಲಕ ಉಗ್ರರು ಭಯದ ವಾತಾವರಣ ಸೃಷ್ಟಿಸಿದ್ದಾರೆ. ಮನೆ ಬಿಟ್ಟು ಹೊರಗೆ ತೆರಳಲು ನಮಗೆ ಭಯವಾಗುತ್ತಿದೆ ಎಂದು ಅಲ್ಲಿನ ಕಾಶ್ಮೀರಿ ಪಂಡಿತರು ಆತಂಕ ವ್ಯಕ್ತಪಡಿಸಿದರು.

 

RELATED ARTICLES
- Advertisment -
Google search engine

Most Popular

Recent Comments