Thursday, August 28, 2025
HomeUncategorizedಸಾರಿಗೆ ಸಚಿವರ ಮಾತಿಗೆ ಕ್ಯಾರೆ ಎನ್ನದ ಒಲಾ ಊಬರ್​​​ಗಳು

ಸಾರಿಗೆ ಸಚಿವರ ಮಾತಿಗೆ ಕ್ಯಾರೆ ಎನ್ನದ ಒಲಾ ಊಬರ್​​​ಗಳು

ಬೆಂಗಳೂರು : ಸಾರಿಗೆ ಇಲಾಖೆಯ ನೋಟಿಸ್‌ಗೆ ಈ ಕಂಪನಿಗಳು ಯಾವುದೇ ಕಿಮ್ಮತ್ತು ನೀಡಿದಂತಿಲ್ಲ. ಆಟೋರಿಕ್ಷಾ ಸೇವೆ ಶನಿವಾರವೂ ಸರಾಗವಾಗಿ ನಡೆಯಿತು. ನೋಟಿಸ್ ನೀಡಿದ ಬಳಿಕವೂ ಸೇವೆ ಮುಂದುವರಿದರೆ ಅಂತಹ ಆಲೋರಿಗಳನ್ನು ಜಪ್ತಿ ಮಾಡಲಾಗುವುದು ಎಂದು ಸಾರಿಗೆ ಸಚಿವರು ಹೇಳಿಕೆ ನೀಡಿದ್ದಾರೆ. ಆದರೆ, ನಗರದಲ್ಲಿ ಯಾವುದೇ ಆಟೋರಿಕ್ಷಾವನ್ನೂ ಜಪ್ತಿ ಮಾಡಿದ್ದು ಕಾಣಿಸಲಿಲ್ಲ.

ಅಲ್ಲದೇ ಎಂದಿನಂತೆ ದುಬಾರಿ ದರ ಕೂಡ ಮುಂದುವರಿದಿತ್ತು. ಎಂ.ಜಿ.ರಸ್ತೆಯಿಂದ ಕಾರ್ಪೊರೇಷನ್ ವೃತ್ತಕ್ಕೆ ಆಟೋರಿಕ್ಷಾದಲ್ಲಿ ಪ್ರಯಾಣ ದರ 108 ಇದ್ದರೆ, ಟ್ಯಾಕ್ಸಿ ಮಿನಿ ಪ್ರಯಾಣ ದರ ಇನ್ನು ಕಾದು ಪ್ರಯಾಣಕ್ಕಿಂತ ಆಟೋರಿಕ್ಷಾ ಪ್ರಯಾಣವೇ ದುಬಾರಿಯಾಗಿತ್ತು. ಯಾವುದೇ ಮಾರ್ಗದಲ್ಲಿ ಪ್ರಯಾಣಿಸಲು ಪ್ರಯತ್ನಿಸಿದರೂ ಅಟೋರಿಕ್ಷಾ ಪ್ರಯಾಣ ದರವೇ ಹೆಚ್ಚಿತ್ತು.

ಕಾನೂನುಬಾಹಿರ ಅಲ್ಲ ಡ್ಯಾಪಿ ಕಂಪನಿಯ ಯಾವುದೇ ಕಾರ್ಯಾಚರಣೆ ಕಾನೂನುಬಾಹಿರವಾಗಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಸಾರಿಗೆ ಇಲಾಖೆಯಿಂದ ನಮಗೆ ನೋಟಿಸ್ ಬಂದಿದ್ದು, ನಿಗದಿತ ಸಮಯದೊಳಗೆ ನಾವು ಪ್ರತಿಕ್ರಿಯಿಸುತ್ತೇವೆ. ಆಟೋಟ್ಯಾಕ್ಸಿ ಪ್ರಯಾಣ ದರದಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬುದು ಸುಳ್ಳು ಆರೋಪ, ನಮ್ಮ ಎಲ್ಲಾ ದರಗಳು ಸರ್ಕಾರ ನಿರ್ಧರಿಸಿದ ದರಗಳಿಗೆ ಅನುಗುಣವಾಗಿದೆ. ಕಾನೂನು ಅಡಿಯಲ್ಲಿಯೇ ಸೇವೆ ಮುಂದುವರಿಯಲಿದೆ’ ಎಂದು ವಿವರಿಸಿದೆ.

ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುತ್ತಿರುವ ಕಂಪನಿಗಳಿಗೆ ಪರವಾನಗಿ ನೀಡುವಾಗ ಕೆಲವು ಷರತ್ತುಗಳನ್ನು ವಿಧಿಸಲಾಗಿದ್ದು, ಅವುಗಳನ್ನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸುವಂತೆ ನೋಟಿಸ್ ನೀಡಿದ ಬಳಿಕವೂ ಸೇವೆ ಮುಂದುವರಿಸಿದ್ದರೆ ಅಂತಹ ವಾಹನಗಳನ್ನು ಜಪ್ತಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments