Monday, August 25, 2025
Google search engine
HomeUncategorizedSC/ST ಮೀಸಲಾತಿ ಹೆಚ್ಚಳದ ಕ್ರೆಡಿಟ್‌ ವಾರ್‌

SC/ST ಮೀಸಲಾತಿ ಹೆಚ್ಚಳದ ಕ್ರೆಡಿಟ್‌ ವಾರ್‌

ಬೆಂಗಳೂರು : ಮೊನ್ನೆಯಷ್ಟೇ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಎಸ್ಸಿ,ಎಸ್ಟಿ ಮೀಸಲಾತಿ ಹೆಚ್ಚಳದ ನಿರ್ಣಯಕೈಗೊಳ್ಳಲಾಗಿದೆ. ಸರ್ವ ಪಕ್ಷ ಸಭೆಯಲ್ಲಿ ತೆಗೆದುಕೊಂಡ ಸಲಹೆಗಳಂತೆಯೇ ಎಸ್ಸಿ ಸಮುದಾಯಗಳಿಗೆ ಶೇ.15 ರಿಂದ ಶೇ.17 ಹಾಗೂ ಎಸ್ಟಿ ಸಮುದಾಯಕ್ಕೆ ಶೇ.3 ರಿಂದ ಶೇ 7% ಮೀಸಲಾತಿ ಹೆಚ್ಚಳಕ್ಕೆ ಒಪ್ಪಿಗೆ ಪಡೆಯಲಾಗಿದೆ. ಕ್ಯಾಬಿನೆಟ್ ಸಮ್ಮತಿಯ ನಂತ್ರ ಮೊದಲ ಹಂತದ ಪ್ರಕ್ರಿಯೇನೋ ಮುಗಿದಿದೆ. ಆದ್ರೆ ಅನುಷ್ಠಾನವಾಗಬೇಕಾಗಿದೆ. ಇದಕ್ಕಾಗಿ ವಿಧಾನಮಂಡಲ ಅಧಿವೇಶನ ನಡೆಯಬೇಕು. ಉಭಯಸನದಗಳ ಒಪ್ಪಿಗೆ ಪಡೆಯಬೇಕು. ನಂತ್ರ ರಾಷ್ಟ್ರಪತಿಗಳ ಅಂಗೀಕಾರವಾಗಬೇಕು. ಗೆಜೆಟ್ ಆದ ಬಳಿಕ ಅದು ಅಧಿಕೃತ ಕಾಯ್ದೆಯಾಗಿ ಜಾರಿಗೆ ಬರಲಿದೆ. ಆದ್ರೆ ಇನ್ನೂ ಮೊದಲ ಹಂತದ ಪ್ರಕ್ರಿಯೆಯಲ್ಲೇ ರಾಜ್ಯದ ಮೂರು ರಾಜಕೀಯ ಪಕ್ಷಗಳ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ. ಚುನಾವಣೆ ಹತ್ತಿರವಾಗ್ತಿರೋದ್ರಿಂದ ಅದರ ಲಾಭ ಪಡೆಯಲು ನಾವು ಮಾಡಿದ್ದು, ನಾವು ತಂದಿದ್ದು, ನಾವು ಪ್ರಯತ್ನಿಸಿದ್ದು ಎಂಬ ಟಾಕ್ ವಾರ್ ಜೋರಾಗ್ತಿದೆ.

ಇಲ್ಲಿಯವರೆಗೆ ಯಾರೂ ಇದನ್ನು ಮಾಡಲಿಲ್ಲ. ಗಟ್ಟಿ ಗುಂಡಿಗೆ ಇದ್ರೆ ಮಾತ್ರ ಮಾಡೋಕೆ ಸಾಧ್ಯ. ಒಬಿಸಿಯಿಂದ ಎಸ್ಟಿಗೆ ವಾಲ್ಮೀಕಿ ಸಮುದಾಯ ತಂದಿದ್ದು ರಾಮಕೃಷ್ಣಹೆಗಡೆ..ಮೀಸಲಾತಿ ಹೆಚ್ಚಳ ಮಾಡಿದ್ದು ನಾವು ಅಂತ ಬಿಜೆಪಿ ನಾಯಕರು ತೊಡೆ ತಟ್ಟುತ್ತಿದ್ದಾರೆ. ಹಿಂದಿನಿಂದಲೂ ಕೊಡ್ಬೇಕು ಅಂತ ಪ್ರಯತ್ನ ನಡೆಸಿದ್ದು ನಾವು. ಕಾನೂನಾತ್ಮಕವಾಗಿ ಪರಿಶೀಲಿಸಿದ್ದು ನಾವು. ಸರ್ವಪಕ್ಷ ಸಭೆಯಲ್ಲಿ ಡಿಮ್ಯಾಂಡ್ ಮಾಡಿದ್ದೂ ನಾವೇ ಅಂತ ಕಾಂಗ್ರೆಸ್ ನಾಯಕರು ಶುರವಚ್ಚಿಕೊಂಡಿದ್ದಾರೆ.. ನಿಮ್ಮಿಬ್ಬರಿಗಿಂತ ಮೊದಲೇ ಮೀಸಲಾತಿ ಹೆಚ್ಚಳಕ್ಕೆ ನಿರ್ಧರಿಸಿದ್ದವರು ನಾವು.. ಇದಕ್ಕಾಗಿ ನ್ಯಾ.ನಾಗಮೋಹನ್ ದಾಸ್ ಕಮಿಟಿಯನ್ನ ರಚಿಸಿದ್ದು ನಾವೇ..ಇದ್ರ ಮೊದಲ ಕ್ರೆಡಿಟ್ ನಮಗೇ ಸಿಗ್ಬೇಕು ಅಂತ ಜೆಡಿಎಸ್ ನಾಯಕರು ಸದ್ದು ಮಾಡ್ತಿದ್ದಾರೆ..

ಇನ್ನೂ ಮೀಸಲಾತಿ ಹೆಚ್ಚಳದ ಕ್ರೆಡಿಟ್ ಪಡೆಯೋಕೆ ಸರ್ಕಾರ ಹಾಗೂ ಪ್ರತಿಪಕ್ಷಗಳು ಒಂದು ಕಡೆ ಪೈಪೋಟಿ ನಡೆಸಿದ್ರೆ, ವಾಲ್ಮೀಕಿ ಸಮುದಾಯದ ನಾಯಕರಲ್ಲೂ ಕ್ರೆಡಿಟ್ ತೆಗೆದುಕೊಳ್ಳುವ ಪ್ರಯತ್ನಗಳು ನಡೆದಿವೆ. ಸಮುದಾಯದ ಸಚಿವ ಶ್ರೀರಾಮುಲು ಹಾಗೂ ರಾಜುಗೌಡ ನಡುವೆ ಪೈಪೋಟಿ ಶುರುವಾಗಿದೆ.. ನಾವೇ ಸರ್ಕಾರದ ಮೇಲೆ ಒತ್ತಡ ತಂದು ಮಾಡಿಸಿದ್ದು ಅಂತ ಓಡಾಡ್ತಿದ್ದಾರೆ. ಸಮುದಾಯಕ್ಕೆ ನಾವೇ ಮಾಡಿಸಿದ್ದು ಅನ್ನೋ ಸಂದೇಶ ಹೋಗ್ಬೇಕು. ಸಮುದಾಯ ನಮ್ಮ ಮಾತನ್ನ ಕೇಳ್ಬೇಕು ಅನ್ನೋ ಲೆಕ್ಕಾಚಾರದಲ್ಲಿದ್ದಾರೆ.

ಚುನಾವಣೆಯಲ್ಲೂ ನಮಗೆ ಇದು ಪ್ಲಸ್ ಆಗ್ಬೇಕು ಅಂತ ಬಹಳ ಜೋರಾಗಿಯೇ ಹೇಳಿಕೆಗಳ ಮೇಲೆ ಹೇಳಿಕೆ ಕೊಡ್ತಿದ್ದಾರೆ.. ಪಟ್ಟು ಬಿಡದೆ ಹೋರಾಟವನ್ನ ಮಾಡಿದವ್ರು ಸಮುದಾಯದ ಗುರು ಪ್ರಸನ್ನಾನಂದರು. ಸುದೀರ್ಘ 242 ದಿನಗಳ ಕಾಲ ಧರಣಿ ಮಾಡುವ ಮೂಲಕ ಸರ್ಕಾರದ ಮೇಲೆ ಒತ್ತಡ ತಂದವರು ಶ್ರೀಗಳು. ಒಂದು ದಿನವೂ ಧರಣಿಗೆ ಸಾಥ್ ನೀಡದ ನಾಯಕರು ಈಗ ಮಾತ್ರ ತಾವು ಮಾಡಿದ್ದು, ನಾವೇ ಒತ್ತಡ ತಂದಿದ್ದು ಅಂತ ಓಡಾಡ್ತಿದ್ದಾರೆಂಬ ಮಾತು ಅವರ ಸಮಾಜದಲ್ಲಿ ಕೇಳಿಬರ್ತಿದೆ.

ಒಟ್ನಲ್ಲಿ ಎಸ್ಸಿ,ಎಸ್ಟಿ ಮೀಸಲಾತಿ ಹೆಚ್ಚಳದ ಕ್ರೆಡಿಟ್ ವಾರ್ ಜೋರಾಗಿದೆ..ಇನ್ನೂ ಅನುಷ್ಟಾನವೇ ಆಗಿಲ್ಲ. ಆಗಲೇ ಬಿಜೆಪಿ ನಾಯಕರು ನಾವು ಮಾಡಿದ್ದು ಅಂತ ಓಡಾಡ್ತಿದ್ದಾರೆ.. ಚುನಾವಣೆಯಲ್ಲಿ ಇದ್ರ ಲಾಭ ಪಡೆಯೋಕೆ ಮುಂದಾಗಿದ್ದಾರೆ.. ಮತ್ತೊಂದು ಕಡೆ ನಾಗಮೋಹನ್ ದಾಸ್ ಕಮಿಟಿ ಮಾಡಿದ್ದು ನಾವು, ಸರ್ವಪಕ್ಷ ಸಭೆಯಲ್ಲಿ ಧ್ವನಿ ಎತ್ತಿದ್ದು ನಾವು ಅಂತ ಜೆಡಿಎಸ್, ಕಾಂಗ್ರೆಸ್ ಕೂಡ ಓಡಾಡ್ತಿವೆ..ಆದ್ರೆ, ಸಮುದಾಯದ ಜನ ಮಾತ್ರ ಅನುಷ್ಟಾನ ಯಾವಾಗ ಅಂತ ತಲೆಮೇಲೆ ಕೈಹೊತ್ತು ಎದುರು ನೋಡ್ತಿದ್ದಾರೆ.

ರಾಘವೇಂದ್ರ ವಿಎನ್ ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು

RELATED ARTICLES
- Advertisment -
Google search engine

Most Popular

Recent Comments