Saturday, August 23, 2025
Google search engine
HomeUncategorizedರಸ್ತೆಗಿಳಿಯೋದಿಲ್ಲ ಓಲಾ-ಉಬರ್‌ ಸಂಸ್ಥೆಯ ಆಟೋಗಳು..!

ರಸ್ತೆಗಿಳಿಯೋದಿಲ್ಲ ಓಲಾ-ಉಬರ್‌ ಸಂಸ್ಥೆಯ ಆಟೋಗಳು..!

ಬೆಂಗಳೂರು : ಉಬರ್, ಓಲಾ ಆಟೋಗಳು ಇನ್ನು ಮುಂದೆ ಜಿಎಸ್​ಟಿ ಮತ್ತು ಆಟೋ ಬಾಡಿಗೆ ಸೇರಿ ಕಿ.ಮೀ. 30 ರೂ. ಪಡೆಯಬೇಕೆಂದು ಸಾರಿಗೆ ಇಲಾಖೆ ನಿರ್ದೇಶನ ನೀಡಿದೆ. ಸಾರಿಗೆ ಇಲಾಖೆಯ ಈ ನಿರ್ಧಾರಕ್ಕೆ ಉಬರ್​, ಓಲಾ ಕಂಪನಿಗಳು ಒಪ್ಪಿಗೆ ನೀಡಿವೆ ಎಂದು ಸಾರಿಗೆ ಇಲಾಖೆ ಆಯುಕ್ತ ಟಿ. ಹೆಚ್​. ಎಮ್​​ ಕುಮಾರ್​ ತಿಳಿಸಿದ್ರು
ರಾಜ್ಯ ಸರ್ಕಾರದಿಂದ ಬೈಕ್ ಟ್ಯಾಕ್ಸಿ ಅನುಮತಿ ಇಲ್ಲ. ನಡೆಸುತ್ತಿದ್ದರೇ ಅದು‌ ಅಕ್ರಮ. ಟ್ಯಾಕ್ಸಿ‌ ಅನುಮತಿ ಇಲ್ಲ. ಬುಧವಾರದಿಂದ ಓಲಾ, ಉಬರ್ ಆಟೋಗಳು ಜಿಎಸ್​ಟಿ ಸೇರಿ 30ರೂ ಪಡೆಯಬೇಕು. ನಿಗದಿಕ್ಕಿಂದ ಹೆಚ್ಚು ಹಣ ಪಡೆದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ.

ಓಲಾ, ಊಬರ್ ಗಳ ಲೈಸನ್ಸ್ 2021 ರಲ್ಲಿಯೇ ಮುಗಿದಿದ್ರು, ಅಕ್ರಮವಾಗಿ ನಗರದಲ್ಲಿ ಸೇವೆ ಕೊಡಲು ಸಾರಿಗೆ ಇಲಾಖೆಯ ಅಧಿಕಾರಿಗಳೇ ಅವಕಾಶ ಕೊಟ್ಟಿದ್ದಾರೆ. ಇದು ಸಾರಿಗೆ ಇಲಾಖೆ , ಓಲಾ, ಊಬರ್ ಕಂಪನಿಗಳಿಗೆ ಬ್ಯಾಕ್ ಡೋರ್ ನಿಂದ ಶ್ರೀರಕ್ಷೆ ನೀಡಿರೋ ಭಯಾನಕ ಸತ್ಯ ಬಯಲಿದೆ ಬಂದಿದೆ. ಓಲಾ, ಊಬರ್ ಆಟೋಗಳಿಗೆ ಅಟ್ಯಾಚ್ ಆಗಿರುವ ಬಗ್ಗೆ ನನ್ಗೆ ಮಾಹಿತಿನೇ ಇಲ್ಲ ಎಂದು ಖುದ್ದು ಸಾರಿಗೆ ಇಲಾಖೆಯ ಆಯುಕ್ತರೇ ಹೇಳಿದ್ದಾರೆ.

ಇನ್ನು ಆ್ಯಪ್ ಆಧಾರಿತ ಆಟೋಗಳು ರಸ್ತೆಗಿಳಿಯದಂತೆ ಎರಡು ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಒಂದೊಮ್ಮೆ ರಸ್ತೆಗಿಳಿದ್ರೆ, ಕಂಪನಿಗೆನೇ ದಂಡ ವಿಧಿಸಲಾಗುತ್ತೆ. ಇನ್ನೂ ಸಾರ್ವಜನಿಕರು ಓಲಾ, ಊಬರ್ ಆ್ಯಪ್ ನಲ್ಲಿ ಬುಕ್ ಮಾಡಬೇಡಿ ಎಂದು ಸಾರಿಗೆ ಆಯುಕ್ತರು ಮನವಿ ಮಾಡಿದ್ದಾರೆ.

ಇನ್ನು ಓಲಾ, ಉಬರ್ ಆಟೋ ಸೇವೆ ಪ್ರಾರಂಭಿಸಲು ಸರ್ಕಾರದಿಂದ ಅನುಮತಿ ಪಡೆಯಬೇಕು. ಅನುಮತಿ ಕೇಳಲು ಸಾರಿಗೆ ಇಲಾಖೆ ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚಿಸಲಿದೆ. ನಿಗದಿ ಮಾಡಿದ ದರಕ್ಕಿಂತ ಹೆಚ್ಚು ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಕೊಟ್ರು.

ಇನ್ನೂ ಸಭೆಗೆ ಬಂದಿದ್ದ ಓಲಾ, ಊಬರ್ ಕಂಪನಿಗಳ ಪ್ರತಿನಿಧಿಗಳು ಯಾವ್ದೇ ಪ್ರತಿಕ್ರಿಯೆ ನೀಡದೇ ಎಸ್ಕೇಪ್ ಆದ್ರು. ನಮ್ಮ ಕಂಪನಿಯವ್ರೇ ಮಾತನಾಡ್ತಾರೆ ಅಂತ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಪರಾರಿಯಾದ್ರು.

ಒಟ್ನಲ್ಲಿ ಸಾರಿಗೆ ಇಲಾಖೆಯ ಇವತ್ತಿನ ಸಭೆ ಹಲವು ಗೊಂದಲಗಳಲ್ಲಿ ಮುಕ್ತಾಯಗೊಂಡಿತು. ಆ್ಯಪ್ ಕಂಪನಿಗಳು ಲೈಸನ್ಸ್ ಮುಗಿದ ಬಳಿಕವೂ ರಾಜಾರೋಷವಾಗಿ ನಗರದಲ್ಲಿ ಓಡಾಡ್ತಿವೆ ಅಂದ್ರೆ ಸಾರಿಗೆ ಇಲಾಖೆಯ ಬೇಜವಾಬ್ದಾರಿ ಹಾಗೂ ಕಂಪನಿಗಳ ಜೊತೆ ಅಧಿಕಾರಿಗಳು ಶಾಮಿಲಾಗಿರೋದು ಸ್ಪಷ್ಟವಾಗಿ ಗೊತ್ತಾಗ್ತಿದೆ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES
- Advertisment -
Google search engine

Most Popular

Recent Comments