Tuesday, September 9, 2025
HomeUncategorizedಅತ್ಯಾಚಾರಗೈದು ಕೊಲೆ; ಈ ಸ್ಥಿತಿ ಮತ್ಯಾವ ಕಂದಮ್ಮನಿಗೂ ಬಾರದಿರಲಿ - ಸಿದ್ದರಾಮಯ್ಯ

ಅತ್ಯಾಚಾರಗೈದು ಕೊಲೆ; ಈ ಸ್ಥಿತಿ ಮತ್ಯಾವ ಕಂದಮ್ಮನಿಗೂ ಬಾರದಿರಲಿ – ಸಿದ್ದರಾಮಯ್ಯ

ಬೆಂಗಳೂರು: ಪುಟ್ಟ ಬಾಲಕಿ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿರುವ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. 
ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ 10 ವರ್ಷದ ಪುಟ್ಟ ಬಾಲಕಿ ದಿವ್ಯಾ ಮೇಲೆ ಅತ್ಯಾಚಾರಗೈದು ಕೊಲೆ ವಿಚಾರಕ್ಕೆ ಇಂದು ಸಿದ್ದರಾಮಯ್ಯ ಅವರು ಟ್ವೀಟ್​ ಮಾಡಿ, ಈ ಪ್ರಕರಣದಲ್ಲಿ ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ, ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗೆ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹ ಮಾಡಿದರು.
ಮುಂದಿನ ದಿನಗಳಲ್ಲಿ ಪುಟ್ಟ ಮಕ್ಕಳ ಮೇಲೆ ಅತ್ಯಾಚಾರಗೈದು ಕೊಲೆ ಮಾಡುವಂತಹ ಸ್ಥಿತಿ ಮತ್ತಾವ ಕಂದಮ್ಮನಿಗೂ ಬಾರದಿರಲಿ. ದಿವ್ಯಾಳ ಕುಟುಂಬದ ಜತೆಗೆ ಈಗಾಗಲೇ ಜೊತೆ ಮಾತನಾಡಿ ಸಾಂತ್ವನ ಹೇಳುವ ಪ್ರಯತ್ನ ಮಾಡಿದ್ದೇನೆ ಎಂದರು.
RELATED ARTICLES
- Advertisment -
Google search engine

Most Popular

Recent Comments