Thursday, September 4, 2025
HomeUncategorizedಮೀಸಲಾತಿ ಹೆಚ್ಚಳದಿಂದ ನಮಗೆ ಎಫೆಕ್ಟ್ ಆಗಲ್ಲ : ಹೆಚ್​ಡಿಕೆ

ಮೀಸಲಾತಿ ಹೆಚ್ಚಳದಿಂದ ನಮಗೆ ಎಫೆಕ್ಟ್ ಆಗಲ್ಲ : ಹೆಚ್​ಡಿಕೆ

ಮೈಸೂರು : SC, ST ಸಮುದಾಯದ ಮೀಸಲಾತಿ ಹೆಚ್ಚಳ ವಿಚಾರಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ‌ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳ ಮಾಡಿರುವುದರಿಂದ ಚುನಾವಣೆಗೆ ಮತ್ತು ಯಾವ ಪಕ್ಷಕ್ಕೂ ಪ್ಲಸ್ ಆಗಲ್ಲ. ಈ ಹಿಂದೆಯೇ ಮಾಜಿ ಪ್ರಧಾನಿ ದೇವೇಗೌಡರು ಮೀಸಲಾತಿ ದೊರಕಿಸಿಕೊಟ್ಟಿದ್ದರು. ಆ ಕಾರಣಕ್ಕಾಗಿ MLA, MPಗಳು ಮೀಸಲಾತಿ ಅವಕಾಶ ಪಡೆದುಕೊಂಡರು. ಆ ಕಾರಣಕ್ಕೆ ವಿಧಾನಸಭೆ , ಲೋಕಸಭೆ ಪ್ರವೇಶ ಮಾಡಿದ್ರು. ದೇವೇಗೌಡರನ್ನೇ ನೆನೆಸಿಕೊಳ್ಳುವ ಕೆಲಸ ಆಗಿಲ್ಲ. ಮೀಸಲಾತಿ ಅಷ್ಟೇ ಅಲ್ಲ ಭಾರತ್​ ಜೋಡೊದಿಂದಲೂ ನಮಗೆ ಯಾವುದೇ ಎಫೆಕ್ಟ್ ಆಗಲ್ಲ ಎಂದರು.

ಇನ್ನು, ಜೆಡಿಎಸ್ ಶಕ್ತಿ ಏನೆಂದು ಈ ಚುನಾವಣೆಯಲ್ಲಿ ತೋರಿಸ್ತೀವಿ. ಇನ್ನು ಟಿಪ್ಪು ಎಕ್ಸ್​​ಪ್ರೆಸ್​ಗೆ ಒಡೆಯರ್‌ ಹೆಸರು ನಾಮಕರಣ ವಿಚಾರ ಪ್ರತಿಕ್ರಿಯಿಸಿದರು. ಪ್ರತಾಪಸಿಂಹ ಅವರನ್ನ ಎಂಪಿ ಮಾಡಿರುವುದು ಹೆಸರು ಬದಲಾವಣೆಗೆ ಮಾಡಲು ಅಲ್ಲ. ಇನ್ನೂ ಸಾಕಷ್ಟು ಸಮಸ್ಯೆಗಳು ಜ್ವಲಂತವಾಗಿವೆ. ಅದರ ಬಗ್ಗೆ ಎಂಪಿ‌ ಗಮನ ಹರಿಸಲಿ. ಪ್ರವಾಹಪೀಡಿತರಿಗೆ, ಮಳೆ ಹಾನಿ ಸಂತ್ರಸ್ತರ ಬಗ್ಗೆ ಗಮನ ಹರಿಸಲಿ. ಇದ್ಯಾವುದೋ‌ ಹೆಸರು ಬದಲಿಸಿರುವುದೇ ಮುಖ್ಯವಲ್ಲ. ಮೊದಲು ಸಮಸ್ಯೆಗಳ ಬಗ್ಗೆ ಗಮನಹರಿಸಲಿ ಎಂದು ಪ್ರತಾಪ್​ ಸಿಂಹ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ‌ ಕಿಡಿಕಾರಿದರು.

RELATED ARTICLES
- Advertisment -
Google search engine

Most Popular

Recent Comments