Saturday, August 23, 2025
Google search engine
HomeUncategorizedಮದರಸಾಗೆ ನುಗ್ಗಿ ಹಿಂದೂಗಳ ಪೂಜೆ; 9 ಜನರ ವಿರುದ್ಧ FIR ದಾಖಲು

ಮದರಸಾಗೆ ನುಗ್ಗಿ ಹಿಂದೂಗಳ ಪೂಜೆ; 9 ಜನರ ವಿರುದ್ಧ FIR ದಾಖಲು

ಬೀದರ್; ದಸರಾ ಮೆರವಣಿಗೆ ವೇಳೆ ಮಹಮ್ಮದ ಗವಾನ್ ಮದರಸಾಗೆ ನುಗ್ಗಿ ಬುಧವಾರ ಹಿಂದುಗಳ ಪೂಜೆ ಹಿನ್ನಲೆಯಲ್ಲಿ 9 ಜನ ಹಿಂದೂಗಳ ಮೇಲೆ ಎಫ್​ಐಆರ್​ ದಾಖಲಾಗಿದೆ.

ಪ್ರತಿ ಬಾರಿ ಬೀದರ್ ನಗರದ ಓಲ್ಡ್ ಸಿಟಿಯಲ್ಲಿರುವ ಮಹ್ಮದ್ ಗವಾನ ಹೊರಗಡೆ ದೇವಿ ಪೂಜೆ ಮಾಡುತ್ತಿದ್ದ ಹಿಂದೂಗಳು, ಅದರಂತೆ ಭವಾನಿ ಫಲಕ್ಕಿ ಮೆರವಣಿಗೆ ಪೊಲೀಸ್ ಭದ್ರತೆ ಇದ್ದರೂ ಮಹಮ್ಮದ ಗವಾನ್ ಮದರಸಾಗೆ ನುಗ್ಗಿ ಹಿಂದೂಗಳು ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದ್ದರು.

ಮದರಾಸಾ ಲಾಕ್ ಮುರಿದು, ಸೆಕ್ಯೂರಿಟಿ ಮೇಲೆ ಹಲ್ಲೆಗೆ ಯತ್ನ ಮಾಡಿ ಸಮಾಜದಲ್ಲಿ ಶಾಂತಿ ಕಡಲು ಯತ್ನಸಿದ್ದಾರೆ ಎಂದು ಮಹಮ್ಮದ್ ಶೆಫಿಯೋದ್ದಿನ್ ಎಂಬ ಮುಸ್ಲಿಂ ವ್ಯಕ್ತಿಯಿಂದ ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಮೇಲೆ ಎಫ್​ಐಆರ್​ ದಾಖಲು ಮಾಡಲಾಗಿದೆ.

ಇನ್ನು ಪ್ರಕರಣ ದಾಖಲಾಗುತ್ತಿದ್ದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು 4 ಜನ ಆರೋಪಿಗಳನ್ನು ಬಂಧಿಸಿರುವ ಮಾಹಿತಿ ಇದೆ.

1460 ರ ದಶಕದಲ್ಲಿ ನಿರ್ಮಿಸಲಾದ ಬೀದರ್‌ನಲ್ಲಿರುವ ಮಹ್ಮದ್ ಗವಾನ್ ಮದರಸಾವು ಭಾರತೀಯ ಪುರಾತತ್ವ ಸಮೀಕ್ಷೆಯ ಅಡಿಯಲ್ಲಿ ಬರುತ್ತದೆ. ಪರಂಪರೆಯ ರಚನೆಯು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕಗಳ ಪಟ್ಟಿಯಲ್ಲಿದೆ.

ಬೀದರ್‌ನ ಹಲವಾರು ಮುಸ್ಲಿಂ ಸಂಘಟನೆಗಳು ಘಟನೆಯನ್ನು ಖಂಡಿಸಿ, ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸಿವೆ. ಆರೋಪಿಗಳನ್ನು ಬಂಧಿಸದಿದ್ದಲ್ಲಿ ಶುಕ್ರವಾರದ ಪ್ರಾರ್ಥನೆ ಬಳಿಕ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೇ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಘಟನೆಯ ಬಗ್ಗೆ ವಿಡಿಯೋ ಶೇರ್​ ಮಾಡಿಕೊಂಡು, ರಾಜ್ಯದ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಮುಸ್ಲಿಮರನ್ನು ಕೀಳಾಗಿಸುವುದಕ್ಕಾಗಿ ಇಂತಹ ಘಟನೆಗಳನ್ನು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿದರು.

RELATED ARTICLES
- Advertisment -
Google search engine

Most Popular

Recent Comments